10

ಶಾಸಕ ರೆಡ್ಡಿಯಿಂದ ಶಾಲಾ ಮಕ್ಕಳಿಗೆ ವಾಹನ ಕೊಡುಗೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 21- ತಾಲೂಕಿನ ರಂಗಾಪುರ, ಜಂಗ್ಲಿ, ಚಿಕ್ಕರಾಂಪುರ ಗ್ರಾಮಗಳ ಶಾಲಾ ಮಕ್ಕಳಿಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರು ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದಂತೆ ಅವರ ವಿಶ್ವ ಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆಯ ವತಿಯಿಂದ ಸ್ವಂತ ಹಣದಲ್ಲಿ ಶಾಲಾ ವಾಹನವನ್ನು ಖರೀದಿಸಿ, ರಂಗಾಪುರ (ಜಂಗ್ಲಿ) ಗ್ರಾಮದಲ್ಲಿ ಶಾಸಕ ಜನಾರ್ದನ ರೆಡ್ಡಿಯವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಅರುಣರವರು ಹೊಸ ಶಾಲಾ ವಾಹನಕ್ಕೆ ಚಾಲನೆ ನೀಡಿದರು.

ಲಕ್ಷ್ಮಿ ಅರುಣರವರು ಸ್ವತಃ ತಾವೇ ಬಸ್ಸಿನಲ್ಲಿ ಮಕ್ಕಳೊಂದಿಗೆ ಕುಳಿತು ಆನೆಗುಂದಿಯ ಶಾಲೆಯವರೆಗೆ ಚಾಲನೆ ನೀಡಿದ ಹೊಸ ವಾಹನದಲ್ಲಿ ತೆರಳಿ ಮಕ್ಕಳನ್ನು ಶಾಲೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

ಮುಖಂಡ ಮನೋಹರಗೌಡ ಹೆರೂರ ಮಾತನಾಡಿ ಚುನಾವಣಾ ಪೂರ್ವದಲ್ಲಿ ಶಾಸಕರು ಶಾಲಾ ಮಕ್ಕಳಿಗೆ ಭರವಸೆ ನೀಡಿದಂತೆ ರಂಗಾಪುರ, ಜಂಗ್ಲಿ, ಚಿಕ್ಕರಾಂಪುರ ಗ್ರಾಮಗಳ ಶಾಲಾ ಮಕ್ಕಳಿಗೆ ಶಾಲಾ ವಾಹನ ಸ್ವಂತ ಖರ್ಚಿನಲ್ಲಿ ನೀಡಿ ಶಾಲಾ ಮಕ್ಕಳ ಪ್ರಶಂಸೆಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಪಾತ್ರರಾಗಿದ್ದಾರೆ. ನುಡಿದಂತೆ ನಡೆದ ಶಾಸಕರಾಗಿದ್ದಾರೆ. ಶಾಲಾ ಮಕ್ಕಳ ಹಲವು ವರ್ಷಗಳ ಕನಸು ನನಸಾಗಿದೆ ಎಂದರು.

ಈ ಸಂದರ್ಭದಲ್ಲಿ ಆನೆಗುಂದಿ ಭಾಗದ ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!