
ಮಂಡಲಗೇರಿ: ಶ್ರೀ ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಪ್ರೆಂಟಿಸ್ ತರಬೇತಿಗಾಗಿ ಸಂದರ್ಶನ
ಕರುನಾಡ ಬೆಳಗು ಸುದ್ದಿ
ಕುಕನೂರು 12- ತಾಲೂಕಿನ ಮಂಡಲಗೇರಿ ಗ್ರಾಮದಲ್ಲಿ ಇರುವ ಶ್ರೀ ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಪ್ರೆಂಟಿಸ್ ತರಬೇತಿಗಾಗಿ ಸಂದರ್ಶನವನ್ನು ನ.20.11.2024 ರಂದು ಬುಧುವಾರ ಕೊಪ್ಪಳ ತಾಲೂಕಿನ ಬೇವಿನಹಳ್ಳಿ ಕಿರ್ಲೋಸ್ಕರ್ ಫೇರ ಸ ಇಂಡಸ್ಟ್ರಿ ಯವರು ಅಪ್ರೆಂಟಿಸ್ ತರಬೇತಿಗಾಗಿ ಸಂದರ್ಶನವನ್ನು ನಡೆಸಲಿದ್ದಾರೆ.
ಎಲೆಕ್ಟ್ರಿಷಿಯನ್, ಫಿಟ್ಟರ್, ಟರ್ನರ್, ವೆಲ್ಡರ್ ವೃತ್ತಿಗಳಲ್ಲಿ ಐಟಿಐ ಪಾಸಾದ ಯಾವುದೇ ಅಭ್ಯರ್ಥಿಯು ಸಂದರ್ಶನಕ್ಕೆ ಬೆಳಗ್ಗೆ 10.30 ಕ್ಕೆ ತಮ್ಮ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಇವರ ಮೊಬೈಲ್ ಸಂಖ್ಯೆಗೆ 9900883699, 9945082600 ಸಂಪರ್ಕಿಸಬಹುದು.