ಸೋಮನಗೌಡ ಹೊಗರನಾಳಗೆ
“ಕಾಯಕ ಕಣ್ಮಣಿ ವೀರ” ರಾಜ್ಯ ಪ್ರಶಸ್ತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 08 – ನಗರದ ಸಮಾಜ ಸೇವಕ ಸೋಮನಗೌಡ ಹೊಗರನಾಳ ಇವರಿಗೆ ಕಾಯಕ ಕಣ್ಮಣಿ ವೀರ” 2024ರ ರಾಜ್ಯ ಪ್ರಶಸ್ತಿ ಲಭಿಸಿದೆ .
ಜಿಲ್ಲೆಯ ಗಂಗಾವತಿ ನಗರದ “ತುಳಸಿಬಾಯಿ ಥಾವರ್ಯನಾಯ್ಕ್ ಎಜುಕೇಶನ್ ಟ್ರಸ್ಟ್ ” ನವರು ಕೊಡುವ ಪ್ರಶಸ್ತಿ ಆಯ್ಕೆಯಾಗಿದ್ದು.
ಕೊಪ್ಪಳದಲ್ಲಿ ಎಲೆಮರಿ ಕಾಯಿಯಂತೆ ಹಲವಾರು ವರ್ಷಗಳಿಂದ ಸಮಾಜಿಕ ಸೇವೆ, ಕನ್ನಡ ಪರ ಹೋರಾಟ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೆಯಾದ ನಿಸ್ವಾರ್ಥ ಸೇವೆಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
” ಕಾಯಕ ಕಣ್ಮಣಿ ವೀರ” 2024ರ ರಾಜ್ಯ ಪ್ರಶಸ್ತಿಯನ್ನು ದಿನಾಂಕ : 09/03/2025 ರಂದು ಟ್ರಸ್ಟಿನ 12 ನೇ ವರ್ಷದ ವಾರ್ಷಿಕೋತ್ಸವ ವೇಧಿಕೆಯಲ್ಲಿ ನೀಡಿಗೌರವಿಸಲಾಗುವುದು ಎಂದು ತಿಳಿಸಿರುತ್ತಾರೆ.
ಹರ್ಷ: ಸೋಮನಗೌಡ ಹೊಗರನಾಳಗೆ ಕಾಯಕ ಕಣ್ಮಣಿ ವೀರ” ರಾಜ್ಯ ಪ್ರಶಸ್ತಿ ಲಭಿಸಿರುವುದಕ್ಕೆ ಅವರ ಸ್ನೇಹ ಬಳಗ ಸಂಘ-ಸಂಸ್ಥೆಗಳು ಅವರನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
