ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈ ಜೋಡಿಸಿ : ಪಿ.ಎಂ.ಕುಮಾರಸ್ವಾಮಿ
ಕರುನಾಡ ಬೆಳಗು ಸುದ್ದಿ
ಗ0ಗಾವತಿ, 8- ನವ್ಹೆಂಬರ 4ರಿಂದ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಸರ್ವರೂ ಕೈ ಜೋಡಿಸಿ ಎಂದು ಸ್ವಾಭಿಮಾನ ಆಂದೋಲನದ ಸಂಚಾಲಕ ಬಸವರಾಜ ಪಾಟೀಲ್ ಹೀರಾಪುರಹಾಗೂ ಶಿವಮೊಗ್ಗ ಪರಿಸರ ತಜ್ಞ ಪಿ.ಎಂ.ಕುಮಾರಸ್ವಾಮಿ ಹೇಳಿದರು.
ಅವರು ನಗರದ ಖಾಸಗಿ ಹೋಟಲ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ತುಂಗಭದ್ರಾ ನದಿ ನೈರ್ಮಲಿಕರಣವಾಗುತ್ತಿದೆ.
ಕಾರ್ಖಾನೆಗಳ ತ್ಯಾಜ್ಯ ವಸ್ತುಗಳ ಬಳಕೆ ನೀರು,ಸಾರ್ವಜಿನಿಕರಿಂದ ವಿವಿಧ ತ್ಯಾಜ್ಯಗಳ ಬಿಸಾಡುವದರಿಂದ ನದಿಗಳ ಸ್ಥಿತಿ ಅಪಾಯಕಾರಿಯಾಗಿದೆ. ನದಿಗೆ ತ್ಯಾಜ್ಯ ನೀರು, ಚರಂಡಿ ನೀರುಗಳ ಶುದ್ದಿಕರಣ ಮಾಡಿ ಬಿಟ್ಟಾಗ ನೀರು ಸಂಪದಭರಿತವಾಗಿರುತ್ತದೆ. ನಿರ್ಮಲ ತುಂಗಭಧ್ರಾ ಅಭಿಯಾನವನ್ನು ನವಂಬರ ೪ಕ್ಕೆ ಪ್ರಾರಂಭಸಲಾಗುತ್ತಿದ್ದು ಸರ್ವರೂ ಕೈಜೋಡಿಸಿ ಯಶ್ವಸಿ ಗೋಳಿಸಬೇಕು.
ಶಿವಮೊಗ್ಗ ಜಿಲ್ಲೆಯ ಗಂಗಡಿಕಲ್ಲು ಪ್ರದೇಶದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಶ್ರೀಕ್ಷೇತ್ರ ಕೂಡಲಿಯಲ್ಲಿ ತುಂಗಭದ್ರಾಆಗಿ ೪೦೦ ಕಿ.ಮೀಟರ ಹರಿಯುವ ದೋಡ್ಡದಾದ ಉಪ ನದಿಯು ಮುಂದೆ ಕರ್ನೂಲ ಬಳಿ ಕೃಷ್ಣಾ ನದಿಗೆ ಸೇರುತ್ತದೆ.
ಇಂತಹ ನದಿಗೆ ಸ್ಯೆಯನ್ನು ನದಿ ಪಾತ್ರದ ಗ್ರಾಮ, ಪಟ್ಟಣ ಮತ್ತು ಈ ಮಾಡಿದ ನಗರ ಪ್ರದೇಶದ ತ್ಯಾಜ್ಯಗಳು, ಕಾರ್ಖಾನೆಗಳ ಮಲಿನ ಸೇರಿ ಮಲೀನವಾಗುತ್ತಿದೆ ತುಂಗಾ ಪಾನ ಗಂಗಾಸಾನ್ನ ಎಂಬ ವಾಡಿಕೆ ಮಾಯವಾಗುತ್ತಿದೆ ಶೃಂಗೇರಿಯಿAದ ಗಂಗಾವತಿಯ ಕಿಷ್ಕಿಂಧೆಯವರೆಗೆ ಬೃಹತ ಪಾದಯಾತ್ರೆ ಹಮ್ಮಿಕೊಂಡಿದ್ದವೆ. ನವ್ಹೆಂಬರ ೪ ರಿಂದ ಪ್ರಾರಂಭವಾಗುವ ಪಾದಯಾತ್ರೆ ದಿನಾಲು ಬೆಳ್ಳಿಗ್ಗೆ ೧೦ ಕಿ.ಮೀ ಸಾಯಂಕಾಲ ೧೦ ಕಿ.ಮೀ ವರೆಗೆ ಚಲಿಸಿ ಎಲ್ಲಾ ಕಡೆಯಲ್ಲೂ ಜಲ ಹಾಗೂ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದವೆ.
ಶೃAಗೇರಿಯಲ್ಲಿ ಶೃಂಗೇರಿ ಮಠದ ಗುರುಗಳು ಹಾಗೂ ಇನ್ನಿತರ ಗಣ್ಯರು ಚಾಲನೆ ನೀಡುವರು. ಪಕ್ಷತೀತವಾಗಿ ಜಲ ಶಕ್ತಿ ಉಳಿವಿಗಾಗಿ ಜನಜಾಗೃತಿ ಮಾಡಬೇಕಾಗಿದೆ ಈಗಾಗಲೇ ಶೃಂಗೇರಿ, ಹರಿಹರ ಮರಿಯಮ್ಮನಹಳ್ಳಿ, ಹಗರಿಬೋಮ್ಮನಹಳ್ಳಿ ಎಲ್ಲಾ ಕಡೆಯಲ್ಲೂ ಮಾಹಿತಿ ನೀಡಿದ್ದವೆ. ಪ್ರತಿಯೋಂದು ಗ್ರಾಮ, ನಗರಗಳಿಂದ ಸಾರ್ವಜನಿಕರು ಪಾಲಗೊಳ್ಳುತ್ತಾರೆ.
ನವ್ಹೆಂಬರ ಕೋನೆಯ ವಾರದಲ್ಲಿ ಗಂಗಾವತಿ ನಗರದಲ್ಲಿ ನಡೆಯುವ ನಿರ್ಮಲ ತುಂಗಭದ್ರಾ ಅಭಿಯಾನ ಸಮಾರೋಪ ಸಮಾರಂಭಕ್ಕೆ ಮಂತ್ರಾಲಯ ಶ್ರೀಗಳು ಹಾಗೂ ಕೊಪ್ಪಳ ಗವಿಮಠದ ಶ್ರೀಗಳನ್ನು ಆಹ್ವಾನಿಸಲಾಗಿದೆ ಎಲ್ಲಾ ಸಂಘಟನೆಗಳು ಹಾಗೂ ಪಕ್ಷಾತೀತವಾಗಿ ಗಣ್ಯರು ಪಾಲಗೊಳ್ಳುತ್ತಾರೆ ಸರಕಾರಕ್ಕೂ ಕೂಡ ಒತ್ತಡ ಹಾಕಲಾಗುವುದು ಎಂದರು.
ಕಿಷ್ಕಿಂಧಾ ಜಿಲ್ಲಾ ಹೋರಾ ಟಸಮಿತಿ ಸಂಚಾಲಕ ಸಂತೋಷ ಕೆಲೋಜಿ ಮಾತನಾಡಿ ನಮ್ಮ ಕೊಪ್ಪಳ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲಗೊಳ್ಳೋಣ ಎಂದರು.
ಹಾವೇರಿಯ ನಾಗರಾಜ ಕುಲಕರ್ಣಿ ಅಭಿಯಾನದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ ಎಂ.ಶ0ಕರ, ಮಾಧವ, ದುರುಗಮ್ಮ ಹಳ್ಳ ಸ್ವಚ್ಛತಾ ಆಂದೋಲನ ಸಂಚಾಲಕ ಡಾ.ಶಿವಕುಮಾರ ಮಾಲಿಪಾಟೀಲ ಮುಂತಾದವರು ಉಪಸ್ಥಿತರಿದ್ದರು.
