WhatsApp Image 2024-08-12 at 7.39.45 PM

ತುಂಗಾಭದ್ರ ನದಿ 68 ಟಿಎಂಸಿ ನೀರು ಹೊರ ಹೋಗುತ್ತಿದೆ ಆದಷ್ಟು ಬೇಗ ನಿಲ್ಲಿಸಿ : ಆರ್. ಅಶೋಕ

ಕರುನಾಡ ಬೆಳಗು ಸುದ್ದಿ

ವಿಜಯನಗರ, 12- ತುಂಗಭದ್ರ ಡ್ಯಾಮಿನ 19ನೇ ಕ್ರಸ್ಟ್ ಗೇಟ್ ಕಟ್ಟಾಗಿರುವುದರಿಂದ ಸುಮಾರು 68 ರಿಂದ 70 ಟಿಎಂಸಿ ನೀರು ಹೊರಗಡೆ ಹೋಗುತ್ತಿದೆ ರಾಜ್ಯ ಸರ್ಕಾರ ಕೂಡಲೇ ಅದನ್ನು ತಡೆಯುವ ಪ್ರಯತ್ನ ಮಾಡಬೇಕು ಎಂದರು

ಟಿ ಬಿ ಡ್ಯಾಮ್ ನ ವೈಕುಂಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ತುಂಬಾ ಕಷ್ಟವಾಗುತ್ತದೆ. ಅಧಿಕಾರಿಗಳು ಹೇಳೋ ಪ್ರಕಾರ ಮುಂದಿನ ತಿಂಗಳು 7ನೇ ತಾರೀಖಿನಿಂದ ಮಳೆ ಬರುವ ಸಾಧ್ಯತೆಇದೆ ಹಾಗಾಗಿ ಒಂದು ಬೆಳೆಗೆ ನೀರು ಕೊಡುವ ವ್ಯವಸ್ಥೆ ಮಾಡಬಹುದು ಎಂದು ಹೇಳುತ್ತಿದ್ದಾರೆ. ನಾವು ಮತ್ತು ಬೊಮ್ಮಾಯಿಯವರು ಸೇರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವಾರು ಸಲಹೆಗಳನ್ನು ಕೊಟ್ಟಿದ್ದೇವೆ.

ತಾತ್ಕಾಲಿಕವಾಗಿ ನಿರ್ಮಿಸುತ್ತಿರುವ ಗೇಟ್ 16 ಅಡಿ ದ್ದ ಇರುವುದರಿಂದ ಐದು ಅಡಿಗೆಒಂದರಂತೆ ಕಟ್ ಪೀಸ್ ಗಳನ್ನು ಕೂರಿಸಿ, ಅದನ್ನು ಪರೀಕ್ಷಿಸಿ ಸಕ್ಸಸ್ ಆದರೆ ಎಲ್ಲವನ್ನು ಒಂದರಂತೆ ಜೋಡಿಸಿ ಈ ಸೀಸನ್ ಮುಗಿಯುವವರೆಗೂ ಸಂಪೂರ್ಣವಾಗಿ ಮುಚ್ಚಲಾಗುವುದು. ಒಂದು ವೇಳೆ ಯಶಸ್ವಿಯಾಗದೆ ಹೋದಲ್ಲಿ ಅನಿವಾರ್ಯವಾಗಿ ನೀರು ಹೊರ ಬಿಡ ಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ನಂತರ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಮಾಡುವ ಪ್ಲಾನ್ ಹೇಳಿದ್ದಾರೆ. ತಾತ್ಕಾಲಿಕವಾಗಿ ಗೇಟ್ ಮಾಡುವುದೇ 10 ದಿನಗಳ ಸಮಯ ಹಿಡಿಯುತ್ತದೆ ಈಗಾಗಲೇ ಎರಡು ಕಡೆ ಗೇಟ್ ಮಾಡೋ ಕೆಲಸ ನಡೆದಿದೆ ಎಂದು ಹೇಳಿದ್ದಾರೆ ಎಂದು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡರು.

ಎಸ್ ಆರ್ ಬೊಮ್ಮಾಯಿ ಅವರು ಮಾತನಾಡಿ ಸರ್ಕಾರವು ಈ ಕೆಲಸದಲ್ಲಿ ಸಂಪೂರ್ಣ ವಿಫಲವಾಗಿದೆ.

ಮಾನ್ಸೂನ್ ಬರೋಕಿಂತ ಮುಂಚೆ ಕಾಲಕಾಲಕ್ಕೆ ಎಲ್ಲವನ್ನು ಪರೀಕ್ಷಿಸಿಕೊಳ್ಳಬೇಕಿತ್ತು , ಮುಖ್ಯವಾಗಿ ಸರ್ಕಾರವು ಇಲ್ಲಿ ಮುಖ್ಯ ಇಂಜಿನಿಯರ್ ನನ್ನೇ ನೇಮಕ ಮಾಡಿಲ್ಲ. ಗೇಟ್ ಆಯುಷ್ಯ ಎಪ್ಪತ್ತು ವರ್ಷಗಳ ಅವಧಿ ಎಂದು ಸರ್ಟಿಫೈ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಆದರೆ ನನ್ನ ಅನುಭವದ ಪ್ರಕಾರ ಅವುಗಳ ಅವಧಿ ಕೇವಲ 30 ವರ್ಷ ಇರುತ್ತದೆ ಆದರೂ ಇಲ್ಲಿನವರೆಗೂ ಇರುವುದು ಹೆಚ್ಚಿನದ್ದು. ಹಾಗಾಗಿ ಕಾಲಕಾಲಕ್ಕೆ ಅವುಗಳನ್ನು ಪರೀಕ್ಷಿಸಬೇಕಾಗಿತ್ತು ಆ ನಿರ್ಲಕ್ಷತನವೇ ಇದಕ್ಕೆ ಕಾರಣವಾಗಿದೆ.

ಈ ತುಂಗಭದ್ರ ನದಿಯಲ್ಲಿ ನಡೆದಿರುವ ಅವಘಡವನ್ನು ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿರುವ ಎಲ್ಲಾ ಗೇಟ್ಗಳನ್ನು ಪರಿಶೀಲಿಸಬೇಕು. ಮತ್ತು ಅವುಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಬೇಕು. ಇಲ್ಲಿ ನಡೆದಿರುವ ಅವಗಡಕ್ಕೆ ಕಾರಣ ಏನೆಂದು ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಇದೇ ರೀತಿ ನೀರು ಹೊರ ಹೋಗುತ್ತಿದ್ದರೆ ರೈತರಿಗೆ ತುಂಬಾ ಸಮಸ್ಯೆಯಾಗುತ್ತದೆ ಮುಂದಿನ ದಿನಗಳಲ್ಲಿ ರೈತರಿಗೆ ಒಂದು ಹೆಕ್ಟೇರ್ಗೆ ಐವತ್ತು ಸಾವಿರ ಪರಿಹಾರ ಕೊಡಬೇಕಾಗುತ್ತದೆ ಅದಕ್ಕಾಗಿ ಸರ್ಕಾರ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!