8

ವಿದ್ಯಾರ್ಥಿಗಳು ಸತತ ಪರಿಶ್ರಮಿಸಿದರೆ ಯಾವುದು ಅಸಾಧ್ಯವಲ್ಲ : ಸಿಇಓ ಸಂಕನೂರು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, ೨೩- ಜಿಲ್ಲಾಡಳಿತ ಬಳ್ಳಾರಿ, ಜಿಲ್ಲಾ ಪಂಚಾಯತ್ ಬಳ್ಳಾರಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಸಮೃದ್ಧಿ ಯೋಜನೆಯ ಅಡಿಯಲ್ಲಿ ಓಇಇಖಿ, ಅಇಖಿ, ಇಟಿgಟish ಪರೀಕ್ಷೆಗಾಗಿ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನಾ ಗೀತೆಯನ್ನು ಅರ್ಥಶಾಸ್ತ್ರದ ಉಪನ್ಯಾಸಕರಾದ ಟಿ.ತಿಮ್ಮಪ್ಪ ನೆರವೇರಿಸಿದರು, ಭೌತಶಾಸ್ತ್ರದ ಉಪನ್ಯಾಸಕರಾದ ಬಿಪಿ ಕಲ್ಲಪ್ಪ ಗಣ್ಯಮಾನ್ಯರನ್ನು ಸ್ವಾಗತಿಸಿದರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ.ಪಾಲಾಕ್ಷ ಪ್ರಾಸ್ತಾವಿಕ ನುಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ್ ಉದ್ಘಾಟಿ ವಿದ್ಯಾರ್ಥಿಗಳು ಸತತ ಪರಿಶ್ರಮವಹಿಸಿ ಅಭ್ಯಾಸ ಮಾಡಿದರೆ ಯಾವುದು ಅಸಾಧ್ಯವಲ್ಲ ಇದು ನಿಮಗೆ ಸುವರ್ಣ ಅವಕಾಶ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ವಿದ್ಯಾರ್ಥಿಗಳು ಜೀವನದ ಮೊದಲ ೨೪ ವರ್ಷಗಳನ್ನು ಸರಿಯಾದ ರೀತಿಯಲ್ಲಿ ನಡೆದರೆ ಮುಂದಿನ ನಿಮ್ಮ ಜೀವನ ಉತ್ತಮವಾಗಿರುತ್ತದೆ ಹೆಚ್ಚು ಹೆಚ್ಚು ಮಕ್ಕಳು ಅಇಖಿ, ಓಇಇಖಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜಕ್ಕೆ ವಿದ್ಯಾರ್ಥಿಗಳು ದಾರಿದೀಪವಾಗಬೇಕು ನಿಮ್ಮ ಬೆಂಬಲಕ್ಕೆ ಸದಾ ನಾನಿರುತ್ತೇನೆ ಎಂದರು.

ಬಳ್ಳಾರಿ ಪ್ರಾಚಾರ್ಯ ಸಂಘದ ಅಧ್ಯಕ್ಷ ಎಂ.ಶ್ರೀಶೈಲ, ವಿವಿಧ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು. ಸ್ಥಳೀಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಪ್ರಾಚಾರ್ಯರಾದ ಪಿ.ನಾಗೇಶ್ವರರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಭೌತಶಾಸ್ತ್ರದ ಉಪನ್ಯಾಸಕ ಅಕ್ಕಿ ಮಲ್ಲಿಕಾರ್ಜುನ ನಿರೂಪಿಸಿದರು, ಆಂಗ್ಲ ಭಾಷೆ ಉಪನ್ಯಾಸಕ ಕೆ.ಪಿ.ಮಂಜುನಾಥ ರೆಡ್ಡಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!