
ಕ್ರಿಯಾ ಯೋಜನೆಗಾಗಿ ಗ್ರಾಮ ಸಭೆ – ಪಿಡಿಒ ಮಹೇಶ್ ಗೌಡ
ಕರುನಾಡ ಬೆಳಗು ಸುದ್ದಿ
ಕುಕನೂರ, 20- ಕ್ರಿಯಾ ಯೋಜನೆ ತಯಾರಿಕೆಗಾಗಿ ಗ್ರಾಮ ಸಭೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಬಳಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಗೌಡ ಅವರು ಹೇಳಿದರು.
ತಾಲೂಕಿನ ಬಳಗೇರಿ ಗ್ರಾಮದ ಗಣೇಶ ಕಟ್ಟಿ ಹತ್ತಿರ ಸೋಮವಾರ 2024-25 ನೇ ಸಾಲೀನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆಯ ತಯಾರಿಕೆಗಾಗಿ ಗ್ರಾಮ ಸಭೆ ಆಯೋಜನೆ ಮಾಡಲಾಗಿತ್ತು.
ಗ್ರಾಮ ಸಭೆಯನ್ನು ಉದ್ದೇಶಿಸಿ ಬಳಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಗೌಡ ಮಾತನಾಡಿ,
ಗ್ರಾಮೀಣ ಪ್ರದೇಶದಲ್ಲಿನ ಕೂಲಿ ಕೆಲಸ ಕೇಳುವ ಕೂಲಿಕಾರರಿಗೆ ಕೂಲಿ ಕೆಲಸ ನೀಡುವ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಕೂಲಿಕಾರರಿಗೆ ಕೆಲಸ ನೀಡಲು ಮತ್ತು ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು, ನರೇಗಾ ಯೋಜನೆಯಡಿ ಶೇಕಡಾ 65% ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ.
ಜಲ ಸಂಜೀವಿನಿ ಮಾದರಿ ಕ್ರಿಯಾ ಯೋಜನೆ ತಯಾರಿಸಿ ರೈತಾಪಿ ಕೃಷಿ ಕೂಲಿಕಾರರಿಗೆ ತಮ್ಮ ಹೊಲಗಳಲ್ಲಿಯೇ ಕೆಲಸ ನೀಡಿ, ಬಹುಬಾಳಿಕೆಯ ಆಸ್ತಿಗಳ ನಿರ್ಮಾಣ ಮಾಡಲಾಗುತ್ತದೆ. ಅದಕ್ಕಾಗಿ ಕೃಷಿಕರು ಹೆಚ್ಚು ಹೆಚ್ಚುವೈಯಕ್ತಿಯ ಕಾಮಗಾರಿಗಳಾದ ಕೃಷಿ ಹೊಂಡ, ಬದು ನಿರ್ಮಾಣ, ಇಂಗು ಗುಂಡಿ, ದನದ ದೊಡ್ಡಿ, ಕುರಿ ದೊಡ್ಡಿ, ಅಜೋಲ್ಲಾ ತೊಟ್ಟಿ, ಬಯೋಗ್ಯಾಸ್, ಎರೆಹುಳು ತೊಟ್ಟಿ, ಅರಣ್ಯ, ರೇಷ್ಮೇ, ಕೃಷಿ ಮತ್ತು ತೋಟಗಾಗಿಕೆ ಇಲಾಖೆಯಿಂದ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.
ಅಲ್ಲದೇ ಗ್ರಾಮದ ಸಣ್ಣ, ಅತೀ ಸಣ್ಣ ಮತ್ತು ದೊಡ್ಡ ರೈತರನ್ನು ಗುರುತಿಸಿದ್ದು, ಅಂಥ ರೈತರ ಹೊಲಗಳಲ್ಲಿ ಬದು ನಿರ್ಮಾಣ ಮಾಡುವುದರಿಂದ ಮಣ್ಣಿನ ಸವಕಳಿ ತಡೆಗಟ್ಟಿ ಅಂತರ್ಜಲ ಹೆಚ್ಚಿಸಲು ಸಹಾಯವಾಗಿತ್ತದೆ. ಇದರಿಂದ ಕಾಮಗಾರಿಯಲ್ಲಿ ದುಡಿದ ರೈತರಿಗೆ ನರೇಗಾ ಯೋಜನೆಯಿಂದ ಕೂಲಿ ಹಣವು ಸಿಗುತ್ತದೆ, ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಬಂದಲ್ಲಿ ಸಮುದಾಯ ಕಾಮಗಾರಿಗಳಾದ ನಾಲಾ ಅಭಿವೃದ್ಧಿ, ಕೆರೆ ಹೂಳೆತ್ತುವುದು, ಜಲ ಸಂಜೀವಿನಿ ಮಾದರಿಯ ಬದು ನಿರ್ಮಾಣ, ಕೂಲಿಕಾರರಿಗೆ 100 ದಿನಗಳ ಕೆಲಸ ಒದಗಿಸಲು ಕಾಮಗಾರಿಗಳನ್ನು ಆಧ್ಯತೆ ಮೇರೆಗೆ ಗುರುತಿಸುವುದು ಮುಖ್ಯವಾಗಿ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಕ್ತಾಯ ಮಾಡುವುದು, ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶೇ 10% ವರೆಗೆ ಅವಕಾಶವಿದೆ ಎಂದು ಅವರು ಹೇಳಿದರು.ಈ ವೇಳೆಯಲ್ಲಿ ಶಾಲಾ ಮಕ್ಕಳು ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಶಾಲಾ ಶೌಚಾಲಯ, ಕಂಪೌಡ್ , ಅಡುಗೆ ಕೋಣೆ ಕಟ್ಟಿಸಿ ಕೊಡಲು ಅರ್ಜಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌರಮ್ಮ ವಿರುಪಾಕ್ಷಯ್ಯ ಕುರ್ತಕೋಟಿ, ಸದಸ್ಯರಾದ ನಿಂಗಪ್ಪ ಮಾಳೆಕೊಪ್ಪ, ಶರಣಪ್ಪ ಕುಕನೂರ,ಸುಶೀಲಾ ವಿರುಪಾಕ್ಷಯ್ಯ ವಿರಕ್ತಿಮಠ, ಹಾಲವ್ವ ಬಸಪ್ಪ ಟಂಗುಂಟಿ, ಅಕ್ಕವ್ವ ಶರಣಪ್ಪ ಚಾಕರಿ, ಯಮನೂರಪ್ಪ ಕಟ್ಟಿಮನಿ, ಯಮನೂರಪ್ಪ ಹಿರೇಮನಿ, ರುದ್ರಪ್ಪ ಸರ್ವೆ , ಹನಮಕ್ಕ ಗೌಡ್ರ, ಶಿವಶರಣಗೌಡ್ರ ಗ್ರಾಮ ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ,ಬಿ.ಎಫ್.ಟಿ ಶರಣಪ್ಪ ಮೂಲಿಮನಿ, ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ನರೇಗಾ ಕಾಯಕ ಬಂಧುಗಳು, ಗ್ರಾಮಸ್ಥರು, ನರೇಗಾ ಕೂಲಿಕಾರರು ಇತರರಿದ್ದರು.