3

ಜಿಲ್ಲೆಯ ಎಲ್ಲಾ ಅಂಗನವಾಡಿ ಕೆಂದ್ರಗಳಿಗೆ ಉಪ ನಿರ್ದೇಶಕರ ಭೇಟಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 26- ನಗರದ ೭ವಾರ್ಡಿನ ೧೧ ಅಂಗನವಾಡಿ ಕೇಂದ್ರದ ಸಿಲಿಂಗ ಪ್ಲಾಸ್ಟರ ಕುಸಿದು ನಾಲ್ಕು ಮಕ್ಕಳಿಗೆ ತೋಂದರೆಯಾಗಿತ್ತು.

ಎರಡು ಮಕ್ಕಳು ಆರಾಮವಾಗಿ ಅಂಗನವಾಡಿ ಕೆಂದ್ರಗಳಿಗೆ ಬಂದಿದ್ದಾರೆ ಇನ್ನೇರಡು ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ. ಪಿ.ಶಿರಸಗಿ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ವಿಚಾರಿಸಿ ಅಂಗನವಾಡಿ ಕೆಂದ್ರಕ್ಕೆ ಭೇಟಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ.ಪಿ. ಶಿರಸಗಿ ಮಾತನಾಡಿ ಈಗಾಗಲೇ ಜಿಲ್ಲೆಯ ಎಲ್ಲಾ ಅಂಗನವಾಡಿ ಕೆಂದ್ರಗಳ ವರದಿ ತರಿಸಿಕೋಂಡಿದ್ದು ೧೯೬೦ ಅಂಗನವಾಡಿ ಕೆಂದ್ರಗಳಿದ್ದು,೧೩೮೫ ಸ್ವಂತ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳಿವೆ ಶಿಥಿಲಾ ಅವಸ್ಥೆ ಇರುವ ಕೇಂದ್ರಗಳ ವರದಿ ಯನ್ನು ತಾಲೂಕ ಸಿಡಿಪೋ ಗಳಿಗೆ ಕಳುಹಿಸಲು ಸೂಚಿಸಿದ್ದನೆ.

ಗಂಗಾವತಿ ಅಂಗನವಾಡಿ ಕೆಂದ್ರದ ಘಟನೆಗೆ ನೇರವಾಗಿ ಗುತ್ತೆದಾರ ಕಾರಣನಾಗುತ್ತಾನೆ. ನಗರಸಭೆ ಪೌರಾಯುಕ್ತರೋಂದಿಗೆ ಚರ್ಚಿಸಲು ಸಿಡಿಪೋ ಜಯಶ್ರೀ ಆರ್ ರವರಿಗೆ ಆದೇಶಿಸಿದ್ದನೆ ಕೆಂದ್ರಗಳು ಅವ್ಯವಸ್ಥೆ ಕಂಡು ಬಂದರೆ ಕಠಿಣ ಕ್ರಮ ಜರುಗಿಸುತ್ತವೆ ಬರುವ ದಿನಗಳಲ್ಲಿ ಇನ್ನಿಷ್ಟು ನೂತನವಾಗಿ ಅಂಗನವಾಡಿ ಕಟ್ಟಡ ಕಟ್ಟಲು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ ಸಿಂಗರವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ವಾರ್ಡಿನ ನಗರಸಭೆ ಸದಸ್ಯ ಮನೋಹರಸ್ವಾಮಿ ಮುದೆನೂರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಫೋ) ಜಯಶ್ರೀ ಆರ್, ನಗರಸಭೆ ಮಾಜಿ ಅಧ್ಯಕ್ಷ ಕಮ್ಲಿಬಾಬಾ, ಮೆಲ್ವಿಚಾರಕಿ (ಸುಪರೈಜರ) ಚಂದ್ರಮ್ಮ, ಅಂಗನವಾಡಿ ಕಾರ್ಯಕರ್ತೆ ಹಸಿನಾ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!