
ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷರಾಗಿ ರವೀಂದ್ರ, ಕಾರ್ಯದರ್ಶಿ ಯಾಗಿ ದತ್ತು ಕಮ್ಮರ ಆಯ್ಕೆ
ಗೌರವಾಧ್ಯಕ್ಷರಾಗಿ ಪ್ರಕಾಶ ಕಂದಕುರ, ಉಪಾಧ್ಯಕ್ಷ ರಾಗಿ ಮುಕ್ಕಣ್ಣ ಕತ್ತಿ , ಖಜಾಂಚಿಯಾಗಿ ಅನೀಲ ಬಾಚನಹಳ್ಳಿ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ನಗರದ ಕೊಪ್ಪಳ ಮೀಡಿಯಾ ಕ್ಲಬ್ ಕೊಪ್ಪಳದ ನೂತನ ಪದಾಧಿಕಾರಿಗಳ ಆಯ್ಕೆಗೆ ಸೋಮವಾರ ಜರುಗಿದ ಚುನಾವಣೆಯಲ್ಲಿ ಐವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಮೀಡಿಯಾ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಸಂತೋಷ ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. 15 ನಿರ್ದೇಶಕರ ಪೈಕಿ 14 ಜನರು ಹಾಜರಾಗಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಹಾಗೂ ಗೌರವ ಅಧ್ಯಕ್ಷ ಹುದ್ದೆಗಳಿಗೆ ಚುನಾವಣೆ ನಡೆಸಲಾಯಿತು.
ಹಾಜರಿದ್ದ ಒಟ್ಟು ಸದಸ್ಯರು ಐದು ಹುದ್ದೆಗಳಿಗೆ ಪದಾಧಿಕಾರಿಗಳನ್ನು ಸೂಚಿಸಿ ಅಂತಿಮಗೊಳಿಸಿದರು. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು.
ಕೊಪ್ಪಳ ಮೀಡಿಯಾ ಕ್ಲಬ್ ಕೊಪ್ಪಳ ನೂತನ ಅಧ್ಯಕ್ಷರಾಗಿ ವಿಜಯವಾಣಿ ಜಿಲ್ಲಾ ವರದಿಗಾರ ರವೀಂದ್ರ ವಿ.ಕೆ., ಉಪಾಧ್ಯಕ್ಷರಾಗಿ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಮುಕ್ಕಣ್ಣ ಕತ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಉದಯವಾಣಿ ಜಿಲ್ಲಾ ವರದಿಗಾರ ದತ್ತು ಕಮ್ಮಾರ ಮತ್ತು ಖಜಾಂಚಿಯಾಗಿ ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ಅನಿಲ ಬಾಚನಹಳ್ಳಿ ಹಾಗೂ ಗೌರವ ಅಧ್ಯಕ್ಷರಾಗಿ ನಾಗರಿಕ ದಿನ ಪತ್ರಿಕೆ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಪತ್ರಕರ್ತ ಜಗದೀಶ ಚಟ್ಟಿ ಪ್ರಕ್ರಿಯೆ ನಿರ್ವಹಿಸಿದರು.
ನೂತನ ಪದಾಧಿಕಾರಿಗಳನ್ನು ಕೊಪ್ಪಳ ಮೀಡಿಯಾ ಕ್ಲಬ್ ಕೊಪ್ಪಳ ಕಾರ್ಯಕಾರಿ ಸಮಿತಿ ಹಾಗೂ ಸಾಮಾನ್ಯ ಸದಸ್ಯರು ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.
ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಬಸವರಾಜ ಬಿನ್ನಾಳ, ಮಹೇಶಗೌಡ ಭಾನಾಪುರ, ಹುಸೇನ್ ಪಾಷಾ, ಮೌನೇಶ ಬಡಿಗೇರ್, ದೊಡ್ಡೇಶ ಎಲಿಗಾರ, ದೇವು ನಾಗನೂರು, ಬಸವರಾಜ ಕರುಗಲ್, ಶರಣಬಸವ ಹುಲಿಹೈದರ್, ಸಂಜಯ್ ಚಿಕ್ಕಮಠ, ಈರಯ್ಯ ಹಿರೇಮಠ, ಶ್ರೀಕಾಂತ ಅಕ್ಕಿ, ನಾಭಿರಾಜ್ ದಸ್ತೇನವರ್, ವಿನಾಯಕ್, ಮಾರುತಿ, ನಾಗರಾಜ ಹಡಗಲಿ, ಭರತ್ ಕಂದಕೂರು ಇದ್ದರು.