
ಯಂಗ್ ಮೇನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್ ನಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 10- ರಕ್ತದಾನ ಎಲ್ಲಾ ದಾನಕ್ಕಿಂತಲೂ ಶ್ರೇಷ್ಠದಾನವಾಗಿದೆ ಅಕ್ಷರ ದಾನ ಅನ್ನ ಮತ್ತು ಜೀವನ ಕೊಟ್ಟರೆ ರಕ್ತದಾನ ಜೀವ ಕೊಡುತ್ತದೆ ದಯವಿಟ್ಟು ಎಲ್ಲಾ ಆರೋಗ್ಯವಂತ ಯುವಕರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ ಮತ್ತೊಂದು ಜೀವಕ್ಕೆ ಆಸರೆಯಾಗಿ ಎಂದು ಚರ್ಚಿನ ಸಭಾ ಪಾಲಕರು ತಿಳಿಸಿದರು.
ಅವರು ನಗರದ ಬ್ರೂಸ್ ಪೇಟ್ ರಸ್ತೆ ಹತ್ತಿರವಿರುವ CSI ಜಾನ್ ಹ್ಯಾಂಡ್ಸ್ ಮೆಮೋರಿಯಲ್ ಚರ್ಚ್ ನಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮತ್ತು YMCA ಸಂಸ್ಥೆಯ 180 ನೇ ವಾರ್ಷಿಕೋತ್ಸವ ಅಂಗವಾಗಿ ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ಬೃಹತ ರಕ್ತದಾನ ಶಿಬಿರವನ್ನು ಸಸಿಗೆ ನೀರಿರುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಆರೋಗ್ಯದ ಮನುಷ್ಯನು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ತನ್ನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದರ ಜೊತೆಗೆ ಒಂದು ಜೀವವನ್ನು ಉಳಿಸಿದ ಕೀರ್ತಿ ದೊರೆಯುತ್ತದೆ ರಕ್ತದಾನದಿಂದ ದಾನಿಗೆ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ ಈ ಕುರಿತು ಯಾವುದೇ ಅನುಮಾನ ಪಡದೆ ಧೈರ್ಯವಾಗಿ ರಕ್ತದಾನ ಮಾಡಿ ಎಂದು ಈವ ಸಮೂಹಕ್ಕೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕ್ರಾಂತಿ ನೋಹ ವಿಲ್ಸನ್ ಅವರ ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಗಂಗಾಧರ್ ಗೌಡ ಭಾಗವಹಿಸಿದ್ದರು.
ಈ ರಕ್ತದಾನ ಶಿಬಿರದಲ್ಲಿ ಕತೋಲಿಕ ಧರ್ಮ ಸಭೆಯ ರವರೆಂದ್ರನಾಥ್ ಜೋಸೆಫ್. ಕರ್ನಾಟಕ ಉತ್ತರ ಸಭಾ ಪ್ರಾಂತ್ಯ ಸಿಎಸ್ಐ ಉಪಾಧ್ಯಕ್ಷರಾದ ರೆವರೆಂಡ್ ಜಾನ್ ಎಸ್. ಮಾರ್ಕ್, ಚೇರ್ಮನ್ ಎಸ್ಸೆಂಬ್ಲಿ ಆಫ್ ಗಾಡ್, ರೆವರೆಂಡ್. ಕ್ರಿಸ್ತ ವತ್ಸ, ಹಿರಿಯರ ಮುಖ್ಯಸ್ಥ ಯಂಗ್ ಮೇನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್ (YMCA) ಬಳ್ಳಾರಿ ಗ್ರಾಮಾಂತರ ಹಾಗೂ ಮಾಜಿ ಅಧ್ಯಕ್ಷರು, ಬಳ್ಳಾರಿ ಪ್ರಾದೇಶಿಕ ಪರಿಷತ್ತು ಕರ್ನಾಟಕ ಉತ್ತರ ಸಭಾ ಪ್ರಾಂತ್ಯ ಸಿಎಸ್ಐ ರೆವರೆಂಡ್. ಅಬ್ಸಲೋಮ್ ಬಂಡಿ, ಉಪಾಧ್ಯಕ್ಷರು, ಬಳ್ಳಾರಿ ಪ್ರಾದೇಶಿಕ ಪರಿಷತ್ತು ಕರ್ನಾಟಕ ಉತ್ತರ ಸಭಾ ಪ್ರಾಂತ್ಯ ಸಿಎಸ್ಐ, ಬಳ್ಳಾರಿ ಜಿಲ್ಲಾ ಸಭಾ ಪಾಲಕರ ಸಂಘದ ಅಧ್ಯಕ್ಷರಾದ ರೆವರೆಂಡ್. ರಾಜ ರತ್ನ, ಯಂಗ್ ಮೇನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್, ಬಳ್ಳಾರಿ ಗ್ರಾಮಾಂತರ ಇದರ ಪದಾಧಿಕಾರಿಯಾದ ಮಾಗ್ರೆಟ್ ಮೋಹನ್, ಉಪಾಧ್ಯಕ್ಷರಾದ ಏಸು ಪೌಲ್, ಕಾರ್ಯದರ್ಶಿ ಎಸ್ ಪ್ರಸಾದ್, ಖಜಾಂಚಿ ಭಾಸ್ಕರ್ ನಾಯ್ಡು, ಸಹ ಕಾರ್ಯದರ್ಶಿ ಇವರುಗಳು ಉಪಸ್ಥಿತರಿದ್ದರು.
ಹಲವಾರು ಜನ ಯುವಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯ ಸಿಬ್ಬಂದಿಗಳಾದ, ಡಾಕ್ಟರ್ ಗಜೇಂದ್ರ ವರ್ಮ, ಮಂಜುನಾಥ್, ಡಾಕ್ಟರ್ ರಾಘವೇಂದ್ರ, ಡಾಕ್ಟರ್ ಸಂತೋಷ್, ಉಮಾ ಕಾಂತಮ್ಮ, ತಿಪ್ಪೇಸ್ವಾಮಿ ಹನುಮೇಶ್, ಸುರೇಶ್ ನಾಯಕು ಮತ್ತು ವಿಜಯ್ ರಕ್ತದಾನ ಮಾಡುವವರಿಗೆ ರಕ್ತದೊತ್ತಡ ರಕ್ತದ ಗುಂಪುಗಳನ್ನು ಪರೀಕ್ಷಿಸಿ ರಕ್ತದಾನ ಕಾರ್ಯದಲ್ಲಿ ಕಾರ್ಯನಿರ್ವಹಿಸಿದರು.