
ನಗರಸಭೆ ಅಧ್ಯಕ್ಷರಾಗಿ ಮೌಲಾಸಾಬ, ಉಪಾಧ್ಯಕ್ಷರಾಗಿ ಪಾರ್ವತೆಮ್ಮ ಆಯ್ಕೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 27- ನಗರದ ನಗರಸಭೆಯಲ್ಲಿ ಮೋದಲ ಬಾರಿಗೆ ಶಾಸಕ ಗಾಲಿ ಜನಾಧನರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಪಕ್ಷದವತಿಯಿಂದ ನಗರಸಭೆ ಅಧ್ಯಕ್ಷರಾಗಿ ಮೌಲಾಸಾಬ ಡಿ,ಹಾಗೂ ಉಪಾಧ್ಯಕ್ಷರಾಗಿ ಪಾವತೆಮ್ಮದುರುಗೇಶ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಸಹಾಯಕ ಆಯುಕ್ತ ಕ್ಯಾಪ್ಟನ ಮಹೇಶ ಮಾಲಗಿತ್ತಿಯವರ ನೇತೃತ್ವದಲ್ಲಿ ನಡೆದ ಪ್ರಕಿಯೇ ನಂತರ ನಗರಸಭೆ ಅಧ್ಯಕ್ಷರಾಗಿ ಮೌಲಾಸಾಬ 28 ಮತಗಳನ್ನು ಪಡೆದು ಹಾಗೂ ಉಪಾಧ್ಯಕ್ಷರಾಗಿ ಪಾರ್ವತೆಮ್ಮ ದುರುಗೇಶ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಖಾಸಿಮ ಗದ್ವಾಲ 8 ಮತಗಳು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹುಲಿಗೆಮ್ಮ ಕಿರಿಕಿರಿಗೆ 8 ಮತಗಳು ಬಿದ್ದಿವೆ ಎಂದು ತಿಳಿಸಿದರು.
ಇತಿಹಾಸ ದಾಖಲೆ : ಶಾಸಕ ಗಾಲಿ ಜನಾರ್ಧನರೆಡ್ಡಿ ಮಾತನಾಡಿ, ಮೋದಲ ಬಾರಿಗೆ ಗಂಗಾವತಿ ನಗರಸಭೆ ಇತಿಹಾಸದಲ್ಲಿಯೇ ಬಿಜೆಪಿ ಪಕ್ಷದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅಧಿಕಾರಿ ಹಿಡಿದರುವುದು ಇತಿಹಾಸ ಪುಟ ಸೇರುತ್ತದೆ. ಬರುವ ದಿನಗಳಲ್ಲಿ ಗಂಗಾವತಿ ನಗರದ ಅಭಿವೃದ್ದಿ ಚಿತ್ರಣವನ್ನು ಜನರೇ ನೋಡುತ್ತಾರೆ. ಮಾತನಾಡುವುದು ಕಡಿಮೆ ಮಾಡಿ ಅಭಿವೃದ್ದಿ ಮುಖ್ಯವಾಗಿದೆ. ಬಿಜೆಪಿಯ 26 ಸದಸ್ಯರು ಇವರು ಪಕ್ಷೇತರರು ನನ್ನ ಮತ ಸೇರಿ 28 ಮತಗಳು ಚಲಾಯಿಸಿದ್ದವೆ.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ಗಿರೇಗೌಡ, ವಿರುಪಾಕ್ಷಪ್ಪ ಸಿಂಘನಾಳ, ಪಂಪಾಪತಿ ಸಿಂಘನಾಳ ಅನೇಕ ಮುಖಂಡರು ಎಲ್ಲರೂ ಸೇರಿ ಒಮ್ಮತ ತಿಮಾಣ ಮಾಡಿ ಜಾತಿ ಲೆಕ್ಕಿಸದೇ ನಮ್ಮ ನಗರದ ಅಭಿವೃದ್ದಿಗಾಗಿ ಮೌಲಾಸಾಬರನ್ನು ನಗರಸಭೆ ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ಪಾರ್ವತೇಮ್ಮ ದುರುಗೇಶರನ್ನು ಆಯ್ಕೆಮಾಡಿದ್ದವೆ ಎಂದರು.
ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ನಗರಸಭೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಬಾವುಟ ಏರಿಸಲು ಶಾಸಕ ಗಾಲಿ ಜನಾರ್ಧನರೆಡ್ಡಿಯವರ ಅಚಲವಾದ ವಿಶ್ವಾಸವೇ ಕಾರಣವಾಗಿದೆ ಎಂದರು.
ನೂತನ ನಗರಸಭೆ ಅಧ್ಯಕ್ಷ ಮೌಲಾಸಾಬ ಮಾತನಾಡಿ, ನಗರದ ಅಭಿವೃದ್ದಿಯನ್ನು ಶಾಸಕ ಗಾಲಿ ಜನಾರ್ಧನರೆಡ್ಡಿಯವರ ಮಾರ್ಗದರ್ಶನ ಹಾಗೂ ಸರ್ವ ಸದಸ್ಯಯರ ಗಣನೆಗೆ ತೆಗೆದುಕೋಂಡು ಮಾಡುತ್ತನೆ ಎಂದರು.
ಈ ಸಂದರ್ಭದಲ್ಲಿ ಡಾ.ಬಸವರಾಜ ಕ್ಯಾವಟರ, ನೂತನ ನಗರಸಭೆ ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೇಶ, ಗಿರೇಗೌಡ, ಪಂಪಾಪತಿ ಸಿಂಘನಾಳ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಚನ್ನಪ್ಪ ಮಳಗಿ ವಕೀಲ, ನಗರ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ರಾಘವೇಂದ್ರ ಶೇಟ್ಟಿ, ಅಲಿಖಾನ, ಹುಸೆನಪ್ಪ ಮಾದಿಗ, ದುರಗೇಶ ಮುಂತಾದವರು ಉಪಸ್ಥಿತರಿದ್ದರು.