ವಿದ್ಯಾರ್ಥಿಗಳು ಜೀವನದಲ್ಲಿ ಸಕರಾತ್ಮಕ ಚಿಂತನೆ ಮೂಲಕ ಸಾಗಬೇಕು : ಮಲ್ಲಿಕಾರ್ಜುನ್
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 9- ವಿದ್ಯಾರ್ಥಿಗಳು ಜೀವನದಲ್ಲಿ ಸಕರಾತ್ಮಕ ಚಿಂತನೆ ಮೂಲಕ ಸಾಗಬೇಕಿದೆ ಬದುಕಿನಲ್ಲಿ ಒಳ್ಳೆಯ ಕಾರ್ಯಗಳತ್ತಾ ನಡೆಯಬೇಕು ಅಂದಾಗ ಮಾತ್ರ ಯಶಸ್ವಿ ಕಾಣಬಹುದು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ಪರಿಸರ ಪ್ರೇಮ ತಂಡದ ಸಂಸ್ಥಾಪಕ ಮಲ್ಲಿಕಾರ್ಜುನ್ ತೊದಲಬಾಗಿ ಹೇಳಿದರು.
ತಾಲೂಕಿನ ಬೋದೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮ ತಂಡದಿAದ ಹಮ್ಮಿಕೊಂಡಿದ್ದ ಶಾಲೆಗೆ ಬಣ್ಣ ಹಚ್ಚುವ ಮೂಲಕ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಸಸಿ ಬೆಳೆಸುವ ಮೂಲಕ ಸಾಲ ಮರದ ತಿಮ್ಮಕ್ಕ ನಾಡಿಗೆ ಹೆಸರಾಗಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಅದೋಷ್ಟು ಶಾಲೆಗಳಲ್ಲಿ ಸುಣ್ಣ ಬಣ್ಣ ಕಾಣದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತಿ ವಾರಕ್ಕೊಮ್ಮೆ ಶಾಲೆಗೆ ಭೇಟಿ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಪರಿಸರ ನಿರ್ಮಾಣವಾಗಲಿಕ್ಕೆ ಈಗಾಗಲೇ ಜಿಲ್ಲೆಯ ಸೇರಿದಂತೆ ನೆರಯ ಜಿಲ್ಲೆಯ ಶಿವಮೊಗ್ಗ, ಧಾರವಾಡ, ಬಾಗಲಕೋಟೆ ಹಾಗೂ ಇನ್ನಿತರಡೆ ಸುಮಾರು ೨೨೨ನೇ ಶಾಲೆಯಲ್ಲಿ ಈಗಾಗಲೇ ಇಂತಹ ಕಾರ್ಯಗಳಿಗೆ ಅಣಿಯಾಗಿದೆ. ಶಾಲೆಯಲ್ಲಿ ಅಂದ ಚೆಂದವಾದ ವಾತವರಣ ನಿರ್ಮಾಣಗೊಳಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಕೈ ಜೋಡಿಸಲಾಗುವುದು ಎಂದು ತಿಳಿಸಿದರು.
ಕೊಪ್ಪಳ ತಾಲೂಕಿನ ಕಲ್ ತಾವರಗೇರಾ ಗ್ರಾ.ಪಂ.ಪಿಡಿಒ ಯಮನೂರಪ್ಪ ಕಬ್ಬಣ್ಣನವರ್ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ಪರಿಸರ ಪ್ರೇಮ ತಂಡವು ಉತ್ತಮ ಕಾರ್ಯ ಮಾಡುತ್ತಿದೆ. ಇಂದಿನ ದಿನಗಳಲ್ಲಿ ಸರಕಾರಿ ನೌಕರರು ವೇಳೆಗೆ ಮುನ್ನವೇ ಧಾವಿಸುತ್ತಿದ್ದು, ಪ್ರತಿ ವಾರಕ್ಕೊಮ್ಮೆ ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ಸುಣ್ಣ ಬಣ್ಣದ ಅಲಂಕಾರ ಮೂಲಕ ಮದುವಣ ಗಿತ್ತಿ ಎಂಬAತೆ ಅಲಂಕಾರಗೊಳಿಸಿ ಸುಂದರವಾಗಿ ನಿರ್ಮಿಸಲು ಶ್ರಮಿಸುತ್ತಿರುವ ಬಳಗದ ಕಾರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆ ಮುಖ್ಯ ಶಿಕ್ಷಕ ಧರ್ಮಪ್ಪ ಎಸ್.ಬಿಂಗಿ ಮಾತನಾಡಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶಿವಶರಣಪ್ಪ ಕುರ್ನಾಳ್, ಶಿಕ್ಷಕ ಪ್ರಭಕಾರ್ ನಿಡಶೇಸಿ, ಪರಿಸರ ಪ್ರೇಮ ತಂಡದ ಜಿಲ್ಲಾಧ್ಯಕ್ಷ ರಾಮಣ್ಣ ಬಂಡಿಹಾಳ್, ಗ್ರಾಮ ಪಂಚಾಯತ್ ಕರವಸೂಲಿಗಾರ ರಾಮಣ್ಣ ಹೊಟ್ಟಿ, ಮುಖಂಡ ಅಜರುದ್ದೀನ್ ಕುಷ್ಟಗಿ ಹಾಗೂ ಶಾಲೆಯ ವಿದ್ಯಾರ್ಥಿಗಳು, ತಂಡದ ಬಳಗದವರು ಗ್ರಾಮಸ್ಥರು ಇದ್ದರು.
