
ದೇವಿಯ ಪುರಾಣ ಆಲಿಕೆಯಿಂದ ಮನಸ್ಸಿಗೆ ನೆಮ್ಮದಿ : ಮಹಾಂತ ದೇವರು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 9- ಇಂದಿನ ಒತ್ತಡ ಜೀವನದಲ್ಲಿ ಪ್ರತಿಯೊಬ್ಬರೂ ಮನ ಶಾಂತಿಗಾಗಿ ಪುರಾಣ ಆಲಿಸಲು ಮುಂದಾಗಬೇಕು ಎಂದು ತಾಳಿಕೋಟಿ ವಿಭೂತಿಮಠದ ಮಹಾಂತ ದೇವರು ಹೇಳಿದರು.
ತಾಲೂಕಿನ ಮ್ಯಾದನೇರಿ ಗ್ರಾಮದ ಆರಾಧ್ಯ ದೈವ ಶ್ರೀ ದ್ಯಾಮಾಂಭಿಕಾ ದೇವಿಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ನಿಮಿತ್ತ ಹಮ್ಮಿಕೊಂಡಿರುವ ೧೩ನೇ ವರ್ಷದ ದೇವಿಯ ಪುರಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತ್ತೀಚೆಗೆ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನರು ಪ್ರತಿನಿತ್ಯವೂ ತಮ್ಮದೇಯಾದ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಆಧುನಿಕ ಯುಗದಲ್ಲಿ ಹೆಚ್ಚಾಗಿ ಕಂಪ್ಯೂಟರ್, ಮೊಬೈಲ್ ಟಿವಿ ಹಾವಳಿಯಿಂದ ಪೂರ್ವಜರ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಿದೆ. ಇಂದಿನ ಯುವ ಜನಾಂಗ ಪುರಾಣ ಹಮ್ಮಿಕೊಂಡು ಬರುತ್ತಿರುವುದು ಬಹಳ ಹೆಮ್ಮೆಯ ಸಂಗತಿ. ಗ್ರಾಮದಲ್ಲಿ ದೇವಿಯ ಪುರಾಣ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ಈ ಸಂದರ್ಭ ಜನಪದ ಅಕಾಡೆಮಿ ಸದಸ್ಯ ಲಿಂಗದಹಳ್ಳಿ ಎಚ್. ಚಂದ್ರಶೇಖರ್, ತಬಲಾ ವಾದಕ ಅಯ್ಯಪ್ಪ ಬಡಿಗೇರ್, ಗ್ರಾಮದ ಹಿರಿಯರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.