
ಕಾಂಗ್ರೆಸ್ ಆಡಳಿತ ನೋಡಿ ಬಿಜೆಪಿ-ಜೆಡಿಎಸ್ ಇಲ್ಲಸಲ್ಲದ ಕುತಂತ್ರ ರೂಪಿಸಿವೆ : ಮಾನಯ್ಯ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ರಾಜ್ಯದಲ್ಲಿ ಉತ್ತಮ ಪಾಲನೆಯನ್ನು ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿ ಜೆಡಿಎಸ್ ಕುತಂತ್ರಗಳನ್ನು ನಡೆಸುತ್ತವೆ ಎಂದು, ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿಜಿ ಸಾಗರ್ ಬಣ) ಜಿಲ್ಲಾ ವಿಭಾಗದ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಧರಣಿ ನಡೆಸಲಾಯಿತು.
ಧರಣಿಯನ್ನು ಉದ್ದೇಶಿಸಿ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕರು ಈ.ಮಾನಯ್ಯ ಮಾತನಾಡುತ್ತಾ, ಕಾಂಗ್ರೆಸ್ ಆಡಳಿತವನ್ನು ನೋಡಿ ಹೊಟ್ಟೆ ಕಿಚ್ಚಿನಿಂದ ಬಿಜೆಪಿ ಜೆಡಿಎಸ್ ಪಕ್ಷಗಳು ಇಲ್ಲಸಲ್ಲದ ಕುತಂತ್ರಗಳು ನಡೆಸುತ್ತಿವೆ ಎಂದರು.
ಮೀಸಲಾತಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ವಿರೋಧಿ ಎಂಬAತೆ ಬಿಂಬಿಸುತ್ತಿರುವ ಇವರ ವಿಧಾನವು ಎಷ್ಟು ಸರಿ ಎಂದು ಪ್ರಶ್ನಿಸಿದರು. ಒಂದು ಬಾಧ್ಯತಾ ಹಿತವಾದ ಶಾಸಕ ಸ್ಥಾನದಲ್ಲಿದ್ದ ಮುನಿರತ್ನ ಜಾತಿನಿಂದಲೇ ಜೀವಿ ಬೆದರಿಕೆ ಮಹಿಳೆಯ ಮೇಲೆ ಅತ್ಯಾಚಾರ ಎಸಿಗಿದ್ದರೆ ಎನ್ನಲಾದ ಇವರ ವಿಧಾನವನ್ನು ಹೆದರಿಕೆಸಿ ಇವರ ಮೇಲೆ ಕಠಿಣ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಇನ್ನು ಒಂದೇ ದೇಶ ಒಂದು ಚುನಾವಣೆಯ ಇದೊಂದು ಕೇಂದ್ರ ಸರ್ಕಾರದ ಅಜಂಡಾದ ಭಾಗ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದರು.
ಪ್ರಜಾ ಸ್ವತಂತ್ರ ದೇಶದಲ್ಲಿ ಇಂಥ ವಿಧಾನಗಳು ಅನುಷ್ಠಾನಗೊಳಿಸಲು ಸಾಧ್ಯವೇ ಇಲ್ಲ ಎಂದರು. ಆಡಳಿತಾರೂಢ ಬಿಜೆಪಿಯ ಗುಪ್ತ ಅಜೆಂಡವನ್ನು ಒಳಗೊಂಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾವನೆಯನ್ನು ಸಂಸತ್ತು ಒಳಗೆ ಮತ್ತು ಹೊರಗೆ ದೇಶದ ಜನ ಅಭಿಪ್ರಾಯವೂ ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದರು. ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಧರಣಿಯಲ್ಲಿ ಸಂಚಾಲಕರು ಹೆಚ್.ವಿ.ಗಂಗಪ್ಪ, ಕೆ.ದೇವದಾಸು, ಎಚ್ ಆಂಜನೇಯ, ಕೊಳಗಲ್ಲು ಮಲ್ಲಯ್ಯ, ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟ ಬಿ.ರಮೇಶ, ಐ.ಎಂ.ಎರಿಸ್ವಾಮಿ, ಕೊಡ್ತೀನಿ ಪಂಪಾಪತಿ, ಮಲ್ಲಿಕಾರ್ಜುನ, ಭೀಮಶಂಕರ್, ಪರಶುರಾಮ್, ಸಿದ್ದಾರ್ಥನಗರ ಬನ್ನೂರು ಸ್ವಾಮಿ, ಬಿಸಳೆಹಳ್ಳಿ ಗಂಗಣ್ಣ ಜೊತೆಗೆ ಹಲವಾರು ಮಂದಿ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.