
ರ‍್ಯಾಗಿಂಗ್ ಎಂಬುದು ಅಕ್ಷಮ್ಯ ಅಪರಾಧ : ಪ್ರೊ.ತಿಪ್ಪೇರುದ್ರಪ್ಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 12- ವಿಶ್ವವಿದ್ಯಾಲಯದ ಆವರಣದಲ್ಲಿ ರ‍್ಯಾಗಿಂಗ್ ಮಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ಇದನ್ನು ಮಾಡಿದ ಮತ್ತು ಪ್ರಚೋಧಿಸಿದವರಿಗೆ ಕಾನೂನಿನಡಿ ಜಾಮೀನು ರಹಿತ ಬಂಧನ ಶಿಕ್ಷೆ ಇದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ತಿಪ್ಪೇರುದ್ರಪ್ಪ.ಜೆ ಅವರು ಹೇಳಿದರು.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸೂಚನೆಯಂತೆ ವಿವಿಯ ಆ್ಯಂಟಿ ರ‍್ಯಾಗಿಂಗ್ ಕೋಶದ ವತಿಯಿಂದ ವಿದ್ಯಾರ್ಥಿಗಳಲ್ಲಿ ರ‍್ಯಾಗಿಂಗ್ ವಿರುದ್ಧ ಅರಿವು ಮೂಡಿಸಲು ವಿವಿ ಯ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ಆ್ಯಂಟಿ ರ‍್ಯಾಗಿಂಗ್ ವಾರಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರ‍್ಯಾಗಿಂಗ್ ಎಂಬ ಪಿಡುಗನ್ನು ತೊಡೆದುಹಾಕಲು ಎಲ್ಲ ವಿದ್ಯಾರ್ಥಿಗಳು ಸೇನಾನಿಗಳಾಗಬೇಕು. ರ‍್ಯಾಗಿಂಗ್‌ಗೆ ಒಳಪಡುವ ವ್ಯಕ್ತಿಯಷ್ಟೆ ಅಲ್ಲದೇ ಅದನ್ನು ನೋಡಿರುವ ವಿದ್ಯಾರ್ಥಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯಿಂದ ಘೋಷಿಸಲ್ಪಟ್ಟಿರುವ ಅಂತರಾಷ್ಟ್ರೀಯ ಯುವ ದಿನ (ಆಗಸ್ಟ್ 12) ವನ್ನು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ‘ಮಾದಕ ದ್ರವ್ಯ ವ್ಯಸನ ಮುಕ್ತ ಭಾರತ’ ಎಂಬ ಪ್ರತಿಜ್ಞೆಯನ್ನು ರಾಜ್ಯಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೋಹನ್ ದಾಸ್ ಅವರು ಬೋಧಿಸಿದರು.
ಕಾರ್ಯಕ್ರಮದಲ್ಲಿ ವಿವಿ ಯ ಕುಲಸಚಿವರಾದ ರುದ್ರೇಶ್.ಎಸ್.ಎನ್., ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ.ಗೌರಿ ಮಾಣಿಕ್ ಮಾನಸ, ಕಾನೂನು ನಿಕಾಯದ ಡೀನರಾದ ಡಾ.ಕೃಷ್ಣ ಭಾರದ್ವಾಜ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಮಾರಣ್ಣ, ಪ್ರೊ.ಅರುಣ್ ಕುಮಾರ್ ಲಗಶೆಟ್ಟಿ, ಆ್ಯಂಟಿ ರ‍್ಯಾಗಿಂಗ್ ಕೋಶದ ಸಂಯೋಜಕರಾದ ಡಾ.ವಿರೇಂದ್ರ ಕುಮಾರ್, ಎನ್‌ಎಸ್‌ಎಸ್ ಸಂಯೋಜಕರಾದ ಡಾ.ಕುಮಾರ್, ಯುವ ರೆಡ್ ಕ್ರಾಸ್ ಸಂಯೋಜಕರಾದ ಡಾ.ರಾಜೇಂದ್ರ ಪ್ರಸಾದ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.