
ಕೊಪ್ಪಳ ಸದ್ಭಾವನ ವೇದಿಕೆ ರಚನೆ
ಅಧ್ಯಕ್ಷರಾಗಿ ಡಾ, ಕಲಾಲ್ ಸೇರಿ ಹಲವರ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,16 – ಸಮಾಜದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕೋಮು ಸೌಹಾರ್ದತೆ ಬೆಳೆಸಲು ಸಮಾಜಕೆ ಉತ್ತಮ ಸೇವೆ ಸಲ್ಲಿಸಲು ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಕೊಪ್ಪಳದಲ್ಲಿ ಸದ್ಭಾವನ ವೇದಿಕೆ ರಚಿಸಲಾಯಿತು
ಸದರಿ ಸದ್ಭಾವನ ವೇದಿಕೆಗೆ ಅಧ್ಯಕ್ಷರಾಗಿ ಕೊಪ್ಪಳದ ಹಿರಿಯ ವೈದ್ಯ ನಿವೃತ್ತ ಜಿಲ್ಲಾ ಸರ್ಜನ್ ಡಾ. ಸುಶೀಲ್ ಕುಮಾರ್ ಕಲಾಲ್ ಅವಿರೋಧ ಆಯ್ಕೆಗೊಂಡಿದ್ದಾರೆ ಅದರಂತೆ ಇನ್ನುಳಿದ ಪದಾಧಿಕಾರಿಗಳಾಗಿ ಮಹಾಂತೇಶ ಚೆನ್ನಿ ನಾಯಕ್ ಮತ್ತು ಅಲಿ ಮುದ್ದಿನ್ ಉಪಾಧ್ಯಕ್ಷರಾದರೆ , ಸೈಯದ್ ಹಿದಾಯದಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ.
ಇನ್ನುಳಿದಂತೆ ಸದರಿ ಸದ್ಭಾವನ ವೇದಿಕೆಗೆ ಕಾರ್ಯಕಾರಣಿ ಸದಸ್ಯರಾಗಿ ನಾಮದೇವ ಜಕಲಿ ಚಂದ್ರಕಾಂತ್ ಸಿಂಗಟಾಲೂರ್ ಹಿರಿಯ ಪತ್ರಕರ್ತರಾದ ಜಿಎಸ್ ಗೋನಾಳ್ ಮತ್ತು ಸಾಧಿಕ್ ಅಲಿ ನಿತೇಶ್ ಪುಲಸ್ಕರ್ ಅಶೋಕ್ ಕುಂಬಾರ್ ಸೈಯದ್ ಜಮೀರ್ ಖಾದ್ರಿ ಯಮನೂರಪ್ಪ ನಾಗರಾಜ್ ಚಿಲವಾಡಗಿ ದಾನಪ್ಪ ಶೆಟ್ಟರ್ ಎಸ್ ವಿ ಮ್ಯಾಳಿ ರಾಜಶೇಖರ್ ಕಮರಳ್ಳಿ ಮಠ ಮರದಾನ ಅಲಿ ಮಿಠಾಯಿ ಅಶ್ವಾಕ್ ಹುಸೇನ್ ಸಮಿತಿಗೆ ಕಾರ್ಯಕಾರಣಿ ಸದಸ್ಯರಾಗಿ ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ಸಂಚಾಲಕ ದಿಲಾವರ್ ಅಂಬರ್ ಖಾನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ