
ನೂತನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರಶುರಾಮಗೆ ಸ್ವಾಗತ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 25- ನಗರದ ಪೊಲೀಸ್ ಠಾಣೆಗೆ ನೂತನ ಸಬ್ಇನ್ಸ್ಪೆಕ್ಟರ್ ಪರಶುರಾಮ ಅವರು ಅಧಿಕಾರದ ಕಾರ್ಯಭಾರ ವಹಿಸಿಕೊಂಡ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಹಾಗೂ ಸಿರುಗುಪ್ಪ ನಗರಸಭೆ ಸದಸ್ಯ ಮೀರ್ ಹುಸೇನ್ ಸಮಾಜ ಸುಧಾರಕ ಜನ ಅಭಿಪ್ರಾಯ ಮುಖಂಡ ಹಾಜಿ ಎ ಅಬ್ದುಲ್ ನಬಿ ಪ್ರಜಾಪ್ರಸಿದ್ಧ ಕನ್ನಡ ದಿನಪತ್ರಿಕೆಯ ಪ್ರತಿನಿಧಿ ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ನೌಷಾದ್ ಅಲಿ ಅವರು ನೂತನ ಸಬ್ ಇನ್ಸ್ಪೆಕ್ಟರ್ ಪರಶುರಾಮ ಅವರಿಗೆ ಪೊಲೀಸ್ ಠಾಣೆಯಲ್ಲಿ ಹೂವು ಮಾಲೆ ಶಾಲು ಹೊದಿಸಿ ಪ್ರಜಾಪ್ರಸಿದ್ಧ ಕನ್ನಡ ದಿನಪತ್ರಿಕೆಯನ್ನು ನೀಡುವ ಮೂಲಕ ಸ್ವಾಗತಿಸಿ ಗೌರವಿಸಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿ ಜನರ ರಕ್ಷಣೆ ನಮ್ಮ ಪೊಲೀಸ್ ಅವರ ಕರ್ತವ್ಯ ಪತ್ರಕರ್ತರು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಅವರು ಕೋರಿದರು.
ಕಾಂಗ್ರೆಸ್ ಯುವ ಮುಖಂಡ ಡೊಳ್ಳಿ ವಲಿ ರಜಾ ನೂರ್ ಮೊಹಮ್ಮದ್ ಚಾಂದ್ ಬಾಷಾ ಬಳ್ಳಾರಿ ಮುನಾಫ್ ಮಹ ಭಾಷಾ ಜಗು ಉಪಸ್ಥಿತರಿದ್ದರು