1

ರಾಯರಡ್ಡಿ ರಾಜ್ಯದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ : ಸಚಿವ ಗುಂಡುರಾವ್

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 23- ಶಾಸಕ ಬಸವರಾಜ ರಾಯರಡ್ಡಿ ಅವರು ರಾಜ್ಯದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಹೇಳಿದರು.

ತಾಲೂಕಿನ ಬಂಡಿ ಮತ್ತು ಚಿಕ್ಕಮ್ಯಾಗೇರಿ, ಬಳಗೇರಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ. ಬ್ರೀಜ್ ಕಂ ಬ್ಯಾರೇಜ್ ಯಲಬುರ್ಗಾದಿಂದ ಬಂಡಿ ಗ್ರಾಮದ ವರಿಗೂ ಪಕ್ಕಾ ರಸ್ತೆ ಡಾಂಬರೀಕರಣ ಕಾಮಗಾರಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಸೇವೆ ಅತಿಮುಖ್ಯವೆಂದು ತ್ವರಿತಗತಿಯಲ್ಲಿ ಬೇರೆ ಕಟ್ಟಡದಲ್ಲಿ ಸೇವೆ ನೀಡುತ್ತಿರುವುದು ಅಂತಿಮವಾಗಿ ಜನರಿಗೆ ಸೇವೆ ನೀಡುವುದು ನಮ್ಮ ಆದ್ಯ ಕರ್ತವ್ಯ ಯಲಬುರ್ಗಾ ವಿಧಾನ ಸಭಾ ತಮ್ಮ ಕ್ಷೇತ್ರದಲ್ಲಿ ರಾಯರಡ್ಡಿಯವರು ದೂರದೃಷ್ಟಿಯಿಂದ ೩ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬ್ರೀಜ್ ಕಂ-ಬ್ಯಾರೇಜ್ ಹಾಗೂ ಯಲಬುರ್ಗಾಯಿಂದ ಬಂಡಿ ಗ್ರಾಮದವರಿಗೂ ಡಾಂಬರ ರಸ್ತೆ ನಿರ್ಮಿಸುವದು. ಈ ಕ್ಷೇತ್ರದಲ್ಲಿ ಅತಿಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ಹೊಂದಿವೆ ಎಂದರು.

ಅಗತ್ಯ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ ಆಯ ಗ್ರಾಮಗಳ ಸಾರ್ವಜನಿಕರು ಕಟ್ಟಡ ಕಾಮಗಾರಿ ಗೋಸ್ಕರ ಜಾಗವನ್ನು ಓದಗಿಸಕೂಡಬೇಕು ಡಿಎಚ್‌ಓ ಮತ್ತು ಟಿಎಚ್‌ಓ ಎಲ್ಲರೂ ಸೇರಿ ಜಾಗವನ್ನು ನೋಡಿಕೊಂಡು ಅತಿ ಶೀಘ್ರದಲ್ಲಿ ಒಂದು ವರ್ಷದಲ್ಲಿ ಈ ೩ ಆರೋಗ್ಯ ಕೇಂದ್ರ ಕಾಮಗಾರಿ ಪ್ರಾರಂಭಮಾಡಬೇಕುಎAದು ಆರೋಗ್ಯ ಸಚಿವರು ಹೇಳಿದರು.

ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ನಮ್ಮ ಕ್ಷೇತ್ರದ ಬಂಡಿ, ಚಿಕ್ಕಮ್ಯಾಗೇರಿ, ಬಳಗೇರಿ, ಈ ಗ್ರಾಮಗಳಿಗೆ ೩ ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ಕಾರದಿಂದ ಮಂಜೂರು ಮಾಡಸಿದ್ದೇನೆ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಸುಸಜ್ಜಿತವಾಗಿ ನಿರ್ಮಾಣವಾಗುವದು ಇಂದು ಸದ್ಯಕ್ಕೆ ಬೇರ ಕಟ್ಟಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭವಾಗುತ್ತದೆ ಇದರ ಸದುಪಯೋಗ ಗ್ರಾಮದವರು ಸುತ್ತಲಿರುವ ಗ್ರಾಮದ ಜನರು ಉಪಯೋಗ ತಗದುಕೋಳಬೇಕು. ಯಲಬುರ್ಗಾದಿಂದ ಬಂಡಿ ಗ್ರಾಮದವರಿಗೂ ೧೯ ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಬಂಡಿ ಕಡಬಲಕಟ್ಟಿ ಮದ್ಯೆ ಹರಿಯುವ ಹಳ್ಳಕ್ಕೆ ಬ್ರೀಜ್ ಕಂ-ಬ್ಯಾರೇಜ್ ಬಂಡಿ ಹಾಗೂ ಇನ್ನಿತರ ಗ್ರಾಮಗಳಿಗೆ ಹೂಸ್ ಬಸ್ ನಿಲ್ದಾಣಗೋಸ್ಕರ ಜಮೀನು ಅವಶ್ಯಕತೆಯಿದೆ ಮತ್ತು ೯೭೦ ಕೋಟಿ ವೆಚ್ಚದಲ್ಲಿ ೧೨೦೦ಎಕ್ಕರೆ ಕೆರಿ ತುಂಬಿಸುವ ಯೋಜನೆ ಮುಂಬ ಬರುವ ದಿನಗಳಲ್ಲಿ ಪ್ರಾರಂಭ ಕುಕನೂರು ಪಟ್ಟಣದಲ್ಲಿ ೪೨ಕೋಟಿ ವಚ್ಚದಲ್ಲಿ ೧೦೦ ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ಮಂಜೂರು ಆಗಿದೆ ನನಗೆ ಗೋತ್ತರಿವದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವದು ನನ್ನ ಕನಸು ನಾನು ಯಾವ ದೇವರ ಗುಡಿ ಕೈ ಮುಗಿಯುವದಿಲ್ಲ ನಾನು ಕ್ಷೇತ್ರದ ಜನರಿಗೆ ಕೈಮುಗಿಯುತ್ತೇನೆ ಕ್ಷೇತ್ರದಲ್ಲಿ ಇರುವ ಮತದಾರರು ದೇವರು ಎಂದು ನಂಬಿದ್ದೇನೆ ಜನ ಸೇವೆಯೇ ಜನಾರ್ಧನ ಸೇವೆ ರಾಷ್ಟಿçÃಯ ಹೆದ್ದಾರಿ ಗದಗ-ವಾಡಿ ರೈಲ್ವೆ ಯೋಜನೆ, ಇಂಜಿನಿಯರಿ0ಗ್ ಕಾಲೇಜು, ಮುರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಐಟಿಐ ಕಾಲೇಜು, ಸಮುದಾಯ ಭವನ, ಬಸ್ ನಿಲ್ದಾಣದ, ಸಿಸಿ ರಸ್ತೆ, ಬಸ್ ಡೀಪೋ, ಪಿಜಿ ಸೆಂಟರ್, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಬಸವರಾಜ ತೆನ್ನಳ್ಳಿ, ತಾ.ಪಂ ಇಓ ಸಂತೋಷ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣ ಆರೋಗ್ಯ ಕೇಂದ್ರ ಡಿಎಚ್‌ಓ ಡಾ.ಲಿಂಗರಾಜ ಟಿ., ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚೆಂಡೂರ, ಯಂಕಣ್ಣ ಯರಾಶಿ, ವೀರನಗೌಡ್ರ ಪೋಲಿಸ್ ಪಾಟೀಲ, ಅಡಿವಪ್ಪ ಜಿ ಬಾವಿಮನಿ, ಅಶೋಕ ತೋಟದ, ಡಾ.ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಸುಧೀರ್ ಕೂರ್ಲಹಳ್ಳಿ, ಈರಪ್ಪ ಕುಡಗುಂಟಿ, ಕೆರಿಬಸಪ್ಪ ನಿಡಗುಂದಿ, ರಾಮಣ್ಣ ಸಾಲಭಾವಿ, ಡಾ.ನಂದಿತಾ ದಾನರಡ್ಡಿ, ಮಹೇಶ ಹಳ್ಳಿ, ಬಿ.ಎಂ.ಶಿರೂರ, ಗಿರೀಜಾ ರೇವಣಪ್ಪ ಸಂಗಟಿ, ಫರೀದಾಬೇಗಂ, ಗ್ರಾಮ ಪಂಚಾಯತಿ ಅಧ್ಯಕ್ಷ ರತ್ನಮ್ಮ ವಣಗೇರಿ, ಮಲ್ಲು ಜಕ್ಕಲಿ ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!