99d4d111-5c6e-4557-bd15-961a0cf40c55

ಕಾಂಗ್ರೆಸ್‌ನಿಂದ  ಅಲ್ಪಸಂಖ್ಯಾತರನ್ನು ಓಲೈಸಲು ಕಾಯಕ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿ

 

ಕರುನಾಡ ಬೆಳಗು ಸುದ್ದಿ

  ಕೊಪ್ಪಳ, 21-ಕಾಂಗ್ರೆಸ್‌ ಪಕ್ಷ ತನ್ನ ಹಿಂದು ವಿರೋದಿ ದೋರಣೆ ಮುಂದುವರೆಸಿದ್ದು ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಓಲೈಸಲು ಕಾಯಕ ಮುಂದು ವರೆಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

    ಅವರು ರವಿವಾರದಂದು ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಮತ್ತು ಆಂಜನೇಯನ ಪಾದಗಟ್ಟೆಗೆ ಪೂಜೆ ಸಲ್ಲಿಸಿದ ಬಳಿಕ ಭಾನುವಾರ ಮಾಧ್ಯಮದವರ ಜೊತೆ ಮಾತನಾಡಿದರು

   ಅಲ್ಪ ಸಖಖ್ಯಾತರನ್ನು ಮತಬ್ಯಾಂಕ್‌ ಆಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಪಕ್ಷ ಶ್ರೀರಾಮನನ್ನು ವಿರೋಧಿಸುತ್ತಿದೆ  ಅನೇಕ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಮಮಂದಿರದ ಇತಿಹಾಸ ಹೇಳುತ್ತಿದ್ದರು.

      ರಾಜ್ಯದ ಶಿಲೆ ಮತ್ತು ಶಿಲ್ಪಿಯಿಂದ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಆಂಜನೇಯ ನಮ್ಮ ರಾಜ್ಯದಲ್ಲಿ ಹುಟ್ಟಿದವನು. ರಾಮನಿಗೆ ಸೀತೆಯನ್ನು ಹುಡುಕಲು ನೆರವಾಗಿದ್ದು ಆಂಜನೇಯ. ಇದೇ ಹನುಮ ಜನಿಸಿದ ನಾಡು. ಇಂಥ ಪವಿತ್ರ ಕ್ಷೇತ್ರದಲ್ಲಿ ಮೊದಲ ಪೂಜೆ ಮಾಡಲು ಇಲ್ಲಿಗೆ ಬಂದಿದ್ದೇನ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಪೂಜೆ ಸಲ್ಲಿಸಿದ ಶೋಭಾ ಕರಂದ್ಲಾಜೆ ‘ದೇಶ ಕಟ್ಟುವ ಪ್ರಧಾನಿ ಕಾಯಕಕ್ಕೆ ನಾವೆಲ್ಲರೂ ಕೈ ಜೋಡಿಸುತ್ತಿದ್ದೇವೆ. ದೇಶದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸಿಕೊಂಡಿದ್ದೇನ ಎಂದರು.

        ಹಿಂದೆ ರಾಮಮಂದಿರ ವಿರುದ್ಧವಾಗಿ ಕಾಂಗ್ರೆಸ್‌ ವಾದ ಮಂಡಿಸಿತು. ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎನ್ನುವ ಸತ್ಯಗೊತ್ತಿದ್ದರೂ ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸಲು ರಾಮನ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡಿತು.  ಅಲ್ಪಸಂಖ್ಯಾತರ ಮತದಿಂದಾಗಿ ಮಾತ್ರ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ ಅಂದುಕೊಂಡಿದೆ ಎಂದು ಆಪಾದಿಸಿದರು. ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಂತೋಷ ಕೆಲೋಜಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!