IMG20250106165741

ದಿ. ನಾ. ಡಿಸೋಜ ಅವರಿಗೆ ಕುಷ್ಟಗಿ ಕಸಾಪ ಘಟಕದಿಂದ ಶ್ರದ್ಧಾಂಜಲಿ 

ಮಂಗಳೂರು ಖ್ಯಾತ ಸಾಹಿತಿ ದಿ. ನಾ ಡಿಸೋಜ ಅವರ ನಿಧನದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕ ಘಟಕ ಕುಷ್ಟಗಿ ವತಿಯಿಂದ ಮೌನಾಚರಣೆ ಮಾಡಿ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಪಟ್ವಾಟಣದ ಪಂಚಮ ಲೇಔಟಿನಲ್ಲಿ ಬರುವ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಸಾಪ ತಾಲೂಕ ಅಧ್ಯಕ್ಷ ಲೆಂಕೆಪ್ಪ ವಾಲೀಕಾರ ಮಾತನಾಡಿ ನಾ. ಡಿಸೋಜಾ ಅವರು ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಮಕ್ಕಳ ಕುರಿತು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅವರಲ್ಲಿ ಸಾಹಿತ್ಯದ ಕುರಿತು ಅಪಾರ ಪಾಂಡಿತ್ಯ ಹೊಂದಿದವರಾಗಿದ್ದರು. ಇಂತವರನ್ನು ಕಳೆದುಕೊಂಡ ಸಾಹಿತ್ಯ ಲೋಕಕ್ಕೆ‌ ಅಪಾರ ನಷ್ಟಚಾಗಿದೆ. ಆದರೆ ಅವರ ಕೃತಿಗಳು ಎಂದಿಗೂ ಶಾಶ್ವತ ಎಂದರು. 

ಮುಂಬರುವ ಹೂಲಗೇರಿ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾದ ಹನುಮಂತಪ್ಪ ಯಲ್ಲಪ್ಪ ಈಟಿಯವರು, ಕೇಂದ್ರ ಸಂಘ ಸಂಸ್ಥೆಗಳ ಪ್ರತಿನಿಧಿ ನಬಿಸಾಬ್ ಕುಷ್ಟಗಿ, ಜಿಲ್ಲಾ ಪರಿಶಿಷ್ಟ ಜಾತಿ ಪ್ರತಿನಿಧಿಗಳಾದಂತಹ ಎಸ್ ಜಿ ಕಡಿಮನಿ, ಎ ವಾಯ್ ಲೋಕರೆ ನಾಡೋಜಾ ಡಿಸೋಜಾ ಅವರ ಕುರಿತು ಮಾತನಾಡಿದರು. 

ಈ ಸಂದರ್ಭದಲ್ಲಿ ಪರಶಿವಮೂರ್ತಿ ದೋಟಿಹಾಳ, ಅನೀಲ್ ಕುಮಾರ್ ಕಮ್ಮಾರ, ಶಾಂತಪ್ಪ ಟೈಲರ್ , ಶ್ಯಾಮಿದ್ಸಾಬ ತೆಗ್ಗಿನಮನಿ, ನಾಗರಾಜ ಬಡಿಗೇರ, ಭಿಮಸೇನರಾವ ಕುಲಕರ್ಣಿ, ಅಬ್ದುಲ್ ಕಲಾಂ ಉಪಸ್ಥಿತತರಿದ್ದರು. ಕಾರ್ಯದರ್ಶಿ ಶರಣಪ್ಪ ಲೈನದ್ ನಿರೂಪಿಸಿದರು, ದೇವರಾಜ ವಿಶ್ವಕರ್ಮ ವಂದಿಸಿದರು. 

Leave a Reply

Your email address will not be published. Required fields are marked *

error: Content is protected !!