ಮಾಜಿ ಸಚಿವ ಅನ್ಸಾರಿಯವರ ಮೇಲೆ ಕ್ರಮಕ್ಕೆ ಶಿಫಾರಸ್ಸು : ಹೆಚ್.ಆರ್.ಶ್ರೀನಾಥ್
ಕರುನಾಡ ಬೆಳಗು ಸುದ್ದಿ
ಗಂಗಾವತಿ, 12- ಮಾಜಿ ಸಚಿವ ಕಾಂಗ್ರೇಸ ಮುಖಂಡ ಇಕ್ಬಾಲ ಅನ್ಸಾರಿಯವರು ಮನ ಬಂದತೆ ಮಾತನಾಡುತ್ತಾ ರಾಷ್ಠಿಯ ಕಾಂಗ್ರೆಸ್ ನಾಯಕರುಗಳಾದ ಸೋನಿಯಾ ಗಾಂಧಿ, ರಾಹುಲು ಗಾಂಧಿ ನಮ್ಮ ನಾಯಕರುಗಳಲ್ಲ ಎಂದು ಸಮಾರಂಭದಲ್ಲಿ ದೂರಿರುವುದು ಕಾಂಗ್ರೆಸ್ ಪಕ್ಷಕ್ಕೆ ಅಪಮಾನ ಮಾಡಿದಂತೆ ತಕ್ಷಣವೇ ರಾಜ್ಯ ಕೆಪಿಸಿಸಿ ಘಟಕದ ವತಿಯಿಂದ ನೋಟಿಸ್ ಜಾರಿಗೋಳಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ವಿಧಾನ ಪರಿಷತ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ ಹೇಳಿದರು.
ಅವರ ಸರೋಜ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಮುಖ್ಯಮಂತ್ರಿ ಸಿದ್ದಾರಮಯ್ಯರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೇಸ ಪಕ್ಷವೇ ಅವರು ನಮ್ಮೇಲ್ಲರ ಮುಖ್ಯಮಂತ್ರಿಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿಯುವದರೋಳಗಾಗಿ ಮುಸ್ಲಿಂ ಸಮಾಜದ ಅಭಿವೃದ್ದಿ ಮಾಡಿಕೊಳ್ಳೋಣ, ಸಿಎಂ ಸಿದ್ದರಾಮಯ್ಯಮಾತ್ರ ನಮ್ಮ ನಾಯಕರಾಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ ಗಾಂಧಿ ನಮ್ಮ ನಾಯಕರಲ್ಲ ಎನ್ನುವುದು ಎಷ್ಠೂ ಸರಿ ಕಾಂಗ್ರೆಸ್ ಪಕ್ಷಕ್ಕೆ ಇಂದಿರಾ ಗಾಂಧಿ ರಾಜೀವ ಗಾಂಧಿ ಕಾಲದಿಂದಲೂ ದೇಶಕ್ಕಾಗಿ ಶ್ರಮಿಸಿ ಎಲ್ಲಾ ಸಮಾಜದವರನ್ನು ಬೇಳೆಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.
ಕೇಂದ್ರದ ಮಾಜಿ ಸಚಿವ ಜಾಪರ ಷರಿಫರನ್ನು ಎತ್ತರ ಮಟ್ಟಕ್ಕೆ ಬೇಳೆಸಿದ್ದು ಕಾಂಗ್ರೇಸ ಪಕ್ಷವಾಗಿದೆ. ಮಾಜಿ ಸಚಿವ ಇಕ್ಬಾಲ ಅನ್ಸಾರಿ ಮನಸ್ಸು ಇಚ್ಛೆ ಬಂದAತೆ ಸರಿಯಲ್ಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ನೋಟಿಸ್ ನೀಡಲಿ ಎಂದು ಒತ್ತಾಯಿಸಿದರು.
