IMG-20240725-WA0035

ಬದುಕಿನಲ್ಲಿ ಯಶಸ್ಸು ಕಾಣಲು ಕೌಶಲ್ಯಗಳು ಬಹು ಮುಖ್ಯ : ಡಾ.ಜಯಣ್ಣ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 25- ಬದುಕಿನಲ್ಲಿ ಯಶಸ್ಸನ್ನು ಕಾಣಲು ವಿದ್ಯಾರ್ಥಿಗಳು ಕೇವಲ ಪಠ್ಯವನ್ನಷ್ಟೇ ಅಧ್ಯಯನ ಮಾಡುವುದಲ್ಲ. ಅದರ ಜೊತೆಗೆ ಜೀವನ ಕೌಶಲ್ಯಗಳನ್ನು ಕಲಿತು ಕೊಳ್ಳಬೇಕಾದ ಅಗತ್ಯತೆ ಇದೆಯೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಪೇಟೆಯ ಪ್ರಾಧ್ಯಾಪಕರಾದ ಡಾ ಜಯಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಟ್ನಾಳ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸೆಯ ಕೋಶದ ವತಿಯಿಂದ ನಡೆದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಉಪನ್ಯಾಸ ನೀಡಿದರು.

ಇಂದಿನ ಅಗತ್ಯತೆ ಉದ್ಯೋಗಿಯಾಗುವುದಲ್ಲ, ಉದ್ಯಮಿಯಾಗುವುದು ಕೇವಲ ಒಂದು ವಿಷಯದಲ್ಲಿ ಪರಿಣತಿ ಪಡೆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಕಾಣುವುದು ಕಷ್ಟ ಆ ಕಾರಣಕ್ಕಾಗಿ ಒಬ್ಬರು ಹಲವಾರು ಕೌಶಲ್ಯಗಳನ್ನು ವಿದ್ಯಾರ್ಥಿಗಳು ಕಲಿತುಕೊಳುವಂತೆ ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯರ ಇಬ್ರಾಹಿಂಸಾಬ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ವಿವಿಧ ವಿಷಯಗಳ ಅಧ್ಯಾಪಕರಾದ ಡಾ. ಬಸವರಾಜ, ಪಣಿರಾಜ್, ಪ್ರೊಫೆಸರ್ ನಟರಾಜ್ ಪಾಟೀಲ್, ಮಂಜುನಾಥ್ ಮುತ್ತಾಳ ಮತ್ತು ತಾಜುದ್ದೀನ್ ಕಂಪ್ಯೂಟರ್ ಉಪನ್ಯಾಸಕರು ಉಪಸ್ಥಿತರಿದ್ದರು.

ನಿರೂಪಣೆಯನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕ ಬಸವರಾಜ ಸಂಕನಗೌಡರ, ಸ್ವಾಗತ ಮಂಜುನಾಥ್ ಸ್ವಾಗತ ವಂದನಾರ್ಪಣೆ ಅಡಿವೆಪ್ಪ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!