
ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕುಕನೂರ 23- ಶ್ರಾವಣ ಮಾಸದ ಅಂಗವಾಗಿ ಕುಕನೂರು ಪಟ್ಟಣದ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶರಣ ಬಸವೇಶ್ವರ ಪುರಾಣ, ಅಯ್ಯಾಚಾರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ, ಕೃತಿ ಬಿಡುಗಡೆ, ದಾನಿಗಳಿಗೆ ಸನ್ಮಾನ, ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದು ವೀರಯ್ಯ ತೊಂಟದಾರ್ಯಮಠ ಹೇಳಿದರು.
ದಿ.06.08.2024 ರಿಂದ ದಿ.26.08.24ರವರೆಗೆ ಪುರಾಣ ಪ್ರವಚನ ಕಾರ್ಯಕ್ರಮ ಹಾಗೂ ದಿ. 24ರಂದು 1001ಮಹಿಳೆಯರಿಗೆ ಉಡಿ ತುಂಬವ ಕಾರ್ಯಕ್ರಮ, 25ರಂದು ಯಲಬುರ್ಗಾ ಶ್ರೀಧರ ಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜೀಗಳ ಅಡ್ಡ ಪಲ್ಲಕ್ಕಿ, ಹಾಗೂ ಕುಂಭೋತ್ಸವ ಜರುಗುವವು ಎಂದು ಮುದ್ದು ಅಂಟಿ ತಿಳಿಸಿದರು.
ದಿ.26ರಂದು ಸೋಮವಾರ ಸಾಮೂಹಿಕ ವಿವಾಹಗಳು ನಂತರದಲ್ಲಿ ಪ್ರಸಾದ ವಿತರಣೆ, ಪುರಾಣ ಮಹಾ ಮಂಗಲೋತ್ಸವ ಕಾರ್ಯಕ್ರಮವನ್ನು ಪ್ರವಚನಕಾರರಾದ ಕಂಪ್ಲಿ ಕಲ್ಮಠದ ಅಭಿನವ ಪ್ರಭು ಸ್ವಾಮಿಗಳು ನಡೆಸಿಕೊಡುವವರು.
ಅದೇ ದಿನ ಸಾಯಂಕಾಲ 5 ಗಂಟೆಗೆ ಅನ್ನದಾನೀಶ್ವರ ಮಹಾಶಿವಯೋಗಿಗಳ ರಥೋತ್ಸವ ಜರುಗುವುದು.ನಂತರ ಹಾಸ್ಯ ಸಂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಗ್ರಾಮದ ಸಕಲ ಸದ್ಬಕ್ತರು ಹಾಗೂ ಸುತ್ತ ಮುತ್ತಲಿನ ಭಕ್ತಾಧಿಗಳು, ವಿವಿಧ ಸಂಘಟನೆಗಳು, ಮಹಿಳಾ ಸಂಘ ಸಂಸ್ಥೆಯವರು ಆಗಮಿಸಿ ಅನ್ನದಾನೀಶ್ವರನ ಕೃಪೆಗೆ ಪಾತ್ರರಾಗಬೇಕು ಎಂದು ಈ ಮೂಲಕ ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಠದ ಆಡಳಿತ ಮಂಡಳಿಯ ಹಾಗೂ ಪುರಾಣ ಸೇವಾ ಸಮಿತಿಯ ಗದಿಗೆಪ್ಪ ಪವಾಡಶೆಟ್ರ, ಸಂಗಮೇಶ ಕಲ್ಮಠ, ಶಿವುಕುಮಾರ ಭಾವಿಕಟ್ಟಿ, ಪ್ರಭು ಶಿವಶಿಂಪರ, ಆನಂದ ಯತ್ನಟ್ಟಿ ಇನ್ನಿತರರು ಇದ್ದರು.