8

ಹೊರಗಡೆ ಔಷಧಗಳನ್ನು ಖರೀದಿಸಿಕೊಳ್ಳಲು ಚೀಟಿ ಬರೆಯದಂತೆ ಜಿಲ್ಲಾಧಿಕಾರಿ ಸೂಚನೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 23- ಪಟ್ಟಣದಲ್ಲಿನ ಸರ್ಕಾರಿ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸ್ವೀಕೃತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಅನಿರೀಕ್ಷಿತವಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಎಲ್ಲಾ ವೈದ್ಯರೊಂದಿಗೆ ಚರ್ಚಿಸಿ ಯಾವುದೇ ಕಾರಣಕ್ಕೂ ರೋಗಿಗಳಿಗೆ ಹೊರಗಡೆ ಔಷಧಗಳನ್ನು ಖರೀದಿಸಿಕೊಳ್ಳಲು ತಿಳಿಸದಂತೆ & ಚೀಟಿ ಬರೆಯದಂತೆ ಸೂಚನೆ ನೀಡಿದರು.

ಆಸ್ಪತ್ರೆಯ ಕೌಂಟರ್ ನಲ್ಲಿ ಜಾಸ್ತಿ ಜನರಿರುವುದು ಕಂಡುಂದಿದ್ದು ಕೂಡಲೇ ಹೆಚ್ಚುವರಿ ಕೌಂಟರ್ ವ್ಯವಸ್ಥೆ ಮಾಡಲು ಹಾಗೂ ಆಸ್ಪತ್ರೆಯ ಹೊರ & ಒಳಾಂಗಣದಲ್ಲಿ ಆಸ್ಪತ್ರೆಗೆ ಆಗಮಿಸಿದ ಸಾರ್ವಜನಿಕರು ಕೂಡಲು ಸೂಕ್ತ ಆಸನದ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಆಸ್ಪತ್ರೆಯ ವಾರ್ಡ್ಗಳಿಗೆ ಭೇಟಿ ನೀಡಿ ವಾರ್ಡ್ಗಳಲ್ಲಿನ ಸಣ್ಣ ಪುಟ್ಟ ದುರಸ್ಥಿಗಳನ್ನು ಒಂದು ತಿಂಗಳಿನೊಳಗೆ ಸರಿಪಡಿಸುವಂತೆ ನಿರ್ದೇಶಿಸಿ, ಔಷದಿಗಳು ಎಷ್ಟೇ ದುಬಾರಿ ಇದ್ದರೂ ಆಸ್ಪತ್ರೆಯಿಂದಲೇ ಕೊಡಿ ಇಲಾಖೆಯಲ್ಲಿ ಹಣ ಕೊಡೋಣ ಎಂದು ಸ್ಥಳದಲ್ಲಿದ್ದ ಜಿಲ್ಲಾ ವೈದ್ಯಧಿಕಾರಿ ಡಾ. ಶಂಕರ್ ನಾಯ್ಕ್ ರವರಿಗೆ ತಿಳಿಸಿದರು.

ಅವಶ್ಯವಿರುವ ಎಲ್ಲಾ ಔಷಧಗಳನ್ನು ಹಾಗೂ ಉಪಕರಣಗಳನ್ನು 15 ದಿನಗಳೊಳಗಾಗಿ ನಿಯಮಾನುಸಾರ ಖರೀದಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಂತೆ ತಿಳಿಸಿದರು.

ಶೀಘ್ರದಲ್ಲಿ OPD ಯನ್ನು ಆಸ್ಪತ್ರೆ ಕಟ್ಟಡದ ಹೊರಾಂಗಣಕ್ಕೆ ಸ್ಥಳಾಂತರಿಸಿ ಒಳಗಿನ ಜನಸಂದಣಿಯನ್ನು ಕಡಿಮೆ ಮಾಡುವುದು ಹಾಗೂ 10 ಬೆಡ್ ಗಳನ್ನೊಳಗೊಂಡ ಐಸಿಯು ಘಟಕವನ್ನು ಸ್ಥಾಪಿಸಲು ತಿಳಿಸಿದ್ದು. ಸಾರ್ವಜನಿಕರು ಆಸ್ಪತ್ರೆಯ ಎಲ್ಲಾ ಸದುಪಯೋಗಪಡಿಸಿಕೊಳ್ಳುವಂತೆ ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿಗಳು ಕೋರಿದರು.

ಈ ಸಂಧರ್ಭದಲ್ಲಿ ಜಿಲ್ಲಾ ವೈದ್ಯಧಿಕಾರಿ ಡಾ. ಶಂಕರ್ ನಾಯ್ಕ್, ಆಸ್ಪತ್ರೆಯ ವೈದ್ಯರು, ಔಷದ ವಿತರಿಸುವ ಸಿಬ್ಬಂದಿಗಳು ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!