ನಗರಸಭೆ ಪೌರಕಾರ್ಮಿಕರು ನೈಜ ಕಾಯಕಯೋಗಿಗಳು : ಗುರುಪ್ರಸಾದ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 26- ನಗರಸಭೆ ಪೌರ ಕಾರ್ಮಿಕರು ಗಾಳಿ ಮಳೆ ಬಿಸಿಲು ಚಳಿ ಎನ್ನದೆ ದಿನ ನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರಕಾರ್ಮಿಕರು ನೈಜ ಕಾಯಕಯೋಗಿಗಳು ಸ್ವಚ್ಛ ರೂವಾರಿಗಳು ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದು ನಗರಸಭೆ ಪೌರಾಯುಕ್ತ ಹೆಚ್.ಎನ್.ಗುರುಪ್ರಸಾದ್ ಹೇಳಿದರು.
ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಗರ ಸಭೆ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ಯಶೋಧ, ನಗರಸಭೆ ಸದಸ್ಯರುಗಳಾದ ಕಾಯಿಪಲ್ಲೆ ನಾಗರಾಜ, ಮಹದೇವ, ಮಲ್ಲಿಕಾರ್ಜುನ, ಚಿದಾನಂದ ರಾಯುಡು, ನಗರಸಭೆಯ ಎಲ್ಲಾ ಸದಸ್ಯರುಗಳು ನಗರಸಭೆಯ ಎಇಇ ಗಂಗಾಧರ, ಗೌಡ ಅಧ್ಯಕ್ಷ ವೆಂಕೋಬ, ಪದಾಧಿಕಾರಿಗಳು ರಾಜಭಕ್ಷಿ, ಡಿ ಪಂಪಾಪತಿ, ರಂಗಸ್ವಾಮಿ, ಅಂಬರೀಶ್, ನಗರಸಭೆಯ ಸಿಬ್ಬಂದಿ ವರ್ಗದವರು ನೂರಾರು ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ಇದ್ದರು.
