ತಂಬಾಕು ನಶಾ ಮುಕ್ತ ಕಾರ್ಯಕ್ರಮ ಪ್ರತಿಜ್ಞಾ ವಿಧಿ ಸ್ವೀಕಾರ
ಕರುನಾಡ ಬೆಳಗು ಸುದ್ದಿ
ಕುಕನೂರು, 12- ತಾಲೂಕಿನ ಮಂಡಲಗಿರಿ ಸರ್ಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ನಶಾಮುಕ್ತ ತಂಬಾಕು ಮುಕ್ತ ಭಾರತ ಅಭಿಯಾನ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ನಿಯೋಜಿತ ಶಿಕ್ಷಕರಾದ ಶ್ರೀ ರವೀಂದ್ರ ರಾಜೂರು, ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತರಾದ ಶಂಭುಲಿಂಗಯ್ಯ ಹಿರೇಮಠ, ಶಾಲಾ ಎಸ್ ಡಿಎಂಸಿ ಸದಸ್ಯರಾದ ರವಿಕುಮಾರ್, ಪರಸಣ್ಣವರ ಹಾಗೂ ಮುದ್ದು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
