10

ಶಾಸಕರಿಂದ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 18- ತಾಲೂಕಿನ ಕಲ್ಲತಾವರೇಗಾ ಗ್ರಾಮದಲ್ಲಿ ಬಹಳ ದಿನಗಳಿಂದ ಬಾಕಿ ಇದ್ದ ನಿವೇಶನ ೧೫೦ ರಲ್ಲಿ ೧೩೫ ನಿವೇಶನ ರಹಿತರಿಗೆ ಶಾಸಕ ಗಾಲಿ ಜನಾರ್ಧನರಡ್ಡಿ ಹಕ್ಕು ಪತ್ರ ವಿತರಿಸಿದರು.

ಗ್ರಾಮೀಣ ಭಾಗದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕೆಂಬ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಗ್ರಾಮೀಣ ಆಶ್ರಯ ಯೋಜನೆಯಡಿ ಭೂಮಿ ಖರೀದಿಸಲಾಗಿದ್ದು ಈ ದಿನದಂದು ಹಕ್ಕು ಪತ್ರ ವಿತರಣೆಗೆ ಕ್ರಮವಹಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಕ್ಕೂ ಮೂಲಭೂತ ಸೌಲಭ್ಯ ಒದಗಿಸಲು ವಿವಿಧ ಯೋಜನೆಗಳಡಿ ಅನುದಾನವನ್ನು ಒದಗಿಸಲಾಗಿದ್ದು ಗ್ರಾಮೀಣ ಭಾಗದ ಜನರು ಪ್ರತಿಯೊಬ್ಬರು ನಿವೇಶನ ಹೊಂದಬೇಕೆAಬ ಉದ್ದೇಶದಿಂದ ೧೩೫ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಮಾನ್ಯ ಪ್ರಧಾನಮಂತ್ರಿಗಳ ಆಶಯದಂತೆ ಪ್ರತಿಯೊಬ್ಬರಿಗೂ ಸೂರು ಹೊಂದುವದಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ವಿವಿಧ ಯೋಜನೆಯಡಿ ಮನೆ ಮಂಜೂರು ಮಾಡಲಾಗುವದು ಎಂದರು.

ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ ಪ್ರತಿಯೊಂದು ಕುಟುಂಬಕ್ಕೆ ಆಹಾರ ನೀರು, ಬಟ್ಟೆ ಎಷ್ಟು ಮುಖ್ಯವೋ ನಿವೇಶನ ಮತ್ತು ಮನೆ ಕೂಡಾ ಅಷ್ಟೇ ಮುಖ್ಯ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಂದು ಕುಟುಂಬವು ಅನುಸರಿಸಬೇಕೆಂದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ತಹಶೀಲ್ದಾರ ವಿಠ್ಠಲ್ ಚೌಗಲಾ, ಗ್ರಾಮ ಪಂಚಾಯತ ಅಧ್ಯಕ್ಷ ಗಂಗಪ್ಪ ನಾಯಕ, ಉಪಾಧ್ಯಕ್ಷೆ ಶಾಹೀದ್ ಬೇಗಂ, ಪಂಚಾಯತ ಅಭಿವೃದ್ದಿ ಅಧಿಕಾರಿ ಯಮನೂರಪ್ಪ ಕಬ್ಬಣ್ಣವರ್, ಗ್ರಾಮ ಪಂಚಾಯತ ಸದಸ್ಯರಾದ ಅಶೋಕ ಗುಳದಳ್ಳಿ, ಮಂಜುಳಾ ಹುಣಶಿಹಾಳ, ಶಿವಪುತ್ರಪ್ಪ ಪೂಜಾರ, ಸರೋಜ ಬಂಗಾಳಿ, ಗ್ರಾಮದ ಮುಖಂಡರಾದ ಅಂಬಣ್ಣ ಮಾದಾಪುರ, ಕೊಟ್ರಯ್ಯ ಸಸಿಮಠ, ಪತ್ರೆಪ್ಪ ಏಣಿಗಿ, ಗಾಳಿದೇವಪ್ಪ ಹರಿಜನ, ಮಾರುತಿ ತಳವಾರ, ನಿವೃತ್ತ ಪಿಡಿಒ ಶರಣಯ್ಯ ಸಸಿಮಠ ಸಿದ್ದನಂಜಯ್ಯ, ನಿವೃತ್ತ ಕಾರ್ಯದರ್ಶಿ ಬೆಳ್ಳೆಪ್ಪ ಅಡಿಗಿ ಗ್ರಾಮ ಪಂಚಾಯತ ಸರ್ವ ಸದಸ್ಯರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!