7

ಶ್ರೀ ಗುರುರಾಯರ 353ನೇ ಆರಾಧನಾ ಮಹೋತ್ಸವ ಮತ್ತು ಉತ್ತರಾರಾಧನೆ

ಕರುನಾಡ ಬೆಳಗು ಸುದ್ದಿ

ಕುಕನೂರು, 23- ಪಟ್ಟಣದ ರಾಘವೇಂದ್ರ ಮಠದಲ್ಲಿ ಆ. 20ರಿಂದ,22ರ ವರೆಗೆ ಗುರು ರಾಯರ ಆರಾಧನಾ ಮಹೋತ್ಸವಗಳು ಜರುಗಿದವು.

ಗುರವಾರದಂದು ರಾಘವೇಂದ್ರ ಗುರುಸಾರ್ವಭೌಮರ ಉತ್ತರಾರಾಧನೆ ನಿಮಿತ್ಯ ವಿಷೇಶ ಪಂಚಾಮೃತಾಭೀಷೇಕ, ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಎಂದು ಗಿರಿಧರ್ ಗ್ರಾಮ ಪುರೋಹಿತ ಹೇಳಿದರು.

ನಂತರದಲ್ಲಿ ವಾದಿರಾಜ ಇವರು ಸಂಕಲ್ಪ ನೆರವೇರಿಸಿ ಮಾತನಾಡಿದರು.

ಇಂದು ಉತ್ತರಾರಾಧನೆ ಇಂದಿಗೆ ಸರಿಯಾಗಿ 353 ವರ್ಷಗಳ ಹಿಂದೆ ಶ್ರೀ ಗುರುರಾಯರು ಬೃಂದಾವನವನ್ನು ಪ್ರವೇಶ ಮಾಡಿದ ಮರುದಿನ. ಪವಿತ್ರವಾದ ಇಂದಿನ ದಿನ ನಾವೆಲ್ಲರೂ ಒಂದು ಸಂಕಲ್ಪವನ್ನು ಮಾಡೋಣ ಮನಸ್ಸನ್ನು ಅನ್ಯತ್ರ ಹರಿಸದೇ, ಶ್ರೀ ಗುರುರಾಯರನ್ನು ಉದ್ಧಾರಕ ಗುರುಗಳೆಂದು ಸ್ವೀಕರಿಸಿ, ಅವರನ್ನು ಏಕನಿಷ್ಠೆಯಿಂದ ಪ್ರತಿನಿತ್ಯ ಪೂಜಿಸೋಣ, ಭಜಿಸೋಣ, ಉಪಾಸಿಸೋಣ.

ಪ್ರಹ್ಲಾದನ ಶ್ರೀಹರಿಯಲ್ಲಿನ ಏಕನಿಷ್ಠೆ ಹೇಗೆ ಶ್ರೀಹರಿ ಕಂಭವನ್ನೊಡೆದು ಬರುವಂತೆ ಮಾಡಿತೋ, ಹಾಗೆಯೇ ಶ್ರೀ ಗುರುರಾಯರಲ್ಲಿನ ನಮ್ಮ ಏಕನಿಷ್ಠೆ ನಮ್ಮ ಕಠಿಣವಾದ ಪ್ರಾರಬ್ಧಕರ್ಮವನ್ನು ಸೀಳಿ, ನಮಗೆ ಶ್ರೀಹರಿಯ ಅನುಗ್ರಹ ನಿರಂತರವಾಗಿ ಸಿಗುವಂತೆ ಮಾಡಲಿ.

ನಮ್ಮ ಕಠಿಣವಾದ ಅಜ್ಞಾನವನ್ನು ಸೀಳಿ ನಮಗೆ ಸಮೀಚೀನವಾದ ಜ್ಞಾನ ಸಿಗುವಂತೆ ಮಾಡಲಿ ನಮ್ಮ ಕಠಿಣವಾದ ಅತಿಯಾದ ಪ್ರಾಪಂಚಿಕ ವ್ಯಾಮೋಹವನ್ನು ಸೀಳಿ ನಿಜ ವೈರಾಗ್ಯವುಂಟಾಗುವಂತೆ ಮಾಡಲಿ ಸುಖವೇ ಬರಲಿ, ದುಃಖವೇ ಬರಲಿ, ಶ್ರೀ ಗುರುರಾಯರ ಪಾದಪದ್ಮಗಳಲ್ಲಿ ನಮ್ಮ ಭಕ್ತಿ ನಿಶ್ಚಲವಾಗಿರಲಿ ಜನ್ಮಜನ್ಮಕ್ಕೂ ಶ್ರೀ ಗುರುರಾಯರೇ ನಮ್ಮ ಗತಿಗೆ ಮತಿಯಾಗಿರಲಿ ಹಾಗೂ ನಮ್ಮ ಮತಿಗೆ ಗತಿಯಾಗಿರಲಿ, ಎಂದು ಅವರ ದಿವ್ಯ ಪಾದಪದ್ಮಗಳಲ್ಲಿ ನಮ್ಮ ಶಿರವನ್ನಿಟ್ಟು ಇಂದಿನ ಶುಭದಿನದಂದು ಪ್ರಾರ್ಥಿಸೋಣ.

ಇಂದು ಶ್ರೀ ರಾಘವೇಂದ್ರ ಸ್ವಾಮಿಗಳವರ ಉತ್ತರಾಧನೆ ಪ್ರಯುಕ್ತ ಗಂಗಾವತಿ ಹಾಗೂ ಕುಕನೂರು, ಕೊಪ್ಪಳ ರಾಯರ ಮಠದಲ್ಲಿ ಸಂಭ್ರಮದಿಂದ ರಥೋತ್ಸವಗಳು ಜರಗಿದವು.

ಈ ಸಂದರ್ಭದಲ್ಲಿ ಬ್ಯಾಂಡ್ ಭಜಂತ್ರಿ ವೈಭವ ಭಜನೆ ಮಂತ್ರಘೋಷ ಸೇರಿದಂತೆ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.

ಭಕ್ತಾದಿಗಳು ಹೂ ಉತ್ತತ್ತಿ ನಾಣ್ಯಗಳನ್ನು ಸಮರ್ಪಿಸಿ ಧನ್ಯರಾದರು.

ಈ ಸಂದರ್ಭದಲ್ಲಿ ಗಿರಿಧರ್ ಗ್ರಾಮಪುರೋಹಿತ, ರಮೇಶ ಕುಲಕರ್ಣಿ, ವಾದಿರಾಜ ದೇಸಾಯಿ, ವಿಠ್ಠಲ್ ದೇಸಾಯಿ, ಗಿರೀಶ್ ನಿಲೋಗಲ್, ರಾಘವೇಂದ್ರ, ಪವನ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!