ನೀರಲಿಗಿ ಗ್ರಾಮದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೈಮಾಸ್ಕ್ ಅಳವಡಿಸುವ ಕಾಮಗಾರಿಗೆ ಅಡಿಗಲ್ಲು

ಎಲ್ಲಾ ಗ್ರಾಮಕ್ಕೂ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ಮೊದಲ ಆದ್ಯತೆ : ಶಾಸಕ ಹಿಟ್ನಾಳ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 16- ವಿಧಾನಸಭ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಅಳವಂಡಿ ಜಿ.ಪಂ. ವ್ಯಾಪ್ತಿಯ ನೀರಲಿಗಿ, ಮತ್ತೂರು, ಹನಕುಂಟಿ, ತಿಗರಿ, ಬೆಟಗೇರಿ, ಬೈರಾಪುರ, ಬೋಚನಹಳ್ಳಿ, ನಿಲೋಗಿಪುರ ಹಾಗೂ ಹಲವಾಗಲಿ ಗ್ರಾಮಗಳಲ್ಲಿ ಅಂದಾಜು ಮೊತ್ತ 8 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಹಾಗೂ ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದರು.

ನೀರಲಿಗಿ ಗ್ರಾಮದಲ್ಲಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಸರ್ಕಾರದಿಂದ ಬರುವ ಸೌಲತ್ತುಗಳನ್ನು ಕ್ಷೇತ್ರದ ಪ್ರತಿ ಗ್ರಾಮಕ್ಕೂ ಒದಗಿಸುವುದಕ್ಕೆ ಆದ್ಯತೆಯನ್ನು ನೀಡಲಾಗುತಿದೆ. ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಶಾಲಾ ಕೊಠಡಿ, ಸ್ಮಾರ್ಟ್ ಕ್ಲಾಸ್, ಹೈಮಾಸ್ಕ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಮಳೆಯ ಕಾರಣ ಕಾರ್ಯಕ್ರಮ ರದ್ದು : ಇಂದು ಸತತವಾಗಿ ಸುರಿದ ಮಳೆಯಿಂದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ನೀರಲಿಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ಮತ್ತೂರು, ಹನಕುಂಟಿ, ತಿಗರಿ, ಬೆಟಗೇರಿ, ಬೈರಾಪುರ, ಬೋಚನಹಳ್ಳಿ, ನಿಲೋಗಿಪುರ ಹಾಗೂ ಹಲವಾಗಲಿ ಗ್ರಾಮಗಳಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ಮೋಟಕುಗೊಳಿಸಿದರು.

ಈ ವೇಳೆ ಮಾಜಿ ಜಿ.ಪಂ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ, ಭರಮಪ್ಪ ಹಟ್ಟಿ, ವೆಂಕನಗೌಡ್ರ್ ಹಿರೇಗೌಡ್ರ್, ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುನಿರಾಬಾದ, ಕಳಕಪ್ಪ ಕಂಬಳಿ, ತೋಟಪ್ಪ ಕಾಮನೂರು, ಹನಮೇಶ್ ಹೊಸಳ್ಳಿ, ಭೀಮಣ್ಣ ಬೋಚನಹಳ್ಳಿ, ಕೆಡಿಪಿ ಸದಸ್ಯ ಕುರುಗೋಡು ರವಿ, ಗುರುಬಸವರಾಜ್ ಹಳ್ಳಿಕೇರಿ, ಪ್ರಕಾಶ್ ವಕೀಲರು, ಬಸಣ್ಣ ಕತ್ತಿ, ತಹಶೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕ ಪಂಚಾಯತ್ ಇಓ ದುಂಡೇಶ್ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!