3

ಎನ್‌ಕೆಪಿಎಂ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ, ಚಾಚಾ ಸ್ಮರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 16- ನಗರದ ಕುಷ್ಟಗಿ ರಸ್ತೆಯಲ್ಲಿರುವ ಎನ್‌ಕೆಪಿಎಂ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ ಹಾಗೂ ಚಾಚಾ ಸ್ಮರಣೆಯನ್ನು ಮಕ್ಕಳು, ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಸೇರಿ ಆಚರಿಸಿ ಸಂಭ್ರಮಿಸಿದರು.

ಭಾರತದ ಮೊದಲ ಪ್ರಧಾನಮಂತ್ರಿ ನೆಹರು ಅವರ ಜನ್ಮ ದಿನದ ಅಂಗವಾಗಿ ದೇಶಾದ್ಯಂತ ನಡೆಯುವ ಮಕ್ಕಳ ದಿನಾಚರಣೆಯನ್ನು ಶಾಲೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಮಕ್ಕಳಿಗೆ ಶಿಕ್ಷಕರು ಸಿಹಿ ಕೊಟ್ಟು ಶುಭ ಕೋರಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಮಕ್ಕಳು ನೆಹರು ಅವರ ಕುರಿತು ಭಾಷಣ ಮಾಡಿ ಮೆಚ್ಚುಗೆ ಗಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಧುಮತಿ ಪಟ್ಟಣಶೆಟ್ಟರ್, ಮುಖ್ಯೋಪಾಧ್ಯಾಯರಾದ ಸವಿತಾ ಗೌಡರ್, ಶಿಕ್ಷಕರಾದ ಲಕ್ಷ್ಮೀ, ಸವಿತಾ ಸಾಕರೆ, ರಂಗಮ್ಮ, ಜುಲೇಖ ಬೇಗಂ, ಲಕ್ಷ್ಮೀ ವ್ಯಾಸಮುದ್ರೆ, ರೇಣುಕಾ ಬೇಡವಟಿಗಿ, ಶರಣವ್ವ ಎಂ.ಪಿ, ಸುಜಾತಾ, ನಿರ್ಮಲಾ ಹಿರೇಮಠ ಮಕ್ಕಳು ಇದ್ದರು.

ಸಂಸ್ಥೆಯ ಕಾರ್ಯದರ್ಶಿ ಮಧುಮತಿ ಪಟ್ಟಣಶೆಟ್ಟರ್ ಮಾತನಾಡಿ, ಮಕ್ಕಳು ಮುಂದಿನ ನಾಯಕರು ಎನ್ನುತ್ತೇವೆ ಆದರೆ ಮಕ್ಕಳೇ ನಿಜವಾದ ಭವಿಷ್ಯ ರೂಪಿಸುವ ನಾಯಕರು, ಇಂದಿನ ಪ್ರಜೆಗಳು. ಮಕ್ಕಳ ಮನಸ್ಸು ಬಿಳಿ ಹಾಳೆಯ ರೀತಿ ಅಲ್ಲಿ ಏನು ಬರೆಯಬೇಕು ಎಂಬುದನ್ನು ಪೋಷಕರು ಮತ್ತು ಶಿಕ್ಷಕರು ಆಲೋಚಿಸಿ ಬರೆಯಬೇಕು, ದೇಶವನ್ನು ಕಟ್ಡುವ ನಾಡನ್ನು ಉತ್ತಮವಾಗಿ ನಡೆಸುವ ಹಾದಿಯನ್ನು ಕಲಿಸಬೇಕು, ಸಂಸ್ಕಾರಯುತರನ್ನಾಗಿ ಮಾಡಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!