3977b728-4b09-499e-b127-8425023e7186

ದೇಶದ ಮೂಲೆ ಮೂಲೆಯಲ್ಲಿ ರಾಮ ಜಪ

ಮೆಕ್ಕೆಜೋಳದಲ್ಲಿ ರಾಮ ಮಂದಿರ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೧೭- ದೇಶದೇಲ್ಲಡೆ ರಾಮ ಭಜನೆ ಆರಂಭವಾಗಿದ್ದು ಕೊಪ್ಪಳ ಜಿಲ್ಲೆಯ ರೈತ ಮೆಕ್ಕೆಜೋಳದ ತೆನೆಯಲ್ಲಿ ರಾಮ ಮಂದಿರದ ಅರಳಿಸುವ ಮೂಲಕ ಭಕ್ತಿ ಮೆರೆದಿದ್ದಾನೆ.

ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದ ರುದ್ರಗೌಡ ಜಂತ್ಲಿ ತನ್ನ ರಾಮನ ಮೇಲಿನ ಭಕ್ತಿಯನ್ನು ತಾನೂ ಬೆಳೆದ ಹೊಲದಲ್ಲಿ ೫ ಸಾವಿರ ಮೆಕ್ಕೆಜೋಳ ತೆನೆಗಳನ್ನು ಬಳಸಿ, ೧೨ ರೈತರ ಸಹಾಯದೊಂದಿಗೆ ಒಂದು ವಾರದಿಂದ ನಿರ್ಮಾಣ ಮಾಡಿದ ರಾಮನ ದೇವಸ್ಥಾನವು ಎಲ್ಲ ರೈತರನ್ನು ಆಕರ್ಷಿಸುತ್ತಿದೆ.ಎಂಬುವವರ ಹೊಲದಲ್ಲಿ ೮೩೩೩ ಕಾವೇರಿ ಬೀಜ ಕಂಪನಿಯವರಿಂದ ರಾಮಮಂದಿರ ನಿರ್ಮಿಸಿದ್ದಾರೆ. ಇದೇ ರೈತ ಬೆಳೆದ ಸುಮಾರು ೫೮೦೦೦ ಮೆಕ್ಕೆಜೋಳದಿಂದ ಭವ್ಯ ಮಂದಿರ ನಿರ್ಮಿಸಿದ್ದಾರೆ. ಥೇಟ್ ರಾಮಮಂದಿರ ಮಾದರಿಯಲ್ಲಿದ್ದು. ಈ ಮಂದಿರವನ್ನು ಸುತ್ತಲಿನ ರೈತರಿಗೆ ಪ್ರದರ್ಶನಕ್ಕಾಗಿ ನಿರ್ಮಿಸಿದ್ದಾರೆ.

ಜನೆವರಿ ೨೨ ರಂದು ಅಯೋದ್ಯೆಯಲ್ಲಿ ರಾಮಮಂದಿರದಲ್ಲಿ ರಾಮದೇವರ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾಗುತ್ತಿದೆ. ಶ್ರೀರಾಮಮಂದಿರದ ಭವ್ಯ ದೇಗುಲದ ಪೂರ್ಣ ಸ್ವರೂಪ ಇನ್ನೂ ಬಹಿರಂಗವಾಗಿಲ್ಲ. ಆದರೆ ರಾಮಮಂದಿರದ ನೀಲನಕ್ಷೆಯಂತೆ ರೈತರೊಬ್ಬರ ಹೊಲದಲ್ಲಿ ಅಯೋದ್ಯೆ ರಾಮಮಂದಿರ ಹೊಲುವ ದೇಗುಲು ನಿರ್ಮಾಣವಾಗಿದೆ. ಅದು ಮೆಕ್ಕೆ ಜೋಳದಿಂದ ಎನ್ನುವುದು ವಿಶೇಷವಾಗಿದ್ದು ಪ್ರತಿಯೊಬ್ಬರು ವಿಕ್ಷಿಸುವಂತಿದೆ.

ಇಂದಿನಿದ ಜನವರಿ ೨೨ ವರೆಗೂ ಈ ಮೆಕ್ಕೆಜೋಳದಲ್ಲಿ ನಿರ್ಮಾಣವಾದ ರಾಮಮಂದಿರ ಪ್ರದರ್ಶನಗೊಳ್ಳಲಿದೆ. ನೋಡಲು ಸುಂದರವಾಗಿದ್ದು ರೈತರು ಅಯೋದ್ಯೆಗೆ ಈ ಸಧ್ಯ ಹೋಗಲು ಆಗುವುದಿಲ್ಲ. ಆದರೆ ಅಯೋದ್ಯೆ ರಾಮಮಂದಿರವನ್ನು ಇಲ್ಲಿಂದಲೇ ನೋಡಲೇ ಆನಂದಿಸಬಹುದಾಗಿದೆ.ಸುಮಾರು ಒಂದು ವಾರದಿಂದ ಮೆಕ್ಕೆಜೋಳದಿಂದ ರಾಮಮಂದಿರವನ್ನು ಕಲಾವಿದರು ನಿರ್ಮಿಸಿದ್ದಾರೆ. ತಾತ್ಕಾಲಿಕವಾಗಿ ನಿರ್ಮಾಣವಾದ ಈ ರಾಮಮಂದಿರವನ್ನು ರೈತರು ಹಾಗು ಸುತ್ತಲಿನ ಜನರು ನೋಡಿ ಖುಷಿ ಪಡುತ್ತಿದ್ದಾರೆ.

ಈಗ ದೇಶದಾದ್ಯಂತ ಶ್ರೀರಾಮ ಜಪ  ನಡೆಯುತ್ತಿರುವಾಗ ಗ್ರಾಮೀಣ ಭಾಗದಲ್ಲಿಯೂ ಶ್ರೀರಾಮ ಜಪ ಮಾಡಲಾಗುತ್ತಿದೆ, ಓಜನಳ್ಳಿಯ ಬಸವರಾಜ ಜಂತ್ಲಿಯವರ ಹೊಲದಲ್ಲಿ ಈ ಬೆಳೆ ಕ್ಷೇತ್ರತೋತ್ಸವವು ಈಗ ಶ್ರೀರಾಮನ ಸ್ಮರಣೆ ನಡೆದಿದೆ. ನೋಡಲು ಆಕರ್ಷಕವಾಗಿರುವ ಈ ಮಂದಿರ ಈಗ ಸಾಕಷ್ಟು ಬಂದು ನೋಡಿ ಹೋಗುತ್ತಿದ್ದಾರೆ.

ಕೆಂಪು ಶಾಲು ಧರಸಿ, ಜೈ ಶ್ರೀರಾಮ ಎನ್ನುವ ಘೋಷಣೆಗಳನ್ನು ಸಾರ್ವಜನಿಕರು ಕೂಗಿದರು. ರಾಮ ಮತ್ತು ಹನುಮಂತರ ಭಾವಚಿತ್ರ ಹಾಗೂ ಎರಡು ರಾಮನ ಭಾವಚಿತ್ರ ಹೊಂದಿದ ಕಟೌಟ್ ಗಳನ್ನು ನಿಲ್ಲಿಸಲಾಗಿತ್ತು.‌ ಕಾವೇರಿ ಸೀಡ್ಸ್ ಕಂಪನಿಯವರು ನಿರ್ಮಿಸಿದ ಮೆಕ್ಕೆಜೋಳದ ತೆನೆಯ ಮೂರು ಮಂಟಪಗಳ ಮೇಲೆ ಆಂಜನೇಯನ ಹಾಗೂ ರಾಮನ ಭಾವಚಿತ್ರ ಹೊಂದಿದ ಧ್ವಜವು ಹಾರಾಡುತ್ತಿತ್ತು. ಇದನ್ನು ನೋಡಿದರೆ ರೈತರಾದ ರಾಮ ಭಕ್ತರು ತಮ್ಮ ಭಕ್ತಿಯನ್ನು ತೋರ್ಪಡಿಸಿರುವ ರೀತಿಯು ಮಾದರಿಯಾಗಿದೆ.

೨೨ರ ವರೆಗೂ ಪ್ರದರ್ಶನ: ಜ. ೨೨ರಂದು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಗೊಳ್ಳುತ್ತಿದ್ದು, ಇದರ ಅಂಗವಾಗಿ ರೈತರು ತಮ್ಮ ಹೊಲದಲ್ಲಿ ಮೆಕ್ಕೆಜೋಳದ ತೆನೆಯಲ್ಲಿ ರಾಮ ಮಂದಿರ ಮಾದರಿಯನ್ನು ನಿರ್ಮಿಸಿದ್ದು, ಇದನ್ನು ಜ. ೨೨ರ ವರೆಗೂ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ವಾರದ ಹಿಂದೆಯೇ ಆರಂಭವಾಗಿದ್ದ ಮೆಕ್ಕೆಜೋಳದ ರಾಮ ಮಂದಿರ ನಿರ್ಮಾಣ ಕಾರ್ಯವು ಜ. ೧೩ರಂದು ಮುಕ್ತಾಯ ಗೊಂಡಿದ್ದು, ಸುಮಾರು ೯ ದಿನಗಳ ಕಾಲ ರಾಮ ಮಂದಿರದ ಮಾದರಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಸುತ್ತಮುತ್ತಲಿನ ರೈತರು, ಭಕ್ತರು ಹೋಗಿ, ಮೆಕ್ಕೆಜೋಳದ ತೆನೆಯಲ್ಲಿರುವ ರಾಮ ಮಂದಿರವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ.

ಜ. ೨೨ರಂದು ರಾಮ ಮಂದಿರ ಉದ್ಘಾಟನೆ ಗೊಳ್ಳುತ್ತಿದ್ದು, ಅಲ್ಲಿಯವರೆಗೂ ಪ್ರದರ್ಶನ ಮಾಡಲಾಗುತ್ತದೆ. ಹಾಗಾಗಿ ಜ. ೨೨ರಂದು ರಾಮ ಮತ್ತು ಹನುಮನ ಭಾವಚಿತ್ರ ಪೂಜೆ ಸಲ್ಲಿಸುತ್ತೇವೆ. ರಾತ್ರಿ ಹಣತೆಗಳ ಮೂಲಕ ದೀಪ ಹಚ್ಚುತ್ತೇನೆ.  ಸುತ್ತಮುತ್ತಲಿನ ಗ್ರಾಮದವರು ರಾಮ ಮಂದಿರ ಮಾದರಿಯನ್ನು ಎಲ್ಲರೂ ನೋಡಿಕೊಂಡು ಹೋಗುತ್ತಾರೆ.‌ ಕೆಲವರು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಈ ವರೆಗೆ ಸುಮಾರು ೫ ಸಾವಿರ ಜನರು ವೀಕ್ಷಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!