
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಸಿದ್ಧತೆ : ಹೆಚ್.ಲಿಂಗರಾಜ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 8- 2024-2029ನೇ ಅವಧಿಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕ ಸಂಘದ ಚುನಾವಣೆಯ ವೇಳಾಪಟ್ಟಿಯನ್ನು ತಾಲೂಕ ಚುನಾವಣಾ ಅಧಿಕಾರಿ ದೇವೇಂದ್ರಗೌಡ ಹಾಗೂ ಆಜಾದ್ ಪ್ರಕಟಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಹೆಚ್ ಲಿಂಗರಾಜ ರೆಡ್ಡಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕ ಹೇಳಿಕೆ ನೀಡಿದ ಅವರು ಇಂದು ಅ. 9ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಅ. 18 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಅ. 19 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ ಅ. 21 ರಂದು ಉಮೇದುವಾರಿಕೆ ವಾಪಸ್ ಪಡೆಯಲು ಅವಕಾಶವಿದ್ದು ಅಂದೆ ಅಧಿಕೃತವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು ಅ. 28 ರಂದು ಬೆಳಿಗ್ಗೆ 9 ರಿಂದ ಸಂಜೆ ನಾಲ್ಕರವರೆಗೆ ಮತದಾನ ನಡೆಯಲಿದೆ ಅದೇ ದಿನ ಮತ ಎಣಿಕೆಯ ನಂತರ ಫಲಿತಾಂಶ ಘೋಷಿಸಲಾಗುವುದು ಸರಕಾರಿ ನೌಕರರ ಚುನಾವಣೆಯ ಸುಗಮ ಪ್ರಕ್ರಿಯೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೆಚ್ ಲಿಂಗರಾಜ ರೆಡ್ಡಿ ತಿಳಿಸಿದರು.