ಮಹಾತ್ಮಾ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ತಾಲ್ಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಇರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು.
ಪೂಜೆಯನ್ನು ನೆರವೇರಿಸಿ ಮಾತನಾಡಿದ ಪ್ರಾಚಾರ್ಯರಾದ ಬಸವರಾಜ ಸರ್ ಇವರು ಗಾಂಧಿಜೀ ಯವರು ಮೌಲ್ಯಗಳನ್ನು ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಥಮ ಪಿ.ಯು.ಸಿ ಕಲಾ ವಿಭಾಗದ ವಿದ್ಯಾರ್ಥಿ ಭರತ ಕುಮಾರ ಮಾತನಾಡಿ ಗಾಂದಿಜೀಯವರು ಭಾರತದ ಸ್ವಾತಂತ್ರ್ಯದ ಹೊರಾಟಗಾರಲ್ಲಿ ಒಬ್ಬರು ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಸವರಾಜ, ಉಪನ್ಯಾಸಕಿಯರಾದ ವೈ.ಜಯಂತಿ ಮಾಲಾ, ಉಪನ್ಯಾಸಕ ಎನ್.ರವಿ, ಪ್ರಕಾಶ, ತಿರುಪತಿ, ಅಂಬಳಿ ವೀರೇಂದ್ರ, ಹನುಮೇಶ, ಸವಿತಾ ಟಿ.ವುಂಕಿ, ಪವಿತ್ರ, ಭಾರತಿ ಬಂಡಿ, ಮಂಜು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಂಬಳಿ ವೀರೇಂದ್ರ ಉಪನ್ಯಾಸಕರು ನಿರೂಪಿಸಿ, ವಂದಿಸಿದರು.
