IMG20240812110751

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಪತ್ರಕರ್ತರಿಂದ ಸಾಧ್ಯ: ಶಾಸಕ ದೊಡ್ಡನಗೌಡ ಪಾಟೀಲ

ಕುಷ್ಟಗಿ: ಸಮಾಜದಲ್ಲಿ ದಿನನಿತ್ಯ ನಡೆಯುವ ವಾಸ್ತವಿಕ ಘಟನೆಗಳನ್ನು ಸಾದರಪಡಿಸುವ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಪತ್ರಿಕಾ ಮಾದ್ಯಮದವರಿಂದ ಸಾಧ್ಯ ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಅವರು ಹೇಳಿದರು.

ಪಟ್ಟಣದ ಆರ್ ಪಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಕುಷ್ಟಗಿ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿ 

ನಮ್ಮ ನಿತ್ಯ ಜೀವನದಲ್ಲಿ ಅನೇಕ ಘಟನೆಗಳು, ಗಂಭೀರ ಸಮಸ್ಯೆಗಳು ನಮಗೆ ಕಂಡೂ ಕಾಣದಂತೆ ಇರುತ್ತದೆ. ಇಂಥಹವುಗಳನ್ನು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರುವವರು ಮಾದ್ಯಮ ಮಿತ್ರರು. ವಸ್ತುನಿಷ್ಠ ವರದಿಯನ್ನು ಮಾಡಿದಾಗ ಅನೇಕ ಸಮಸ್ಯೆಗಳು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ‌. ಪತ್ರಿಕೆಗಳು ಬಿತ್ತರಿಸುವ ಸುದ್ದಿಯನ್ನು ಸಾರ್ವಜನಿಕರು ವೀಕ್ಷಣೆ ಮಾಡುತ್ತಾರೆ ಅಂತಹ ಪವಿತ್ರವಾದ ಪತ್ರಿಕಾ ವೃತ್ತಿಗೆ ಧಕ್ಕೆ ಬಾರದಂತೆ ಸತ್ಯ ಸಂಗತಿಯನ್ನು ಅರಿತು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾದ್ಯಮದವರು ಮಾಡಬೇಕು.

ಈ ಮಾಧ್ಯಮ ರಂಗ ಆಧುನಿಕ ಯುಗದಲ್ಲಿ ಮಾಧ್ಯಮದಲ್ಲಿ ಪೈಪೋಟಿ ನಡೆಯುತ್ತಿದ್ದು ಮಾಧ್ಯಮ ಮಿತ್ರರು ಜನರಿಗೆ ಸದಾ ಸುದ್ದಿ ತಲುಪಿಸುವ ದಾವಂತದಲ್ಲಿ ಇರುತ್ತಾರೆ ಅವರು ಸಹಿತ ಯೋಧರಂತೆ ಕಾರ್ಯವನ್ನು ಮಾಡುತ್ತಾರೆ. ಮಾಧ್ಯಮದವರ ಸಂಕಷ್ಟದ ಪರಿಹಾರಕ್ಕೆ ನಾನು ಕೈಜೋಡಿಸುತ್ತೇನೆ. ಕಳೆದ ಬಾರಿ ನಾನು ಮಾತು ಕೊಟ್ಟಂತೆ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ನಂತರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಸ್ ವಿ ಡಾಣಿ ಅವರು ಉಪನ್ಯಾಸ ನೀಡಿ ಮಾತನಾಡಿ ದೇಶದಲ್ಲಿ ಕೆಲವು ಪತ್ರಕರ್ತರು ತಮ್ಮ ಜೀವನವನ್ನೆ ಪತ್ರಿಕೋಧ್ಯಮಕ್ಕೆ ಮುಡುಪಾಗಿಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ಹವ್ಯಾಸಿ ಪತ್ರಕರ್ತರು ಹೆಚ್ಚಾಗಿ ಇದ್ದು ಮಾನವೀಯತೆ ಮೌಲ್ಯಗಳ ಆಧಾರದ ಮೇಲೆ ಸುದ್ದಿ ಮಾಡಬೇಕು, ವಸ್ತುನಿಷ್ಟ ವರದಿಗಳನ್ನು  ಮಾಡಬೇಕಾಗಿದೆ ಒಬ್ಬ ಪತ್ರಕರ್ತ ಒಂದು ವರದಿ ಮಾಡಬೇಕಾದರೆ ಮೊದಲು ಮಾಹಿತಿ ಸಂಗ್ರಹಣೆ ಮಾಡಿ ಮೌಲ್ಯ ಮಾಪನ ಮಾಡಿ ಜನರಿಗೆ ತೋರಿಸುವ ಕೆಲಸ ಮಾಡಬೇಕಾಗಿದ್ದು ಪತ್ರಿಕೆಗಳು ಹಿಂದಿನ ದಿನಗಳಿಗಿಂತ ಈಗಿನ ದಿನಗಳಲ್ಲಿ ಬಹಳ ಮಹತ್ವವನ್ನು ಪಡೆಯುತ್ತಿವೆ ದೈನಂದಿನ ಜೀವನದಲ್ಲಿ ಅತ್ಯುತ್ತಮವಾದ ಕೊಡುಗೆಯನ್ನು ನೀಡುತ್ತಿವೆ ಎಂದರು.

ಪತ್ರಿಕಾ ರಂಗವೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವು ಆಧಾರಸ್ಥಂಭವಾಗಿ ಕೆಲಸ ಮಾಡುತ್ತಿದ್ದು ಪತ್ರಿಕೆಗಳು ಜ್ಞಾನವನ್ನು ನೀಡುತ್ತವೆ ಪತ್ರಕರ್ತರು ವೈಯಕ್ತಿಕವಾಗಿ ಅವರಿಗೆ ಕೆಲವೊಂದು ತೊಂದರೆಗಳು ಇದ್ದರೂ ಕೂಡ ಅವರು ಸಮಾಜದ ಒಂದು ಅಂಗವಾಗಿ ಕೆಲಸ ಮಾಡುತ್ತಿದ್ದಾರೆ ಈ ಕಾರ್ಯವೂ ಶ್ಲಾಘನೀಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಹಿರಿಯ ಪತ್ರಕರ್ತ ರವೀಂದ್ರಸಾ ಬಾಕಳೆ ಮಾತನಾಡಿ ಪತ್ರಕರ್ತರಿಗೆ ಅನೇಕ ಸಮಸ್ಯೆಗಳು ಇದ್ದರೂ ಸಹಿತ ಅವುಗಳನ್ನು ಬದಿಗೊತ್ತಿ ಸಮಾಜದಲ್ಲಿ ನಡೆಯುವ ಕಾರ್ಯಗಳ ಹಾಗೂ ಕಾರ್ಯಕ್ರಮಗಳ ಕುರಿತು ವರದಿಯನ್ನು ಮಾಡುತ್ತಿದ್ದಾರೆ ಆದರೆ ಅವರಿಗೆ ಬದುಕನ್ನು ಕಟ್ಟಿಕೊಳ್ಳಲು ಅವಕಾಶಗಳು ಸಿಗುತ್ತಿಲ್ಲ ಪತ್ರಕರ್ತರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದನೆಯನ್ನು ಮಾಡಬೇಕು ಎಂದರು.

ಮಾಜಿ ಶಾಸಕ ಕೆ ಶರಣಪ್ಪ ವಕೀಲರು, ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಮ್ ಸಾದಿಕ್ಅಲಿ,  ರಾಷ್ಟ್ರೀಯ ಸಮಿತಿ ಸದಸ್ಯ ಡಾ.ವಿ ಆರ್ ತಾಳಿಕೋಟಿ, ಇತರರು ಮಾತನಾಡಿದರು.

ಇದೇ ವೇಳೆ ಪತ್ರಿಕಾ ವಿತರಿಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಗೌರವ ಸನ್ಮಾನ ಸಮಾರಂಭ ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಕರಿಬಸವ ಶಿವಾಚಾರ್ಯರು ವಹಿಸಿದ್ದರು, ನಿವೃತ್ತ ವೈದ್ಯ ಡಾ. ಚಂದ್ರಕಾಂತ ಮಂತ್ರಿ, ಉಮೇಶ ಮಂಗಳೂರು, ಫಕೀರಪ್ಪ ಚಳಗೇರಿ,ಶ್ರೀನಿವಾಸ ಜಾಹಗೀರದಾರ, ಅಶೋಕ ಬಳೂಟಗಿ, ತಾಜುದ್ದೀನ ದಳಪತಿ, ಪರಶುರಾಮ ನಾಗರಾಳ, ನಜೀರಸಾಬ ಮೂಲಿಮನಿ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಇನ್ನಿತರ ಮುಖಂಡರು ಇದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ಕುಲಕರ್ಣಿ ವಹಿಸಿದ್ದರು.  ಉಪಾಧ್ಯಕ್ಷ ಎನ್. ಶ್ಯಾಮೀದ ಸ್ವಾಗತಿಸಿದರು, ಶರಣಪ್ಪ ಲೈನದ ನಿರೂಪಿಸಿ, ವಂದಿಸಿದರು.

 

Leave a Reply

Your email address will not be published. Required fields are marked *

error: Content is protected !!