437d1983-97e2-401a-8541-cce78121663b

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಅಮಾನತ್ತುಗೆ ಒತ್ತಾಯಿಸಿ ಭೋವಿ ಸಮಾಜ ಮನವಿ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೭-  ಶ್ರೀಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಅಪಚಾರವೆಸಗಿದ್ದು ಕೂಡಲೇ ಅವರನ್ನು ಅಮಾನತ್ತುಗೊಳಿಸುವಂತೆ ಶ್ರೀಸಿದ್ಧರಾಮೇಶ್ವರ ( ಭೋವಿ) ಕ್ಷೇಮಾಭಿವೃದ್ಧಿ ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಜನೇವರಿ ೧೫ ರಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಕರ್ನಾಟಕ ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗಿದ್ದು, ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಬೆರಳ ಏಣಿಕೆಯಷ್ಟು ಮಾತ್ರ ಜಯಂತಿಯನ್ನು ಆಚರಣೆ ಮಾಡಲಾಗಿದೆ, ಕಾರಣ ಇಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮೊರಮ್ಮನಳ್ಳಿ ಇವರ ನಿರ್ಲಕ್ಷ್ಯ ಮತ್ತು ಅಸಡ್ಡೆತನ ತೋರುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳು ಮತ್ತು ಶಿವರಾಜ ಎಸ್. ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮುದಾಯಕ್ಕೆ ಸೇರಿದ ಮಂತ್ರಿಗಳಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿಯೇ ಆಚರಣೆಯನ್ನು ಮಾಡದಿರುವುದು ವಿಪರ್ಯಾಸದ ಸಂಗತಿ. ಶ್ರೀ ಸಿದ್ದರಾಮೇಶ್ವರ ಜಯಂತಿಯ ಪೂರ್ವಭಾವಿ ಸಭೆಯನ್ನು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದಾಗ ಸಮಾಜದ ಗುರು-ಹಿರಿಯರು ಹಾಗೂ ಸಂಘಟನೆಯ ಮುಖಂಡರು ನೂರಾರು ಜನ ಸಭೆಯಲ್ಲಿ ಪಾಲ್ಗೊಂಡಿದ್ದರು.ಪೂರ್ವಭಾವಿ ಸಭೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಇವರು ಗೈರು ಹಾಜರಾಗಿ ನಿರ್ಲಕ್ಷ್ಯ ತೋರಿದ್ದಾರೆ. ಇದನ್ನು ಕೇಳಿದರೆ ನೂರಾರು ಜಯಂತಿಗಳು ಬರುತ್ತವೆ ಏನು ಮಾಡೊದು ರೀ ಎಂದು ಸಬೂಬು ನೀಡಿ ಸುಮ್ಮನಾಗುತ್ತರೆ,
ಜನೇವರಿ ೧೪ ರಂದು ಸ್ವತಃ ಸಂಘಟನೆಯ ಮುಖಂಡರು ಜನೇವರಿ ೧೫ ರಂದು ಜಿಲ್ಲಾಡಳಿತ ಭವನದಲ್ಲಿ ತಮ್ಮ ನೇತೃತ್ವದಲ್ಲಿ ಹಾಗೂ ಜಿಲ್ಲಾಡಳಿತದ ವತಿಯಿಂದ ಸಾಂಕೇತಿಕವಾಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಮಾಡಬೇಕೆಂದು ಫೋನ್ ಮೂಲಕ ತಿಳಿಸಿದರು ಕೂಡ ಆಚರಣೆ ಮಾಡದೇ ನಿರ್ಲಕ್ಷ್ಯ ತೋರಿ ಇಡೀ ಸಮಾಜಕ್ಕೆ ಅಪಮಾನವೇಸಗಿದ್ದಾರೆ ಆದ್ದರಿಂದ ನಿರ್ಲಕ್ಷ್ಯ ತೋರಿದ ಈ ಕೂಡಲೇ ಅಧಿಕಾರಿಯನ್ನು ಅಮಾನತ್ತುಗೋಳಿಸಬೇಕೆಂದು ಈ ಮೂಲಕ ಸಮಾಜದ ವತಿಯಿಂದ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಸಿದ್ಧರಾಮೇಶ್ವರ ( ಭೋವಿ) ಕ್ಷೇಮಾಭಿವೃದ್ಧಿ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಸುಣಗಾರ ಭೋವಿ, ಕಾರ್ಯಾಧ್ಯಕ್ಷ ಬಸವರಾಜ್ ಭೋವಿ, ಸಮಾಜದ ಮುಖಂಡರಾದ ಕಾವೇರಿ ರ‍್ಯಾಗಿ,ಯಮನೂರಪ್ಪ ಭೋವಿ ಮತ್ತೀತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!