4

ವಿದ್ಯಾರ್ಥಿಗಳ ಜೀವನಕ್ಕೆ ಆಟಗಳು ಅತ್ಯಗತ್ಯ : ಸೋಮಶೇಖರಗೌಡ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 2- ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವ ಮೂಲಕ ಕ್ರೀಡೆಗಳಲ್ಲಿ ಭಾಗಿಯಾಗುವುದು ಅತ್ಯವಶ್ಯ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಹೇಳಿದರು.

ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ತಾಲೂಕು ಆಡಳಿತ ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಧಿಕಾರಿಗಳ ಕಾರ್ಯಾಲಯ ವತಿಯಿಂದ ನಡೆದ ಯಲಬುರ್ಗಾ-ಕುಕನೂರ ಅವಳಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳು ಶಿಕ್ಷಣ ಅವಶ್ಯ. ಕೇವಲ ಪಠ್ಯೇತರ ಪಡೆದರೆ ಸಾಲದು. ಜೀವನದಲ್ಲಿ ಆಟಗಳಲ್ಲಿ ತೊಡಗಿ ಸದೃಢ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಬದುಕು ಯಶಸ್ವಿಯತ್ತಾ ಕೊಂಡಯ್ಯುಲು ಸಾಧ್ಯ ಎಂದರು.

ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಮಾತನಾಡಿ, ತಾಲೂಕಿನಲ್ಲಿ ಕಬಡ್ಡಿಗಳ ಆಟಕ್ಕೆ ಪ್ರಸಿದ್ಧತೆ ಪಡೆದ ಗ್ರಾಮವೆಂದರೆ ಹಿರೇ ಮ್ಯಾಗೇರಿ ಈ ಗ್ರಾಮದಲ್ಲಿ ಅನೇಕ ಕ್ರೀಡಾಪಟುಗಳು ನಿದರ್ಶನವೇ ಸಾಕ್ಷಿ ಈ ಮೂಲಕ ಇಂತಹ ತಾಲೂಕು ಮಟ್ಟದ ಆಟಗಳು ಜರುಗುತ್ತಿರುವುದು ಖುಷಿಯಾಗಿದೆ ಪ್ರತಿಯೊಂದು ಮಗುವಿನಲ್ಲಿ ತನ್ನದೇಯಾದ ಸಾಧನೆ ಅಡಗಿರುತ್ತದೆ. ಅದನ್ನು ಹೊರ ತರುವ ಕೆಲಸವಾಗಲು ಪೋಷಕರು ಶಿಕ್ಷಕರು ಪಾತ್ರ ಬಹು ದೊಡ್ಡದು ಎಂದು ತಿಳಿಸಿದರು.

ತಾಲೂಕು ಪಂಚಾಯತ್ ಇಒ ಸಂತೋಷ್ ಪಾಟೀಲ್ ಬಿರಾದಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ಕಳಕಪ್ಪ ವೀರಾಪೂರ, ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ವೀರಭದ್ರಪ್ಪ ಅಂಗಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ.ದಾನಿ, ಬಿಆರ್‌ಸಿ ಅಶೋಕ ಗೌಡರ, ಮುಖ್ಯ ಶಿಕ್ಷಕ ಹನುಮಂತಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಮಹಾಂತೇಶ ಗಾಣಿಗೇರ್, ಶಿಕ್ಷಕರ ಸಂಘದ ಅಧ್ಯಕ್ಷರಾದ ವೈ.ಜಿ.ಪಾಟೀಲ್, ಮಹೇಶ ಸಬರದ್, ಬಸವರಾಜ ಉಳ್ಳಾಗಡ್ಡಿ, ಎಸ್.ವಿ.ಧರಣಾ, ಅಶೋಕ ಮಾಲಿಪಾಟೀಲ್, ಮಾರುತೇಶ ತಳವಾರ, ಎಫ್.ಜಿ.ಅಂಗಡಿ, ಯಮನೂರಪ್ಪ ಗಧಾರಿ, ಸಂಗಪ್ಪ ರಾಜೂರ, ಬಸವರಾಜ ರಾಮಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು, ಎಸ್ಡಿಎಂಸಿ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಕ್ರೀಡಾಪಟುಗಳು ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!