IMG-20240716-WA0440

  ಸದೃಢವಾದ ಶಾಂತಿಯ ತೋಟ ಕಟ್ಟಲು ಶ್ರಮಿಸೋಣ–ಸಲೀಂ 

ಕರುನಾಡ ಬೆಳಗು ಸುದ್ದಿ
ಕೊಪ್ಪಳ ಜುಲೈ 16 ನಾವೆಲ್ಲರೂ ಒಂದಾಗಿ ನಮ್ಮ ದೇಶವನ್ನು ಕಟ್ಟಲು ಒಂದು ಸದೃಢವಾದ ಶಾಂತಿಯ ತೋಟ ವನ್ನು ಕಟ್ಟಲು ಶ್ರಮಿಸೋಣ ಎಂದು ಜಮಾತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಅಖಿಲ ಭಾರತ ಸದ್ಭಾವನ ಮಂಚ್ ನ ರಾಷ್ಟ್ರೀಯ ಸದಸ್ಯರಾದ ಪ್ರೊಫೆಸರ್ ಮೊಹಮ್ಮದ್ ಸಲೀಂ ಹೇಳಿದರು
       ಅವರು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕೊಪ್ಪಳ ಜಮಾತೆ ಇಸ್ಲಾಮಿ ಹಿಂದ್ ಏರ್ಪಡಿಸಿದ ಸದ್ಭಾವನಾ ಸಭೆ ಮತ್ತು ಸೌಹಾರ್ದ ಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮುಂದುವರೆದು ಮಾತನಾಡಿ ಸಮಾನತಾ ಮತ್ತು ಸಮವೃತ್ತ, ನ್ಯಾಯ ಅನ್ಯಾಯ ನ್ಯಾಯವಿಲ್ಲದೆ ಶಾಂತಿ ಲಭಿಸುದಿಲ್ಲ, ಸಹೋದರತ್ವ ಮತ್ತು ಸನ್ಮಾನ, ಸಂವಾದ ಮುಖಾಂತರ ನಾವು ಪರಸ್ಪರ ಸೌಹಾರ್ದತೆ ಬೆಳೆಸಿಕೊಳ್ಳಬೇಕು ಉತ್ತಮ ಕಾರ್ಯ ಚಟುವಟಿಕೆ ಮಾಡುವುದರ ಜೊತೆಗೆ ಸಮಾಜಕ್ಕೆ ಉತ್ತಮ ರೀತಿಯ ಸೇವೆ ಸಲ್ಲಿಸಬೇಕು ಎಂದರು .
            ಇಂದು ಸಜ್ಜನರು ಗರಿಷ್ಠ ಪ್ರಮಾಣದಲ್ಲಿ ಇದ್ದರೂ ಕೂಡ ದುರ್ಜನರ ಪ್ರಮಾಣ ಕಡಿಮೆ ಇದ್ದರೂ ಕೂಡ ಅವರ ಸಂಘಟನಾತ್ಮಕ ಪ್ರಯತ್ನ ದಿಂದ ಸಫಲರಾಗಿದ್ದಾರೆ, ನಾವುಗಳು ಸಜ್ಜನರು ಮೂಕ ಪ್ರೇಕ್ಷಕರಾಗಿ  ಇದ್ದರೆ ಖಂಡಿತ ಲಾಭವನ್ನು ದುರ್ಜನರಿಗೆ ಆಗುತ್ತದೆ ನಾವೆಲ್ಲರೂ ಒಂದಾಗಿ ನಮ್ಮ ದೇಶವನ್ನು ಕಟ್ಟಲು ಒಂದು ಸದೃಢ ಶಾಂತಿಯ ತೋಟವನ್ನು ಕಟ್ಟಲು ಶ್ರಮಿಸೋಣ ಎಂದವರು ಕೋಮು ಸೌಹಾರ್ದತೆ ರಾಷ್ಟ್ರೀಯ ಭಾವೈಕ್ಯತೆ ಬೆಳೆಸಿಕೊಂಡು ಪರಸ್ಪರ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಜೀವನ ಸಾಗಿಸಿದರೆ ಬದುಕು ಸಾರ್ಥಕ ಎಂದು ಅಖಿಲ ಭಾರತ ಸದ್ಭಾವನ ಮಂಚ್ನ ರಾಷ್ಟ್ರೀಯ ಸದಸ್ಯರಾದ ಮೊಹಮ್ಮದ್ ಸಲೀಂ ಹೇಳಿದರು
              ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮೊಹಮ್ಮದ್ ಕುಯಿo ಮಾತನಾಡಿ ಇಂದಿನ ಸಂದರ್ಭದಲ್ಲಿ ಸುಳ್ಳನ್ನು ಪದೇ ಪದೇ ಹೇಳಿ ನಿಜ ಮಾಡುವ ಸಂದರ್ಭ ಉಂಟಾಗಿದ್ದು ನಾವು ಒಗ್ಗಟ್ಟಾಗಿ ಸುಳ್ಳನ್ನು ಸೋಲಿಸಬೇಕಾಗಿದೆ ವಾಸ್ತವಿಕತೆ ತಿಳಿಯುವ ಮತ್ತು ತಿಳಿಸುವ ಕೆಲಸ ನಡೆಯಬೇಕಾಗಿದೆ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸುವವನು ನಮ್ಮ ನಾಯಕ ಆದರೆ ದುರಾದೃಷ್ಟ ವಾಗಿ ಸಮಸ್ಯ ಸೃಷ್ಟಿಸುವನು ನಾಯಕನಾಗಿದ್ದಾನೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಮನುಷ್ಯನಿಗೆ ಬೇರ್ಪಡಿಸುವುದು ಯಾವ ಧರ್ಮ ಹೇಳಿಲ್ಲ ಸಮಾಜದಲ್ಲಿನ ಕೆಡುಕು ಹೋಗಲಾಡಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಸಮಾಜದ ಸಮಾರಸ್ಯ ಸೌಹಾರ್ದತೆ ನಮ್ಮ ಊರು ನಮ್ಮವರು ಎಂಬ ಅಭಿಮಾನ ರೂಡಿಸಿಕೊಳ್ಳಬೇಕು ಪರಸ್ಪರ ಸೌಹಾರ್ದತೆಯ ಬದುಕು ನಮ್ಮದಾಗಬೇಕು ಎಂದು ಮೊಹಮ್ಮದ್ ಕುಯಿo, ಅಭಿಪ್ರಾಯ ಪಟ್ಟರು .
              ವೇದಿಕೆ ಮೇಲೆ ಜಮಾತೆ ಇಸ್ಲಾಮಿ ಹಿಂದ ಕೊಪ್ಪಳದ ಅಧ್ಯಕ್ಷರಾದ ಹಿದಾಯತ್ ಅಲಿ ವಲಯ ಸಂಚಾಲಕರಾದ ರಾಯಚೂರಿನ ಮೌಲಾನ ಅನ್ವರ್ ಪಾಷಾ ಉಮರಿ ಜಿಲ್ಲಾ ಸಂಚಾಲಕ ದಿಲಾವರ್ ಅಂಬರ್ ಖಾನ್ ಪಾಲ್ಗೊಂಡಿದ್ದು ಆರಂಭದಲ್ಲಿ ಮಹಮ್ಮದ್ ಫಹಿಮುದ್ದೀನ್ ಕುರಾನ್ ಪಠಣ ಮಾಡಿ ಅದರ ಕನ್ನಡ ಅನುವಾದ ಸಭಿಕರಿಗೆ ತಿಳಿಸಿದರು ಅಭಿಯಂತ ಹಾಗೂ ಜಮಾತೆ ಇಸ್ಲಾಮಿ ಹಿಂದನ ಸದಸ್ಯರಾದ ತಾಜುದ್ದೀನ್ ರವರು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!