9

ಜನಸ್ಪಂದನ ಕಾರ್ಯಕ್ರಮ : ಜಿಲ್ಲಾಧಿಕಾರಿಗಳಿಂದ ಗ್ರಾಮ ಸಂಚಾರ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 8- ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಅಕ್ಟೋಬರ್ ೮ರಂದು ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಕಾರ್ಯಕ್ರಮದ ಮಧ್ಯೆ ಗ್ರಾಮ ಸಂಚಾರ ಕೈಗೊಂಡರು.

ಮೊದಲಿಗೆ ಹನುಮನಾಳ ಗ್ರಾಮದ ಬದಾಮಿ ರಸ್ತೆಯಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣಕ್ಕೆ ತೆರಳಿದರು. ಅಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ೪೫ ಲಕ್ಷ ರೂ.ವೆಚ್ಚದಲ್ಲಿ 2022 ರಿಂದ ನಡೆಯುತ್ತಿರುವ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಕಾಮಗಾರಿಯ ವೀಕ್ಷಣೆ ನಡೆಸಿದರು. ಕಟ್ಟಡ ಕಾಮಗಾರಿ ಇದುವರೆಗೆ ಏಕೆ ಪೂರ್ಣಗೊಂಡಿಲ್ಲ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕೇಳಿದರು. ಕಾಮಗಾರಿಯು ಗುಣಮಟ್ಟದಿಂದ ನಡೆಯಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಬಳಿಕ ಜಿಲ್ಲಾಧಿಕಾರಿಗಳು, ಹನುಮನಾಳ ಹತ್ತಿರದ ಕಡಿವಾಲ ಗ್ರಾಮಕ್ಕೆ ತೆರಳಿದರು. ಅಲ್ಲಿ ೧ ವರ್ಷದಿಂದ ಹಂದಿ ಸಾಕಣೆ ಮಾಡಿ ಗಮನ ಸೆಳೆದಿರುವ ಗಂಗಯ್ಯ ಕಟಾಪುರಮಠ ಅವರ ಹಂದಿ ಶೆಡ್ ಪ್ರದೇಶಕ್ಕೆ ತೆರಳಿ ವೀಕ್ಷಣೆ ನಡೆಸಿದರು.

ಒಟ್ಟು 100 ಹಂದಿಗಳನ್ನು ಸಾಕಣೆ ಮಾಡಿದ್ದೇನೆ. ಇದುವರೆಗೆ 20 ಹಂದಿಗಳನ್ನು ಮಾರಾಟ ಮಾಡಿದ್ದು ಇದೀಗ ಶೆಡ್‌ನಲ್ಲಿ 80 ಹಂದಿಗಳಿವೆ. ಈ ಹಂದಿ ಸಾಕಣೆಯಿಂದ ಸಾಕಷ್ಟು ಲಾಭವಾಗುತ್ತಿದೆ ಎಂದು ಗಂಗಯ್ಯ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಯ್ಯ ಸೇರಿದಂತೆ ಇನ್ನೀತರರು ಇದ್ದರು.

Leave a Reply

Your email address will not be published. Required fields are marked *

error: Content is protected !!