
ಸಾಂಸ್ಕೃತಿಕ ಸ್ಪರ್ಧೆ : ಜಿಲ್ಲಾ ಮಟ್ಟಕ್ಕೆ ವಿದ್ಯಾರ್ಥಿಗಳು ಅಯ್ಕೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 01- ಸಂಯುಕ್ತ ಪದವಿ ಪೂರ್ವ ಕಾಲೇಜು, ಮುನಿರಾಬಾದ್‌ನ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಇರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ೨೦೨೪-೨೫ ನೇ ಸಾಲಿನ ಕೊಪ್ಪಳ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ವಿಜೇತ ರಾಗಿ ಕಾಲೇಜಗೆ ಕೀರ್ತಿ ತಂದಿದ್ದಾರೆ.
ಸುಧಾ- ಜನಪದ ಗೀತೆ ದ್ವಿತೀಯ ಸ್ಥಾನ, ವಿಜಯಲಕ್ಷ್ಮಿ ಬಡಿಗೇರ- ದ್ವಿತೀಯ ಸ್ಥಾನ (ಪ್ರಬಂಧ ಸ್ಪರ್ಧೆ) ಕನ್ನಡ ಮಾಧ್ಯಮ, ಖಾಜಲ್ ದೇವಿ ಸಾಹು- ದ್ವಿತೀಯ ಸ್ಥಾನ (ಪ್ರಬಂಧ ಸ್ಪರ್ಧೆ) (ಇಂಗ್ಲೀಷ್ ಮಾಧ್ಯಮ) ಈ ಎಲ್ಲಾ ವಿದ್ಯಾರ್ಥಿಗಳಿಗೆ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ಹಾಗೂ ಪದಾಧಿಕಾರಿಗಳು, ಕಾಲೇಜಿನ ಅಡಳಿತ ಮಂಡಳಿಯ ಅಧ್ಯಕ್ಷ ಎಂ.ಶರಣಬಸವನಗೌಡ ಪಾಟೀಲ್ ಪ್ರಾಚಾರ್ಯ ಬಸವರಾಜ ಉಪನ್ಯಾಸಕರು, ವಿದ್ಯಾರ್ಥಿಗಳು, ಪಾಲಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.