1

ಲೋಕಾಯುಕ್ತರ ಬಲೆಗೆ ಬೆಣಕಲ್ ಪಿಡಿಒ ಕೃಷ್ಣಾರೆಡ್ಡಿ

ಕರುನಾಡ ಬೆಳಗು ಸುದ್ದಿ

ಕುಕನೂರು, 27- ತಾಲೂಕಿನ ಬೆಣಕಲ್ ಗ್ರಾಮ ಪಂಚಾಯಿತಿ ಪಿಡಿಒ ಕೃಷ್ಣಾರೆಡ್ಡಿ ಲೋಕಾಯುಕ್ತರ ಬಲೆಗೆ ಸಿಲುಕಿದ್ದಾರೆ.

9\11 ಫಾರಂ ವಿತರಿಸಲು 40 ಸಾವಿರ ರೂ. ಲಂಚ ಪಡೆದ ಬೆಣಕಲ್ ಪಿಡಿಒ ಕೃಷ್ಣಾರೆಡ್ಡಿ ಅವರನ್ನು ಜಿಲ್ಲಾ ಲೋಕಾಯುಕ್ತರು ಬಂಧಿಸಿದ್ದಾರೆ.

ಬೆಣಕಲ್ ನಿವಾಸಿ ಕೊಟ್ರೇಶ ಗೋಣಿ ಅವರು 9\11 ಫಾರಂಗಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಫಾರಂ ನೀಡಲು 50 ಸಾವಿರ ರೂ. ಕೊಡುವಂತೆ ಪಿಡಿಒ ಬೇಡಿಕೆ ಇಟ್ಟಿದ್ದರು. ಕೊಟ್ರೇಶ ಅವರು ಈ ಕುರಿತು ಕೊಪ್ಪಳ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ರು ಆಧರಿಸಿ, ಲೋಕಾಯುಕ್ತರ ತಂಡ ದಾಳಿ ನಡೆಸಿದ್ದು, ದೂರದಾರರಿಂದ 40 ಸಾವಿರ ರೂ. ಲಂಚ ಪಡೆಯುವಾಗ ಪಿಡಿಒ ಅವರನ್ನು ಹೊಸಪೇಟೆಯ ಡಾಬವೊಂದರಲ್ಲಿ ಬಂಧಿಸಿದರು.

ಈ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಲೋಕಾಯುಕ್ತ ಚಂದ್ರಪ್ಪ, ಸಿಬ್ಬಂದಿಗಳಾದ ವಿಜಯಕುಮಾರ, ಸುನೀಲ್ ಹಾಗೂ ರಾಜೇಶ, ಇದ್ದರು.

Leave a Reply

Your email address will not be published. Required fields are marked *

error: Content is protected !!