ಶಾಸಕರ ಸೂಚನೆಯಂತೆ ನಗರದ ಸರ್ವೋತುಮುಖ ಅಭಿವೃದ್ಧಿ : ರಮೇಶ ಚೌಡ್ಕಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 21- ಶಾಸಕ ಗಾಲಿ ಜನಾರ್ಧನರೆಡ್ಡಿಯವರ ಸೂಚನೆಯಂತೆ ನಗರದ ಸರ್ವೋತುಮುಖ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಹೇಳಿದರು.
ನಗರದ ನಗರಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಅಧಿಕಾರ ಪದಗ್ರಹ ಮಾಡಿ ಇವತ್ತು ಶಾಸಕ ಗಾಲಿ ಜನಾರ್ಧನರೆಡ್ಡಿ ಧರ್ಮಪತ್ನಿ ಲಕ್ಷಿö್ಮ ಅರುಣಾ, ನಗರಸಭೆ ಅಧ್ಯಕ್ಷ ಮೌಲಾಸಾಬರವರ ನೇತೃತ್ವದಲ್ಲಿ ಪದಗ್ರಹಣ ಮಾಡಿದ್ದವೆ ಎಂದರು.
ನಗರಸಭೆ ಅಧ್ಯಕ್ಷ ಮೌಲಾಸಾಬ ಮಾತನಾಡಿ ಈಗಾಗಲೇ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಗಂಗಾವತಿ ನಗರದ ೩೫ವಾರ್ಡುಗಳ ಅಭಿವೃದ್ದಿಕಾರ್ಯ ಭರ ನಡೆಸಲು ನಗರಸಭೆ ಪೌರಾಯುಕ್ತರಿಗೆ ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಧರ್ಮಪತ್ನಿ ಲಕ್ಷಿö್ಮ ಅರುಣಾ, ನಗರಸಭೆ ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೇಶ, ಶಾಸಕರ ಆಪ್ತ ಸಹಾಯಕ ಅಲಿಖಾನ, ಮುಖಂಡ ಪಂಪಾಪತಿ ಸಿಂಘನಾಳ, ವಿರಭದ್ರಪ್ಪ ನಾಯಕ ವಡ್ರಟ್ಟಿ, ಮನೋಹರಗೌಡ ಹೇರೂರ, ಕೃಷ್ಣಪ್ಪ ನಾಯಕ, ಯಮನೂರ ಚೌಡ್ಕಿ, ದುರುಗೇಶ, ಮಂಜುಳಾ ಚೌಡ್ಕಿ, ನಗರಸಭೆ ಸದಸ್ಯ ಸೋಮನಾಥ ಭಂಡಾರಿ, ನವಿನ ಮಾಲಿಪಾಟೀಲ, ಉಸ್ಮಾನ ಬಿಚಗತ್ತಿ, ಜಬ್ಬಾರಬೇಗ, ಜುಬೇರ, ಮಹಮ್ಮದ ಮುಂತಾದವರು ಉಪಸ್ಥಿತರಿದ್ದರು.
