ದಾಖಲಾರ್ಹ ರೀತಿಯಲ್ಲಿ ರೈಲ್ವೆ ಯೋಜನೆ ಅನುಷ್ಠಾನ: ಸಂಸದ ಕರಡಿ ಸಂಗಣ್ಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ 20 – ತಮ್ಮ ಆಡಳಿತಾವಧಿಯಲ್ಲಿ ಜಿಲ್ಲೆಯಲ್ಲಿ ದಾಖಲಾರ್ಹ ರೀತಿಯಲ್ಲಿ ರೈಲ್ವೆ ಯೋಜನೆಗಳು ಅನುಷ್ಠಾನಕ್ಕೆ ಒತ್ತು ಕೊಡಲಾಗಿದೆ ಎಂದು ಸಂಸದರಾದ ಕರಡಿ ಸಂಗಣ್ಣ ಅವರು ಹೇಳಿದರು.
ಜಿಲ್ಲೆಯ ಗಂಗಾವತಿಯ ಆನೆಗುಂದಿ ರಸ್ತೆ ಸಾಯಿ ನಗರದ ವಿರುಪಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಪಿ.ಎಂ ಶ್ರೀ ಕೇಂದ್ರಿಯ ವಿದ್ಯಾಲಯದ ನೂತನ ಶಾಲಾ ಕಟ್ಟಡ ಲೋಕಾರ್ಪಮಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿಂಧನೂರಿಗೆ ರೈಲು ಸಂಚರಿಸಬೇಕೆಂಬ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ರೈಲು ಸಂಚಾರದ ಪ್ರ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಕೂಡಲೇ ರೈಲು ಓಡಾಟ ಆರಂಭಗೊಳ್ಳಲಿದೆ. ಅದರಂತೆಯೇ ಕುಷ್ಟಗಿಗೂ ರೈಲು ಸಂಚಾರಕ್ಕೆ ಸಂಬAಧಿಸಿದAತೆ ಇರುವ ಸಣ್ಣಪುಟ್ಟ ಜಮೀನಿನ ಸಮಸ್ಯೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದು, ಡಿಸಿ ಅವರು ಸಂಬAಧಪಟ್ಟ ಇಂಜಿನೀರ್ಸ್ಗಳಿಗೆ ಮಾತನಾಡಿದ್ದಾರೆ.

ತಳಕಲ್-ವಾಡಿ 57 ಕೆ.ಮೀ ಮಾರ್ಗದ ರೈಲು ಓಡಾಟವಾಗಲಿದೆ. ಸಿಂಧನೂರು ಮತ್ತು ಕುಷ್ಟಗಿಗೆ ಸ್ವತಂತ್ರ ಭಾರತ್ ಯೋಜನೆಯಡಿ ಎರಡು ರೈಲುಗಳು ಸಿಕ್ಕಿರುವುದು ನಮ್ಮ ಸೌಭಾಗ್ಯವಾಗಿದೆ. ಇದರ ಜೊತೆಗೆ ದರೋಜಿ-ಗಂಗಾವತಿ ಹೊಸ ರೈಲು ಮಾರ್ಗಕ್ಕಾಗಿ ಈಗಾಗಲೇ ಸರ್ವೇ ಕಾರ್ಯ ನಡೆದಿದೆ. ಇದರಿಂದ ಗಂಗಾವತಿ, ಕನಕಗಿರಿ, ತಾವರಗೇರಾ, ಕುಷ್ಟಗಿ, ಇಳಕಲ್, ಹುನಗುಂದಾ, ಬಾಗಲಕೋಟೆವರೆಗೆ ಸರ್ವೇ ವರದಿ ಸಿಗಲಿದ್ದು, ಮುಂದಿನ ದಿನಮಾನಗಳಲ್ಲಿ ಎಲ್ಲರ ಪ್ರಯತ್ನದಿಂದ ದರೋಜಿ-ಗಂಗಾವತಿ ಹೊಸ ರೈಲು ಪ್ರಾರಂಭಕ್ಕೆ ಪ್ರಯತ್ನಿಸುತ್ತೇವೆ.
ಈ ಎಲ್ಲಾ ಯೋಜನೆಗಳಿಂದ ಗಂಗಾವತಿಯು ಒಂದು ಟ್ರಂಕ್ ಲೈನ್ ಆಗಲಿದೆ. ರಾಜ್ಯದ ವಾಣಿಜ್ಯ ಮತ್ತು ಉದ್ಯಮಿ ಕ್ಷೇತ್ರದಲ್ಲಿ ಗಂಗಾವತಿಯು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಗಂಗಾವತಿ ನಗರಕ್ಕೆ ಹೈವೇ ಮತ್ತು ಬೈ ಪಾಸ್ ಆಗಬೇಕಿದ್ದು ಇದ್ದಕ್ಕೆ ಪ್ರಯತ್ನಿಸಲಾಗುವುದು. ಇದರಿಂದ ಗಂಗಾವತಿಯು ಇನ್ನೂ ಎತ್ತರಕ್ಕೆ ಬೆಳೆಯಲಿದೆ ಎಂದು ಸಂಸದರು ತಿಳಿಸಿದರು.