
ವಲ್ಲಭಭಾಯಿ ಪಟೇಲರ ಸ್ಮರಣೆ ನಿರಂತರವಾಗಿವಿರಲಿ : ಶಾಸಕ ಜನಾರ್ಧನರೆಡ್ಡಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 18- ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ) ವಿಮೋಚನೆಗೆ ಅಂದಿನ ಗೃಹಮಂತ್ರಿ ಸರ್ದಾರ ವಲ್ಲಭಭಾಯಿ ಪಟೇಲ ದಿಟ್ಟ ನಿರ್ಧಾರದಿಂದಾಗಿ ಸ್ಥಳಿಯ ನಾಯಕರುಗಳ ಹೋರಾಟದ ಪ್ರತಿಫಲವಾಗಿ (ಹೈ.ಕ ಭಾಗ) ಸ್ವತಂತ್ರ್ಯ ಪಡೆಯಿತು ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣ ಮೈದಾನದಲ್ಲಿ ನಡೆದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ೭೭ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಗಂಗಾವತಿ ಬೈಪಾಸ ರಸ್ತೆಗೆ ೧೫೦ಕೋಟೀ ಕೆಕೆಆರ್‌ಡಿಬಿ ಯೋಜನೆಯಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸತಿಶ ಜಾರಕಿಹೋಳಿಯವರ ಅನುಮೋದನೆ ಗ್ರಿನ ಸಿಗ್ನಲ್ ದೋರೆತಿದೆ.
ಅಂಜನಾದ್ರಿ ಅಭಿವೃದ್ದಿ ಬಿಜೆಪಿ ಸರಕಾರದ ಬಸವರಾಜ ಬೋಮ್ಮಾಯಿ ಇದ್ದಾಗ ೧೦೦ ಕೋಟಿ, ಈಗಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೧೦೦ ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿAದ ೪೦ ಕೋಟಿ ಅನುದಾನ ಮಂಜೂರಾಗಿ ಕೊಪ್ಪಳ ಜಿಲ್ಲಾಧಿಕಾರಿ ಅಂಜನಾದ್ರಿ ಅಭಿವೃದ್ದಿ ಯೋಜನೆ ಪ್ಲಾನ ತಾಯರುಗೊಂಡಿದೆ ಕೆಲಸವು ಪ್ರಾರಂಭವಾಗಿದೆ. ನಗರದ ಅಭಿವೃದ್ದಿಗಾಗಿ ನಗರುತ್ಥಾನ ಯೋಜನೆಯಡಿ ೪೫ ಕೋಟಿ ಹಾಗೂ ೨೦ ಕೋಟಿ ಕೆಕೆಆರ್‌ಡಿಬಿ ಯೋಜನೆಯಡಿ ಮಂಜೂರಾಗಿದೆ. ಆನೆಗೊಂದಿ ರಸ್ತೆಗಾಗಿ ೨೫ ಕೋಟಿ ಮಂಜೂರಾಗಿದ್ದು ಕೆಲಸಕ್ಕೆ ಚಾಲನೆ ನೀಡಲಾಗಿದೆ. ಹೈ.ಕ ಭಾಗವನ್ನು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರವರು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದಾರೆ.
ಬಸವರಾಜ ಬೋಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ಎಂದು ಘೋಷಣೆ ಮಾಡಿದರು. ಇವತ್ತು ನಮ್ಮೇಲ್ಲರ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೆಂದ್ರ ಮೋದಿಯವರ ಜನ್ಮದಿನದ ಶುಭಾಶಯ ಕೋರುವದಲ್ಲದೇ ದೇಶ ಇನ್ನೂ ವಿಶ್ವಗುರುವಾಗಿದ್ದಲ್ಲದೇ ಹೆಚ್ಚಿನ ಪ್ರಗತಿ ಪಡೆಯಲಿ ಎಂದರು.
ಧ್ಜಜಾರೋಹಣ ನೇರವೇರಿಸಿ ತಹಶೀಲ್ದಾರ ಯು.ನಾಗರಾಜ ಮಾತನಾಡಿ, ಸರ್ದಾರ ವಲ್ಲಭಾಯಿ ಪಟೇಲರು ಹೈದ್ರಾಬಾದ ನಿಜಾಮರಿಂದ ವಿಮೋಚನೆ ಗೋಳಿಸಿ ಹೈ.ಕ ಭಾಗವನ್ನು ಸ್ವತ್ರಂತ್ಯ ಪಡೆಸಿದ್ದು ಸ್ಮರಣಾರ್ಹವಾಗಿದೆ ಸ್ಥಳಿಯ ಹೊರಾಟಗಾರರು ಸ್ಮರಣಾರ್ಹರು ಎಂದರು.
ಈ ಸಂದರ್ಭದಲ್ಲಿ ಪೋಲಿಸ ಉಪವಿಭಾಗಧಿಕಾರಿ ಸಿದ್ದಲಿಂಗಪ್ಪ ಗೌಡ ಪೊಲೀಸ್ ಪಾಟೀಲ್, ನಗರಸಭೆ ಉಪಾಧ್ಯಕ್ಷ ಶ್ರೀಮತಿ ಪಾರ್ವತಿ ದುರ್ಗೇಶ್ ದೊಡ್ಡಮನಿ, ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮೀದೇವಿ, ಪಿಡಬ್ಲೂಡಿ ಅಧಿಕಾರಿ ವಿಶ್ವನಾಥ, ಕೃಷಿ ಅಧಿಕಾರಿ ಸಂತೋಷ ಪಟ್ಟದಕಲ್, ಬಿಓ ವೆಂಕಟೇಶ ಮುಂತಾದವರು ಉಪಸ್ಥಿತರಿದ್ದರು.
ಪೊಲೀಸ್, ಗೃಹರಕ್ಷಕ ದಳ ಹಾಗೂ ಶಾಲಾ ವಿದ್ಯಾರ್ಥಿಗಳ ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಿಕ್ಷಕಿ ಜಯಶ್ರೀ ಹಕ್ಕಂಡಿ ನಿರೂಪಿಸಿದರು. ಶಿಕ್ಷಕ ಆನಂದ ನಾಗಮ್ಮ ಸ್ವಾಗತಿಸಿದರು.