WhatsApp Image 2024-08-10 at 12.38.37 PM

ಶಾಲೆಗಳ ಅಭಿವೃದ್ದಿಗೆ ಗ್ರಾಮಸ್ಥರು ಶ್ರಮಿಸಬೇಕು : ಹುಸೇನ್ ಸಾಬ ಭಾಗವಾನ್

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 10- ಸರಕಾರವು ಶಿಕ್ಷಣಕ್ಕೊಸ್ಕರ ಸಾಕಷ್ಟು ಯೋಜನೆಯನ್ನು ಜಾರಿಗೂಳಿಸಿದ್ದಾರೆ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯದಲ್ಲಿ ದೊಡ್ಡ ದೊಡ್ಡ ಉನ್ನತ ಹುದ್ದೆ ಯಲ್ಲಿ ಇದ್ದಾರೆ ಶಾಲೆಗಳ ಅಭಿವೃದ್ದಿಗೆ ಗ್ರಾಮಸ್ಥರು ಶ್ರಮಿಸಿದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಹಿರೇ ಅರಳಿಹಳ್ಳಿ ವಲಯ ಸಂಪನ್ಮೂಲ ವ್ಯಕ್ತಿ ಹುಸೇನ್ ಸಾಬ ಭಾಗವಾನ್ ಹೇಳಿದರು.

ತಾಲೂಕಿನ ಮಂಡಲಮರಿ ಗ್ರಾಮದಲ್ಲಿ ನೂತನವಾಗಿ ಏಂಟನೇ ತರಗತಿ ಪ್ರಾರಂಭಿಸಲು ಕರ್ನಾಟಕ ಸರಕಾರದ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಯವರು ಹಸಿರು ನಿಶಾನೆ ತೋರಿದ್ದು ಸಂತಸದ ವಿಷಯನಿಮ್ಮಗ್ರಾಮದಲ್ಲಿ ಏಂಟನೇ ತರಗತಿಯವರಗೆ ಪ್ರಾರಂಭವಾಗಿದ್ದು ಇದಕ್ಕೆ ವಿದ್ಯಾರ್ಥಿಗಳ ಪೋಷಕರು ಸಹಕರಿಸಿ ತಮ್ಮ ಮಕ್ಕಳನ್ನು ತಪ್ಪದೆ ದಿನಾಲು ಶಾಲೆಗೆ ಕಳುಹಿಸಬೇಕೆಂದರು.

ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಮಾರುತಿ ಮಾಟ್ರಂಗಿ, ಉಪಾಧ್ಯಕ್ಷ ಮನೋಹರ ಗೋಲ್ಲರ, ಗ್ರಾಮ ಪಂಚಾಯತಿ ಸದಸ್ಯರಾದ ಸೋಮಲಿಂಗಪ್ಪ ಕೋಳಜಿ, ಹುಲಿಗೇಮ್ಮ ಹರಿಜನ ಮುಖಂಡರಾದ ಶಿವಪ್ಪ ಯಲಬುರ್ತಿ, ಕಂದಕೂರಪ್ಪ ಹರಿಜನ, ಈರಪ್ಪ ಮುಂಡರಗಿ, ನಾಗಪ್ಪ ಕನಕಗಿರಿ, ಸಿದ್ದಪ್ಪ ಭಾವಿ, ಮುಖ್ಯಶಿಕ್ಷಕ ಗೇಮಪ್ಪ ಲಮಾಣಿ, ಬಸವರಾಜ ಹಾಗು ವಿದ್ಯಾರ್ಥಿಗಳು ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!