
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಸೆ.14 ರಂದು ರಾಷ್ಟ್ರೀಯ ಲೋಕ ಆದಾಲತ್ : ರಾಜೀ ಸಂಧಾನದ ಮೂಲಕ ಕೇಸ್ಗಳ ಇತ್ಯಾರ್ಥ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 28- ಕಕ್ಷಿದಾರರು ನೆಮ್ಮದಿಯ ಜೀವನ ನಡೆಸಲು ರಾಜೀಸಂಧಾನಗಳ ಮೂಲಕ ಕೆಲ ವ್ಯಾಜ್ಯಗಳನ್ನು ಲೋಕ ಆದಾಲತ್ ನಲ್ಲಿ ಇತ್ಯಾರ್ಥಪಡಿಸಿಕೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.
ಅವರು ನ್ಯಾಯಾಲಯ ಸಂಕೀರ್ಣದಲ್ಲಿ ಸುದ್ದಿಗೋಷ್ಠಿ ಉದ್ದೆಶಿಸಿ ಮಾತನಾಡಿ ಸೆ.14 ರಂದು ಗಂಗಾವತಿಯ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ ಮಾಡಲಾಗಿದ್ದು ನಾಲ್ಕು ನ್ಯಾಯಾಲಯಗಳಲ್ಲಿ ನಡೆಸಲಾಗುತ್ತದೆ. ಕಕ್ಷಿದಾರರು ಹಾಗೂ ವಕೀಲರು ಇದರ ಸದುಪಯೋಗಪಡಿಸಿಕೊಂಡು ಹಣ ಸಮಯ ಉಳಿಸಬೇಕು.
ನಾಲ್ಕು ತಾಲೂಕ ನ್ಯಾಯಾಲಯದಲ್ಲಿ ಒಟ್ಟು 8801 ಬಾಕಿ ಪ್ರಕರಣಗಳಿವೆ ಸದರಿ ರಾಷ್ಟ್ರೀಯ ಲೋಕ ಅದಾಲತನಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ ಸಾಲ ವಸೂಲಿ, ಮನೆ ಕರ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ, ಜನನ ಮರಣ, ಮತ್ತು ಕ್ರಿಮಿನಲ್ ಕೇಸಸ್ ಗಳನ್ನು ಸೇರಿ 2500 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಲಾಗಿದೆ.
ಕೆಲ ಪ್ರಕರಣಗಳ ವಿಳಂಭ ತಡೆಯಬೇಕು. ಪ್ರಸ್ತುತ ನಾಲ್ಕು ನ್ಯಾಯಾಲಯಗಳಳ್ಲಿ ಮೋಟಾರು ವಾಹನ ಪ್ರಕರಣಗಳು 300, ವೈವಾಹಿಕ ಪ್ರಕರಣಗಳು 50, ಬ್ಯಾಂಕ ಪ್ರಕರಣಗಳು 200, ಚೆಕ್ ಬೌನ್ಸ ಪ್ರಕರಣಗಳು 200, ಜನನ ಮರಣ ಪ್ರಕರಣಗಳು 500, ಕ್ರೀಮಿನಲ್ ಕೇಸಸ್ 1000 ಪ್ರಕರಣಗಳು, ಸಿವಿಲ್ ಪ್ರಕರಣಗಳು 200, ನಿರ್ದಿಷ್ಟ ಪರಿಹಾರ 50 ಪ್ರಕರಣಗಳು ನಾಲ್ಕು ನ್ಯಾಯಾಲಯಗಳು ಸೇರಿ ಲೋಕದ ಅದಾಲತನಲ್ಲಿ ಒಟ್ಟು 2500 ಪ್ರಕರಣಗಳನ್ನು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು, ವಕೀಲರು ಹಾಗೂ ಕಕ್ಷಿದಾರರ ಸಹಕಾರದಲ್ಲಿ ಇತ್ಯಾರ್ಥಪಡಿಸುವ ಗುರಿ ಹೊಂದಲಾಗಿದೆ.
ಕಳೆದ ಜುಲೈನಲ್ಲಿ ಜರುಗಿದ ಲೋಕ ಆದಾಲತ್ ನಲ್ಲಿ ಬಾಕಿ ಪ್ರಕರಣಗಳು 9332 ಲೋಕ ಅದಾಲತಿಗೆ ಆಹ್ವಾನಿಸಿದ್ದು 2018 ಪ್ರಕರಣಗಳು ಇದರಲ್ಲಿ ಲೋಕ ಅದಾಲತನಲ್ಲಿ ರಾಜಿಯಾಗಿದ್ದು 1500 ಪ್ರಕರಣಗಳು ಇತ್ಯರ್ಥಗೊಂಡಿವೆ. ಸೆ.14ರ ಲೋಕಆದಾಲತ್ ಆಯೋಜನೆ ಕುರಿತು ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ ಕಕ್ಷಿದಾರರು ಇದರ ಲಾಭ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ್ ಪಾಟೀಲ ಉಪಸ್ಥಿತರಿದ್ದರು.