ಹೆಚ್ಎಲ್ ಸಿ ಕಾಲುವೆಗೆ ನೀರು : ಬಾಗಿನ ಸಮರ್ಪಿಸಿದ ರೈತರು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 25- ಈ ವರ್ಷ ರಾಜ್ಯದಲ್ಲಿ ಸಕಾಲವಾಗಿ ಮಳೆ ಬಂದಿರುವುದರಿಂದ, ತುಂಗಭದ್ರಾ ಜಲಾಶಯದ ಅಧಿಕಾರಿಗಳು ಎಚ್ ಎಲ್ ಸಿ ಕಾಲುವೆಗೆ ನೀರನ್ನು ಬಿಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರು ಸಂಗನಕಲ್ಲು ಕೃಷ್ಣಪ್ಪ ಅವರ ನೇತೃತ್ವದಲ್ಲಿ ಸನಕಲ್ ಮತ್ತು ಚಾಗನೂರ್ ಕಪ್ಗಲ್ ಮತ್ತು ಕೊಳಗಳ್ ಗ್ರಾಮದ ರೈತ ಮುಖಂಡರು ಹೆಚ್ಎಲ್ಸಿ ಕಾಲುವೆಯ 13 14ನೇ ಡಿಸ್ಟ್ರಿಬ್ಯೂಟರ್ ಕಾಲುವೆಗಳ ಹತ್ತಿರ ತುಂಗಮ್ಮ ಗೆ ವಿಶೇಷ ಪೂಜೆ ಸಲ್ಲಿಸಿ ಮತ್ತು ಬಾಗಿನವನ್ನು ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಅರೈತ ಸಂಘದ ಅಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ ಮಾತನಾಡುತ್ತಾ, ಸಕಾಲಕ್ಕೆ ರಾಜ್ಯದಲ್ಲಿ ಮಳೆ ಬಂದಿರುವುದರಿಂದ ರೈತರಲ್ಲಿ ಸಂತಸ ಮೂಡಿರುವದಾಗಿ, ಈ ವರ್ಷ ಉತ್ತಮ ಮಳೆ ಮತ್ತು ಬೆಳೆಗಳು ಆಗಬೇಕೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಟಿಬಿ ಬೋರ್ಡ್ ಜೂನಿಯರ್ ಇಂಜಿನಿಯರ್ ಭಾನುಪ್ರಿಯ, ಆಂಧ್ರಳ್ ಮಾರಣ್ಣ, ಸಂಘದ ಖಜಾಂಜಿ ಕೊಳಗಲ್ ಬೇವಿನ ಗಿಡದ ಎರಿಸ್ವಾಮಿ ತಾಲೂಕ ಅಧ್ಯಕ್ಷರು ಕೊಳಗಲ್ ತಿಮ್ಮಪ್ಪ, ಶ್ರೀರಾಮುಲು ಮತ್ತು ಕೊಳಗಲ್ ಹೊನ್ನೂರಪ್ಪ , ಇತರ ರೈತ ಮುಖಂಡರು ಪಾಲ್ಗೊಂಡಿದ್ದರು.
