
ಐತಿಹಾಸಿಕ ಪರಂಪರೆ, ಸಂಸ್ಕೃತಿ, ಇತಿಹಾಸವನ್ನು ಉಳಿಸಿ-ಬೆಳೆಸಿ : ನಾಗರಾಜ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ನಮ್ಮ ಐತಿಹಾಸಿಕ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಉಳಿಸ-ಬೆಳಸಬೇಕು ಎಂದು ಕೊಪ್ಪಳ ಜಿಲ್ಲಾ ಪ್ರವಾಸೊದ್ಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಅವರು ಹೇಳಿದರು.
ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು, ಪುರತತ್ವ ವಸ್ತು ಸಂಗ್ರಾಹಯಲಯ ಮತ್ತು ಪರಂಪರೆ ಮೈಸೂರು ಹಾಗೂ ಇತಿಹಾಸ ವಿಭಾಗ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ಸಹಯೋಗದಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ ಪರಂಪರೆ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕೋಟೆಗಳನ್ನು, ದೇವಾಲಯಗಳನ್ನು ಉಳಿಸಬೇಕು ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಇತಿಹಾಸ ತಿಳಿದುಕೊಳ್ಳಲು ಅನುಕೂಲ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರುವ ಸಿಂಧನೂರು ಸರಕಾರಿ ಪದವಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಶಂಕರ್ ಗುರಿಕಾರ ಅವರು ಮಾತನಾಡುತ್ತ ಪರರ ವಿಚಾರಗಳನ್ನು, ಇನ್ನೊಬ್ಬರ ಆಚರಣೆಗಳನ್ನು ಗೌರವಿಸುವುದು ನಮ್ಮ ಪರಂಪರೆಯಾಗಿದೆ. ಸಂಸ್ಕೃತಿ ಮತ್ತು ನಾಗರೀಕತೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು. ನಮ್ಮ ಪರಂಪರೆ ಬಹಳ ಪ್ರಾಚೀನ, ವೈವಿಧ್ಯತೆ ಮತ್ತು ಬಲಿಷ್ಠವಾದದ್ದು. ಭಾರತದ ನಾಗರಿಕತೆ ಸಿಂಧು ನಾಗರೀಕತೆಯಿಂದ ಪ್ರಾರಂಭವಾಗುತ್ತದೆ. ನೀವು ಬದುಕಿಗಾಗಿ ವಿದ್ಯಾಭ್ಯಾಸ ಮಾಡಿ. ಸಾಧನೆಗೆ ಪ್ರಯತ್ನ, ಬೇಕು, ವೈಜ್ಞಾನಿಕ ಮನೋಭಾವನೆ ಬೆಳಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಗಣಪತಿ ಲಮಾಣಿ ಅವರು ಮಾತನಾಡುತ್ತ ಈ ರೀತಿಯ ಪರಂಪರೆ ಕೂಟಗಳು ಕಾಲೇಜಿಗಳಲ್ಲಿ ನಡೆಯುವುದರಿಂದ ನಮ್ಮ ವಿದ್ಯಾರ್ಥಿನಿಯರಿಗೆ ಭಾರತೀಯ ಇತಿಹಾಸ, ಸಂಸ್ಕೃತಿ, ಭಾಷೆ, ವೈವಿಧ್ಯತೆಗಳ ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳದ ಮಹಿಳಾ ವಸತಿ ನಿಲಯದ ವಾರ್ಡನ್ ಗಿರಾಜ ಅವರು ಭಾರತೀಯ ಇತಿಹಾಸ ಪರಂಪರೆ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಧ್ಯಾಪಕಾರದ ನಾಗರತ್ನ ತಮ್ಮಿನಾಳ, ವಿಠೋಬ, ಡಾ.ಗವಿಸಿದ್ದಪ್ಪ ಮುತ್ತಾಳ, ಡಾ.ಹುಲಿಗೆಮ್ಮ, ಡಾ. ಮಲ್ಲಿಕಾರ್ಜುನ, ಡಾ. ಪ್ರದಿಪ್ ಕುಮಾರ್, ಡಾ.ನರಸಿಂಹ,ಡಾ. ಅಶೋಕ ಕುಮರ್, ಸುಮಿತ್ರಾ, ಸೌಮ್ಯ ಹಿರೇಮಠ ಮಲ್ಲಿಕಾರ್ಜುನ ಮಡಿವಾಳ ಹಾಗೂ ಕಾಲೇಜಿನ ಅತಿಥಿ ಉಪನ್ಯಾಸಕರಿದ್ದರು.
ಕಾರ್ಯಕ್ರಮದಲ್ಲಿ ಮಹೇಶ್ ಪೂಜಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಹಾದೇವಿ ಮತ್ತು ತಸ್ಲೀಮ್ ಪ್ರಾರ್ಥನೆ ಗೀತೆ ಹಾಡಿದರು. ಪವಿತ್ರ ಸ್ವಾಗತಿಸಿದರು.
ಕವಿತಾ ವಂದಿಸಿದರು. ಪೂಜಾ ಮತ್ತು ಕವಿತಾ ನಿರೂಪಿಸಿದರು.