WhatsApp Image 2026-08-23 at 4.31.56 PM

ಕುಷ್ಟಗಿ: ತಾಲೂಕಿನಲ್ಲಿ ಅದ್ಭುತವಾದ ಕಲಾವಿದರು ಇದ್ದು ರಾಜ್ಯಮಟ್ಟದಲ್ಲಿ ಹಾಡಿ ಪ್ರಶಸ್ತಿ ತೆಗೆದುಕೊಳ್ಳುವಂತಹ ಪ್ರತಿಭೆಗಳು ಕುಷ್ಟಗಿಯಲ್ಲಿ ಇದ್ದು ಅವರನ್ನು ಗುರುತಿಸಿ ಬೆಳಕಿಗೆ ತರುವ ಕಾರ್ಯಕ್ರಮವನ್ನು ಸೌರಭ ಸಾಂಸ್ಕೃತಿಕ ಕಲಾ ಬಳಗ ಇವತ್ತು ಮಾಡುತ್ತಿದ್ದು, ಸಮಾಜಮುಖಿ ಕಾರ್ಯದ ಜೊತೆಗೆ ಸಾಧಕರನ್ನು ಗುರುತಿಸಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಮಾಡುವಂತದ್ದು ನಿಜಕ್ಕೂ ಶ್ಲಾಘನೀಯ ಎಂದು ಚಲನಚಿತ್ರ ನಟರು ಹಾಗೂ ಕಿರುತೆರೆ ಕಲಾವಿದರು ಹಾಗೂ ಗಾಯಕ ಶಶೀಧರ ಕೋಟೆ ಹೇಳಿದರು.

ಇಲ್ಲಿನ ಕೊಪ್ಪಳ ರಸ್ತೆಯ ಸೌರಭ ಸಾಂಸ್ಕೃತಿಕ ಕಲಾ ಬಳಗ ಹಿರೇಮನ್ನಾಪೂರ ಇವರ ಸಹಯೋಗದೊಂದಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಗಾಯಕರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಿರೇಮನ್ನಾಪೂರ ಗ್ರಾಮದಲ್ಲಿ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಭರತ ನಾಟ್ಯ, ಜನಪದ ಸಂಗೀತ, ನಾಟಕ, ಕಲೆ ಸಾಹಿತ್ಯ ಸೇರಿದಂತೆ ಅನೇಕ ಸಾಧನೆ ಮಾಡಿದ ಸಾಧಕರು ಇಲ್ಲಿ ಇದ್ದು, ಇಂತಹ ಮಹನೀಯರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ಈ ಒಂದು ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಾದ ಕಾರ್ಯಕ್ರಮ. ಕುಷ್ಟಗಿ ಪಟ್ಟಣದಲ್ಲಿ ನಡೆಸಿ ವಿಶೇಷವಾಗಿ ಜಾತಿ ಬೇದವನ್ನು ತೋರದೆ ಇವತ್ತು ಸೌರಭ ಸಾಂಸ್ಕೃತಿಕ ಕಲಾ ಬಳಗ ಎಲೆಮರೆಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ನಂತರ ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ಸಾಹಿತಿ ಆರ್.ಕೆ. ಸುಬೇದಾರ್ ಮಾತನಾಡಿ ಈ ಸಂಸ್ಥೆಯ ಅಧ್ಯಕ್ಷರು ಜಾತಿಯಲ್ಲಿ ಮುಸ್ಲಿಂನಾದರು ಸಹ ಇಲ್ಲಿ ಜಾತಿಬೇದ ತೋರದೆ ಅವರಿವರನ್ನದೆ ಸರ್ವರನ್ನು ಒಂದುಗೂಡಿಸಿ ಸರ್ವರಿಗೂ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತದ್ದು ಸಣ್ಣ ವಿಷಯವಲ್ಲ. ಈ ಸೌರಭ ಸಾಂಸ್ಕೃತಿಕ ಕಲಾ‌ ಬಳಗ ಇನ್ನು ಹೆಚ್ಚು ಬೆಳೆಯಬೇಕಾಗಿದೆ. ಇಂತಹ ಸಂಘಗಳನ್ನು ಗುರುತಿಸಿ ಸರಕಾರ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಬೇಕು ಎಂದರು. ಈ ಸಂಸ್ಥೆ ಇನ್ನು ಹೆಚ್ಚು ಒಳ್ಳೆಯ ಕಾರ್ಯವನ್ನು ಮಾಡುವ ಮೂಲಕ ಸಮಾಜದ ಕಾರ್ಯವನ್ನು ಮಾಡಿ ಸಮಾಜದ ಮುಖ್ಯವಾಹಿನಿಗೆ ಬಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಆದರೆ ಇಂಥ ಸಂಸ್ಥೆಗಳು ಬೆಳೆಯಬೇಕಾದರೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು ಈ ಸಂಸ್ಥೆಯನ್ನು ಉಳಿಸಿ ಬೆಳೆಸುವಲ್ಲಿ ಸರ್ವರು ಸಹಕರಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ವೇದಮೂರ್ತಿ ಶ್ರೀ ಡಾ.ಕಾಡಯ್ಯ ಶಿವಮೂರ್ತಿ ಸ್ವಾಮಿಗಳು ದಿಗ್ಗೆವಾಡಿ ರಾಯಬಾಗ ತಾಲೂಕು ಬೆಳಗಾವಿ, ಡಾ. ಬಾಲಚಂದ್ರಪ್ಪನವರು ಧರ್ಮಾಧಿಕಾರಿಗಳು ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರ ಇವರು ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಆಶ್ರೀರ್ವಚನೆ ನೀಡಿದರು.

ಈ ಸಂದರ್ಭದಲ್ಲಿ ಸೌರಭ ಸಾಂಸ್ಕೃತಿಕ ಕಲಾ ಬಳಗ ಗೌರವ ಅಧ್ಯಕ್ಷ ಕೆ.ಹುಸೇನಸಾಬ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ, ಸೌರಭ ಸಾಂಸ್ಕೃತಿಕ ಕಲಾ ಬಳಗ ಸಂಘದ ಉಪಾಧ್ಯಕ್ಷ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಭೀಮಸೇನರಾವ್ ಕುಲಕರ್ಣಿ, ಬಾಷುಸಾಬ ಮುಜವರ್, ಶರಣಗೌಡ ಪೋಲಿಸ್ ಪಾಟೀಲ, ಸುನೀಲಕುಮಾರ ಮಧುಕರ್, ರಾಜ ಮೊಹಮ್ಮದ್ ಡಲಾಯತ್, ನಾಗರಾಜ, ಡಾ.ಕರ್ಣ, ಮಹೇಶ ಹಡಪದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!