IMG-20240119-WA0027

ರೆಡ್ಡಿ ಸಮುದಾಯದ ಪ್ರಾಧಿಕಾರ ರಚನೆಗೆ ಮನವಿ

ಕರುನಾಡ ಬೆಳಗು ಸುದ್ದಿ 

ಬಳ್ಳಾರಿ,19- ಬೇರೆ ಬೇರೆ ರಾಜ್ಯಗಳಲ್ಲಿ ಇರುವಂತೆ, ನಮ್ಮ ರಾಜ್ಯದಲ್ಲಿ ಕೂಡ ರೆಡ್ಡಿ ಸಮಾಜದಕ್ಕೆ ಒಂದು ಪ್ರಾಧಿಕಾರ ರಚನೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸುವ ಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಭಾರತ್ ರೆಡ್ಡಿ ತಿಳಿಸಿದರು.

ಇಂದು ನಗರದ ಬಿಡಿಎ ಎ ಸಭಾಂಗಣದಲ್ಲಿ ಏರ್ಪಡಿಸಿದ್ದ ವೇಮನರ 612ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಗರಕ್ಕೆ ಸೇರಿದ ಅನಂತಪುರ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರೆಡ್ಡಿ ಜನ ಸಂಘದ ಕಚೇರಿಯಲ್ಲಿ ಸುತ್ತುವಡೆ ಪುನರ್ ನಿರ್ಮಾಣಕ್ಕಾಗಿ ಶಾಸಕರ ಅನುದಾನದ ಡಿ 20 ಲಕ್ಷಗಳನ್ನು ನೀಡಲಾಗಿರುತ್ತದೆ.

ಅದಲ್ಲದೆ ರೆಡ್ಡಿ ಜನ ಸಂಘದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಯಾಣ ಮಂಟಪಕ್ಕೆ ಶಾಸಕ ಭರತ್ ರೆಡ್ಡಿ ಅವರು ವೈಯಕ್ತಿಕವಾಗಿ 50 ಲಕ್ಷ ಗಳನ್ನು ನೀಡುವುದಾಗಿ ತಿಳಿಸಿದರು. ಮಹಾಯೋಗಿ ವೇಮನ ಹೆಸರನ್ನು ನಗರದ ತಾಳೂರು ರಸ್ತೆಗೆ ನಾಮಕರಣ ಮಾಡಲು ಅದೇ ರೀತಿಯಾಗಿ ಈಗಾಗಲೇ ಉದ್ದೇಶದಂತೆ ನೂತನವಾಗಿ ಪ್ರಾರಂಭವಾಗುವ ಚಿಲ್ಲಿ ಪ್ರಾಸಸಿಂಗ್ ಘಟಕಕ್ಕೆ ಇವರ ಹೆಸರನ್ನು ನಾಮಕರಣ ಮಾಡಬೇಕೆಂದು ಸಚಿವರನ್ನು ಕೋರಿದರು.

ನಂತರ ಸಚಿವರು ಬಿ ನಾಗೇಂದ್ರ ಮಾತನಾಡುತ್ತಾ ರೆಡ್ಡಿ ಸಮುದಾಯ ಅಂದರೆ ಬಹಳ ಶ್ರೀಮಂತ ಸಮುದಾಯ ಅಂದರು, ಅದೇ ರೀತಿಯಾಗಿ ದಾನಿಗಳ ಸಮುದಾಯ ಅಂತ ಹೇಳಬಹುದು ಎಂದರು ರಾಜ್ಯಕ್ಕೆ ಅವರ ಕೊಡುಗೆ ಅಪಾರ ಎಂದರು. ಶಾಸಕ ಭರತ್ ರೆಡ್ಡಿ ಅವರು ಕೇಳಿದಂತೆ ತಾಳೂರು ರಸ್ತೆಗೆ ವೇಮನರ ಹೆಸರು ಹಾಗೆ ಚಿಲ್ಲಿ ಘಟಕಕ್ಕೆ ಹೇಮರೆಡ್ಡಿ ಮಲ್ಲಮ್ಮ ಹೆಸರು ಇಡುವುದಾಗಿ ಭರವಸೆ ನೀಡಿದರು. ಇಂದು ಮಹಾಯೋಗಿ ವಿಮನಾದ 612ನೇ ಜಯಂತಿಯನ್ನು ಬಳ್ಳಾರಿ ನಗರದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು ಜಯಂತಿಯ ನಿಮಿತ್ತ ರೆಡ್ಡಿ ಸಂಘದ ವತಿಯಿಂದ ರೆಡ್ಡಿ ಜನ ಸಂಘದ ಅಧ್ಯಕ್ಷರಾದ ನಾರಾ ಪ್ರತಾಪ್ ರೆಡ್ಡಿ ಅವರ ನೇತೃತ್ವದಲ್ಲಿ ತಾಳು ರಸ್ತೆಯಿಂದ ಆರಂಭವಾದ ಬೈಕ್ ರ್ಯಾಲಿ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಪಾಲ್ಗೊಂಡು ಸಂಘದ ಕಚೇರಿಯವರಿಗೆ ಬೈಕ್ ರ್ಯಾಲಿ ತರಲಿ ಅಲ್ಲಿಂದ ಬೃಹತ್ ಮೆರವಣಿಗೆ ಮೂಲಕ ಬಿಡಿಎ ಮೈದಾನಕ್ಕೆ ಬಂದರು. ಕಾರ್ಯಕ್ರಮಗಳಲ್ಲಿ ಪಾಲಿಕೆಯ ಮಹಾಪೌರರಾದ ಬಿ. ಶ್ವೇತಾ, ಉಪಮೇಯರ್, ಜಾನಕಮ್ಮ, ರೆಡ್ಡಿ ಜನ ಸಂಘದ ಅಧ್ಯಕ್ಷರಾದ ನಾರಾ ಪ್ರತಾಪ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರು, ಎಡಿಸಿ ಮಹಮ್ಮದ್ ಜುಬೇರ್, ಎಸಿ ಹೇಮಂತ್ ಕುಮಾರ್, ಮಹಾನಗರ ಪಾಲಿಕೆ ಸದಸ್ಯರು ರೆಡ್ಡಿ ಜನ ಸಮುದಾಯದ ಜನಾಂಗ ಆದಿತ್ಯ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!