WhatsApp Image 2024-08-17 at 6.18.56 PM

ಟಿ.ಬಿ ಡ್ಯಾಂ 3ನೇ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ : ಶಾಸಕ ಹೆಚ್.ಆರ್.ಗವಿಯಪ್ಪ ಹರ್ಷ

ಕರುನಾಡ ಬೆಳಗು ಸುದ್ದಿ

ವಿಜಯನಗರ, 17- ಕಳೆದ ಎಂಟು ದಿನಗಳಿಂದ ರಾಜ್ಯದ ಜನರ ಗಮನ ಸೆಳೆದ ತುಂಗಭದ್ರ ಜಲಾಶಯದ 19 ನೇ ಗೇಟ್ ಕಿತ್ತು ಹೋದ ಪ್ರಕರಣಕ್ಕೆ ಇಂದು ಜಯ ದೊರಕಿದೆ. ಜಲಾಶಯಗಳ ಗೇಟ್ ಗಳ ತಜ್ಞ ಕನಯ್ಯ ನಾಯ್ಡು ಅವರ ಪ್ರಯತ್ನಕ್ಕೆ ಜಯ ದೊರಕಿದೆ.

ಇಂದು ಸಂಜೆಯವರೆಗೂ ಮೂರು ಗೇಟ್ ಗಳ ಅಳವಡಿಕೆ ಕಾರ್ಯಯಶಸ್ವಿ ಯಾಗಿದ್ದು, ಇನ್ನು ಒಂದು ಗೇಟ್ ಬಹುಶಃ ಅತೀ ಸುಲಭದ ಕಾರ್ಯವಾಗಿದೆ.

ಕಳೆದ ಎರಡು ದಿನಗಳಿಂದ ಯಾವ ಮಾದ್ಯಮದವರಿಗೂ ಹತ್ತಿರ ಬಿಡದೇ ಕಾರ್ಯ ಯಶಸ್ವಿಯಾಗಿ ಜರುಗುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಆರ್.ಗವಿಯಪ್ಪ. ಹಗಲು ರಾತ್ರಿ ಎನ್ನದೆ ಗೇಟ್ ಅಳವಡಿಕೆ ಕಾರ್ಯದ ಸಮಯದಲ್ಲಿ ಸ್ಥಳದಲ್ಲಿ ಹಾಜರಿದ್ದು ಕೆಲಸ ವೀಕ್ಷಿಸುತ್ತಿದ್ದರು.

ಅವರು ಶನಿವಾರ 17ರಂದು ತುಂಗಭದ್ರಾ ಆಣೆಕಟ್ಟಿಗೆ ಭೇಟಿ ನೀಡಿದರು. ಮೂರನೇ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಕಾರ್ಯದ ವೀಕ್ಷಣೆ ನಡೆಸಿದರು. 3ನೇ ಗೇಟ್ ಅಳವಡಿಕೆ ಕಾರ್ಯ ಯಶ ಕಂಡ ಹಿನ್ನೆಲೆಯಲ್ಲಿ ಆಣೆಕಟ್ಟಿಗೆ ಭೇಟಿ ನೀಡಿ ಹರ್ಷ ವ್ಯಕ್ತಪಡಿಸಿದರು.

ಗೇಟ್ ಅಳವಡಿಕೆಗೆ ಮಾರ್ಗದರ್ಶನ ಮಾಡಿದ ಡ್ಯಾಮ್ ತಜ್ಞ ಕನಯ್ಯ ನಾಯ್ಡು ಅವರು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಮತ್ತು ಕಾರ್ಯನಿರ್ವಹಿಸಿದ ಪ್ರತಿಯೊಬ್ಬರಿಗೂ ಹಾಗು ಸಾರ್ವಜನಿಕರನ್ನು ಜಲಾಶಯದ ಬಳಿ ಬರದಂತೆ ತಡೆದು ಕೆಲಸ ಸುಗಮವಾಗಲು ಸಹಕರಿಸಿದ ಪೋಲೀಸ್ ಸಿಬ್ಬಂದಿಗೂ ಇದೆ ವೇಳೆ ಅಭಿನಂದನೆಗಳು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!